Published on: January 24, 2023
ಬಹುರಾಜ್ಯ ಸಹಕಾರ ರಫ್ತು ಸಂಘ
ಬಹುರಾಜ್ಯ ಸಹಕಾರ ರಫ್ತು ಸಂಘ
ಸುದ್ದಿಯ್ಲಲಿ ಏಕಿದೆ? ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯಿದೆ 2002ರ ಅಡಿ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರ ರಫ್ತು ಸಂಘವನ್ನು ಸ್ಥಾಪಿಸಿ, ಉತ್ತೇಜನ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ಸಾವಯವ ಉತ್ಪನ್ನ, ಬಿತ್ತನ ಬೀಜ ಹಾಗೂ ರಫ್ತು ಉತ್ತೇ ಜಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರು ಸಹಕಾರ ಸಂಘಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
- ಇದಕ್ಕೆ ಸಂಬಂಧಿತ ಸಚಿವಾಲಯಗಳು ವಿಶೇಷವಾಗಿ ವಿದೇಶಾಂಗ ವ್ಯವಹಾರ ಮತ್ತು ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ‘ಸರ್ಕಾರದ ಸಂಪೂರ್ಣ ವಿಧಾನ ಅನುಸರಿಸುವ ಮೂಲಕ, ತಮ್ಮ ರಫ್ತು ಸಂಬಂಧಿತ ನೀತಿಗಳು, ಯೋಜನೆಗಳು ಮತ್ತು ಏಜೆನ್ಸಿಗಳ ಮೂಲಕ ಸಹಕಾರಿ ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳು ಉತ್ಪಾದಿಸುವ ಎಲ್ಲಾ ಸರಕುಗಳು ಮತ್ತು ಸೇವೆಗಳ ರಫ್ತುಗಳನ್ನು ಕೈಗೊಳ್ಳಲು ಬೆಂಬಲ ನೀಡಲಿವೆ.
ಉದ್ದೇಶ :
- ಪ್ರಸ್ತಾವಿತ ಅಥವಾ ಉದ್ದೇಶಿತ ಸೊಸೈಟಿಯು ಸರಕು ಮತ್ತು ಸೇವೆಗಳ ರಫ್ತುಗಳನ್ನು ಕೈಗೊಳ್ಳಲು ಮತ್ತು ಉತ್ತೇಜಿಸಲು ಆಶ್ರಯ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕಾರಿ ವಲಯದ ರಫ್ತಿಗೆ ಒತ್ತು ನೀಡುತ್ತದೆ. ಸಹಕಾರ ಸಂಘಗಳ ಬಲವರ್ಧನೆ ಹಾಗೂ ಅವುಗಳನ್ನು ಯಶಸ್ವಿ ಉದ್ಯಮಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
- ಸಹಕಾರ ವಲಯದಲ್ಲಿ ಉತ್ಪನ್ನಗಳ ರಫ್ತಿಗೆ ಇರುವ ಸಾಧ್ಯತೆಯ ಬಾಗಿಲು ತೆರೆಯಲು ರಾಷ್ಟ್ರೀಯ ಮಟ್ಟದಲ್ಲಿ ಬಹುರಾಜ್ಯ ಸಹಕಾರ ಸಂಘ ಅಸ್ತಿತ್ವಕ್ಕೆ ತರಲಾಗುತ್ತಿದೆ. ಸರ್ಕಾರದ ವಿವಿಧ ನೀತಿಗಳ ಲಾಭ ಪಡೆಯುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡುವುದು ಈ ಸಂಘದ ಉದ್ದೇ ಶವಾಗಿದೆ.
ಪ್ರಯೋಜನಗಳು
- ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಸಹಕಾರಿ ಸಂಸ್ಥೆಗಳ ರಫ್ತು ಸಾಮರ್ಥ್ಯವನ್ನು ಹೊರತರಲು, ಹೆಚ್ಚಿಸಲು ಸಹಾಯ ಮಾಡಲಿದೆ.
