Published on: November 28, 2022
ಬಹುಪಯೋಗಿ ಪ್ರಾಣಿ ಯಾಕ್ (ಚಮರೀಮೃಗ)
ಬಹುಪಯೋಗಿ ಪ್ರಾಣಿ ಯಾಕ್ (ಚಮರೀಮೃಗ)
ಸುದ್ದಿಯಲ್ಲಿ ಏಕಿದೆ?
ಹಿಮಾಲಯ ಪ್ರದೇಶದ ಎತ್ತರದ ಪರ್ವತಗಳಲ್ಲಿ ಜೀವಿಸುವ ಬಹುಪಯೋಗಿ ಪ್ರಾಣಿ ಯಾಕ್ ಅನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಆಹಾರ ಪ್ರಾಣಿ ಎಂದು ಘೋಷಿಸಿದೆ.
ಮುಖ್ಯಾಂಶಗಳು
- ಅರುಣಾಚಲ ಪ್ರದೇಶ ಮೂಲದ ಐಸಿಎಆರ್-ರಾಷ್ಟ್ರೀಯ ಸಂಶೋಧನಾ ಕೇಂದ್ರ (ಐಸಿಎಆರ್ಎನ್) ಯಾಕ್ ಅನ್ನು ಆಹಾರ ಪ್ರಾಣಿ ಎಂದು ಘೋಷಿಸುವಂತೆ ಒತ್ತಾಯಿಸಿ 2021ರಲ್ಲಿ ಎಫ್ಎಸ್‌ಎಸ್ಎಐಗೆ ಪ್ರಸ್ತಾವ ಸಲ್ಲಿಸಿತ್ತು. ನಂತರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದ ಎಫ್‌ಎಸ್‌ಎಸ್‌ಎಐ ಈಗ ಯಾಕ್ ಆಹಾರ ಪ್ರಾಣಿ ಎಂದು ಘೋಷಿಸಿದೆ.
- ಹಿಮಾಲಯ ಪ್ರದೇಶದ ಪಶುಪಾಲಕ ಅಲೆಮಾರಿಗಳು ಚಮರೀಮೃಗಳನ್ನು ಕೃಷಿ ಚಟುವಟಿಕೆಗಳಿಗೂ ಬಳಸುತ್ತಾರೆ.
ಉದ್ದೇಶ
- ಎಫ್‌ಎಸ್‌ಎಸ್‌ಎಐ ಅನುಮೋದನೆಯು ವಾಣಿಜ್ಯ ಪಾಲನೆ ಮತ್ತು ಬಳಕೆಯ ಮೂಲಕ ದೇಶದಲ್ಲಿ ಯಾಕ್ ಉತ್ಪಾದನಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಚಮರೀಮೃಗಗಳ ಹಾಲು ಮತ್ತು ಮಾಂಸವನ್ನು ಬಳಕೆ ಮಾಡಬಹುದಾಗಿರುವುದರಿಂದ ಇನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಇವುಗಳ ಸಾಕಣೆಯಲ್ಲಿ ತೊಡಗುವ ಸಾಧ್ಯತೆ ಇದೆ. ಇದರಿಂದ ಅವುಗಳ ಸಂಖ್ಯೆ ವೃದ್ಧಿಯಾಗಲಿದೆ
- ಸಂತತಿ ಕಡಿಮೆಯಾಗಲು ಕಾರಣ “ಯಾಕ್ ಜನಸಂಖ್ಯೆಯು ಕಡಿಮೆಯಾಗುತ್ತಿರುವುದಕ್ಕೆ ಕಾರಣವೆಂದರೆ ಅದು ಕಡಿಮೆ ಪ್ರತಿಫಲ ನೀಡುತ್ತದೆ. ಈ ಪ್ರಾಣಿಗಳ ಹಾಲು ಡೈರಿ ಉದ್ಯಮದ ಭಾಗವಾಗಿಲ್ಲ ಮತ್ತು ಸ್ಥಳೀಯವಾಗಿ ಮಾತ್ರ ಸೇವಿಸಲಾಗುತ್ತದೆ. ಇದಕ್ಕೆ ದೊಡ್ಡ ಮಾರುಕಟ್ಟೆಯೂ ಇಲ್ಲ.
ಯಾಕ್ (ಚಮರೀಮೃಗ)
- ಉದ್ದ ಕೂದಲಿನ ಸಾಕು ಪ್ರಾಣಿಯಾಗಿದೆ.
- ಕುಟುಂಬ:ಅನಿಮಾಲಿಯಾ
- ಜಾತಿ: ಬೋವಿಡೆ
- ವೈಜ್ಞಾನಿಕ ಹೆಸರು: ಬೋಸ್ ಗ್ರುನಿಯನ್ಸ್
- ಎಲ್ಲೆಲ್ಲಿ ಕಾಣಸಿಗುತ್ತದೆ ಭಾರತೀಯ ಉಪಖಂಡದ ಹಿಮಾಲಯ ಪ್ರದೇಶದ ಉದ್ದಕ್ಕೂ, ಟಿಬೆಟಿಯನ್ ಪ್ರಸ್ಥಭೂಮಿ, ಉತ್ತರ ಮ್ಯಾನ್ಮಾರ್, ಯುನ್ನಾನ್, ಸಿಚುವಾನ್, ಗಿಲ್ಗಿಟ್-ಬಾಲ್ಟಿಸ್ತಾನ್ (ಕಾಶ್ಮೀರ್), ಉತ್ತರಕ್ಕೆ ಮಂಗೋಲಿಯಾ ಮತ್ತು ಸೈಬೀರಿಯಾ.
ಉಪಯೋಗ:
- ಯಾಕ್‌ಗಳನ್ನು ಕೃಷಿ, ಹಾಗೆಯೇ ಮಾಂಸ, ಚರ್ಮ ಮತ್ತು ಕೂದಲಿಗಾಗಿ ಬಳಸಲಾಗುತ್ತದೆ.
- ಮರಗಳಿಲ್ಲದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಯಾಕ್‌ನ ಒಣಗಿದ ಸಗಣಿಯು ಮಾತ್ರ ಸಿಗಬಹುದಾದ ಇಂಧನವಾಗಿದೆ.
- ಇದರ ಕೂದಲಿನಿಂದ ಹಗ್ಗ, ಟೆಂಟ್, ಹೊದಿಕೆಗಳನ್ನೂ ತಯಾರಿಸುತ್ತಾರೆ ಮತ್ತು ನೂಲು ತೆಗೆಯುತ್ತಾರೆ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)
- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ.
- FSSAI ಅನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ ಸ್ಥಾಪಿಸಲಾಗಿದೆ, ಇದು ಭಾರತದಲ್ಲಿ ಆಹಾರ ಸುರಕ್ಷತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಸಂಸ್ಥೆಯಾಗಿದೆ.
- ಸ್ಥಾಪನೆ: 5 ಸೆಪ್ಟೆಂಬರ್ 2008
- ವಿಭಾಗ: ಆಹಾರ ಸುರಕ್ಷತೆ
- ಪ್ರಧಾನ ಕಛೇರಿ: ನವದೆಹಲಿ
- ಪೋಷಕ ಸಂಸ್ಥೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