Published on: October 1, 2021

ಬಾದಾಮಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ

ಬಾದಾಮಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ

ಸುದ್ಧಿಯಲ್ಲಿ ಏಕಿದೆ? 2021-22ನೇ ಸಾಲಿನ ಅಯವ್ಯಯ ಘೋಷಣೆಯನ್ವಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡ ನಗರದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

  • ಗುಳೇದಗುಡ್ಡ ನಗರದಲ್ಲಿ ನೇಕಾರರ ಜೀವನೋಪಾಯ ಉತ್ತೇಜಿಸಲು ಮತ್ತು ಸ್ಥಳೀಯವಾಗಿ ಉದ್ಯೋಗವಕಾಶಗಳನ್ನು ನೀಡಿ ಗುಳೇ ಹೋಗುವುದನ್ನು ತಡೆಗಟ್ಟಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಜವಳಿ ಪಾರ್ಕ್ ಪ್ರಾರಂಭಿಸಲಾಗುವುದು
  • ಜವಳಿ ಕ್ಷೇತ್ರದ ಎಲ್ಲಾ ಪಾಲುದಾರರು ವಿಶೇಷ ಉದ್ದೇಶದ ವಾಹನವನ್ನು (ಎಸ್‌ಪಿವಿ) ರಚಿಸುತ್ತಾರೆ, ಅದರ ಮೂಲಕ ಭೂಮಿಯನ್ನು ಅಭಿವೃದ್ಧಿಪಡಿಸಲಾಗುವುದು, ಮತ್ತು ಪಾರ್ಕ್‌ನಲ್ಲಿ ಘಟಕಗಳನ್ನು ಸ್ಥಾಪಿಸಿದ ನಂತರ, ಇಲಾಖೆಯು ಪ್ರೋತ್ಸಾಹಧನ ಮತ್ತು ಸಹಾಯಧನ ನೀಡುವ ಮೂಲಕ ಜವಳಿ ಕಾರ್ಮಿಕರನ್ನು ಬೆಂಬಲಿಸುತ್ತದೆ. ಜವಳಿ ಪಾರ್ಕ್ ಯುವ ಪೀಳಿಗೆಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ, ಅದೇ ಸಮಯದಲ್ಲಿ ಈ ವಲಯವನ್ನು ಉತ್ತೇಜಿಸುತ್ತದೆ