- ಈ ಉದ್ದೇಶಿತ ಸೊಸೈಟಿಯು ಸಹಕಾರಿಗಳಿಗೆ ವಿವಿಧ ರಫ್ತು ಸಂಬಂಧಿತ ಯೋಜನೆಗಳು ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳ ನೀತಿಗಳ ಪ್ರಯೋಜನಗಳನ್ನು ‘ಸಂಪೂರ್ಣ ಸರ್ಕಾರಿ ವಿಧಾನ’ದ ಮೂಲಕ ಎಲ್ಲರನ್ನೂ ಒಳಗೊಂಡ ಪ್ರಗತಿ ಮಾದರಿಯಲ್ಲಿ ಪಡೆಯಲು ಸಹಾಯ ಮಾಡುತ್ತದೆ.
- “ಸಹಕಾರ್-ಸೇ-ಸಮೃದ್ಧಿ”ಯ ಗುರಿ ಸಾಧಿಸಲು ಸಹ ಇದು ಸಹಾಯ ಮಾಡುತ್ತದೆ.
- ಸದಸ್ಯರು ತಮ್ಮ ಸರಕು ಮತ್ತು ಸೇವೆಗಳ ರಫ್ತಿಗೆ ಉತ್ತಮ ಬೆಲೆ ಪಡೆಯುವ ಜತೆಗೆ, ಸೊಸೈಟಿಯಲ್ಲಿ ಉತ್ಪತ್ತಿಯಾಗುವ ಲಾಭಾಂಶವನ್ನು ಸಹ ಪಡೆಯುತ್ತಾರೆ.
- ಉದ್ಯೋಗ ಸೃಷ್ಟಿ: ಪ್ರಸ್ತಾವಿತ ಸೊಸೈಟಿಯ ಮೂಲಕ ಮಾಡುವ ಹೆಚ್ಚಿನ ರಫ್ತುಗಳು ವಿವಿಧ ಹಂತಗಳಲ್ಲಿ ಸಹಕಾರಿಗಳಿಂದ ಸರಕು ಮತ್ತು ಸೇವೆಗಳ ಉತ್ಪಾದನೆ ಹೆಚ್ಚಿಸುತ್ತದೆ. ಇದರಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
- ಸರಕುಗಳ ಸಂಸ್ಕರಣೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೊಂದಿಕೆಯಾಗುವ ಸೇವೆಗಳನ್ನು ಹೆಚ್ಚಿಸುವುದರಿಂದ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
- ಸಹಕಾರಿ ಉತ್ಪನ್ನಗಳ ಹೆಚ್ಚಿನ ರಫ್ತು ವಹಿವಾಟಿನಿಂದ ಮೇಕ್ ಇನ್ ಇಂಡಿಯಾ ಉತ್ತೇಜಿಸುವ ಜತೆಗೆ, ಆತ್ಮನಿರ್ಭರ್ ಭಾರತ ಕಟ್ಟಲು ಕಾರಣವಾಗುತ್ತದೆ.
- ಬಹುರಾಜ್ಯ ಸಹಕಾರ ಸಂಘಗಳ (ಎಂಎಸ್ ಸಿಎಸ್) ಕಾಯಿದೆ, 2002 ಅಡಿ ನೋಂದಾಯಿಸಬಹುದು
ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳಿಂದ ಅಪೆಕ್ಸ್ ವರೆಗೆ: ಪ್ರಾಥಮಿಕ ಸಂಘಗಳು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಒಕ್ಕೂಟಗಳು ಮತ್ತು ಬಹುರಾಜ್ಯ ಸಹಕಾರ ಸಂಘಗಳು ಸೇರಿದಂತೆ ಪ್ರಾಥಮಿಕ ಸೊಸೈಟಿಗಳಿಂದ ಹಿಡಿದು ರಾಷ್ಟ್ರೀಯ ಮಟ್ಟದ ಸಹಕಾರ ಸಂಘಗಳು ಇದರ ಸದಸ್ಯರಾಗಬಹುದು. ಈ ಎಲ್ಲಾ ಸಹಕಾರಿಗಳು ಸೊಸೈಟಿ ಉಪನಿಯಮಗಳ (ಬೈಲಾ) ಪ್ರಕಾರ, ಸೊಸೈಟಿ ಆಡಳಿತ ಮಂಡಳಿಯಲ್ಲಿ ತಮ್ಮ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ. - ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ : ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪನೆಯಾಗಲಿರುವ ಬಹುರಾಜ್ಯ ಸಂಘವು ಸಾವಯವ ಉತ್ಪನ್ನಗಳ ಪೂರೈಕೆ ಸರಪಳಿ, ತಾಂತ್ರಿಕ ನೆರವು, ತರಬೇತಿ, ಸಾಮರ್ಥ್ಯ ವೃದ್ಧಿ ಹಾಗೂ ಪ್ರತ್ಯೇ ಕ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಚಟುವಟಿಕೆಗಳನ್ನು ನಿರ್ವಹಣೆ ಮಾಡಲಿದೆ. ವಿದೇಶಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ರಫ್ತು ಸಂಘದ ಜೊತೆ ಇದು ಕೆಲಸ ಮಾಡಲಿದೆ. ಸಾವಯವ ಉತ್ಪನ್ನಗಳ ಅಧಿಕ ಬೆಲೆಯ ಲಾಭವನ್ನು, ಅವುಗಳನ್ನು ಬೆಳೆಯುವ ರೈತರಿಗೂ ತಲುಪಿಸಲು ಸಂಘ ನೆರವಾಗಲಿದೆ.
- ಸಾಮಾನ್ಯ ಬೇಸಾಯದ ಪದ್ಧತಿ ಮತ್ತು ಸಾವಯುವ ಕೃಷಿ ಪದ್ಧತಿ ನಡುವೆ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ.
ಒಂದೇ ಬ್ರ್ಯಾಂ ಡ್ನಲ್ಲಿ ಬಿತ್ತನೆ ಬೀಜ
- ಬಿತ್ತನೆ ಬೀಜಕ್ಕೆ ಸಂಬಂಧಪಟ್ಟ ಬಹುರಾಜ್ಯ ಸಹಕಾರ ಸಂಘವು ರಾಷ್ಟ್ರೀ ಯ ಮಟ್ಟದಲ್ಲಿ ಸ್ಥಾಪನೆಯಾಗಲಿದೆ. ಬೀಜಗಳ ಉತ್ಪಾದನೆ, ಪ್ರಮಾಣೀಕರಣ, ಖರೀದಿ, ಸಂಗ್ರಹಣೆ, ಬ್ರ್ಯಾಂ ಡಿಂಗ್, ಪ್ಯಾಕೇಜಿಂಗ್, ವಿತರಣೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಇದು ಕೇಂದ್ರೀ ಯ ಸಂಸ್ಥೆಯ ರೀತಿ ಕೆಲಸ ಮಾಡಲಿದೆ. ದೇಸಿ ಬೀಜಗಳನ್ನು ಪ್ರೋ ತ್ಸಾಹಿಸುವ ಹಾಗೂ ಅವುಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಹೊಣೆಯನ್ನೂ ಈ ಸಂಘ ನಿರ್ವಹಿಸಲಿದೆ. ಸಹಕಾರ ಸಂಘಗಳ ಜಾಲವನ್ನು ಬಳಸಿಕೊಂಡು, ಒಂದೇ ಬ್ರ್ಯಾಂಡ್ನ ಅಡಿಯಲ್ಲಿ ಪ್ರಮಾಣೀಕೃತ ಬೀಜಗಳನ್ನು ಬಿತ್ತನೆಗೆ ಪೂರೈಸಲಾಗುತ್ತದೆ