Published on: April 23, 2022

ಬಾಹ್ಯಾಕಾಶ ಇಟ್ಟಿಗೆ

ಬಾಹ್ಯಾಕಾಶ ಇಟ್ಟಿಗೆ

ಸುದ್ಧಿಯಲ್ಲಿ ಏಕಿದೆ?  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಯೋಗದೊಂದಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಂಶೋಧಕರು  ಮಂಗಳ ಗ್ರಹದಲ್ಲಿ ಕಟ್ಟಡದಂತಹ ರಚನೆಗಳನ್ನು ನಿರ್ಮಿಸಲು ಬಳಸಬಹುದಾದ “ಬಾಹ್ಯಾಕಾಶ ಇಟ್ಟಿಗೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಮುಖ್ಯಾಂಶಗಳು

  • ಇದರಿಂದ ಕೆಂಪು ಗ್ರಹದಲ್ಲಿ ಮಾನವ ನೆಲೆಸಲು ಅನುಕೂಲವಾಗುತ್ತದೆ.
  • ಮಂಗಳ ಗ್ರಹದ ಮಣ್ಣು, ಬ್ಯಾಕ್ಟಿರಿಯಾ ಮತ್ತು ಯೂರಿಯಾ ಒಳಗೊಂಡಂತೆ ಸಮರ್ಥನೀಯ ವಿಧಾನದಲ್ಲಿ ಇಟ್ಟಿಗೆ ತಯಾರಿಸಲಾಗಿದೆ.
  • ಪಿಎಲ್ಒಎಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಬಾಹ್ಯಾಕಾಶ ಇಟ್ಟಿಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ

ತಯಾರಿಸುವ ವಿಧಾನ

  • ಮಂಗಳ ಗ್ರಹದ ಮಣ್ಣು, ಸ್ಪೊರೊಸಾರ್ಸಿನಾ ಪಾಸ್ಟೂರಿ ಎಂದು ಕರೆಯುವ ಬ್ಯಾಕ್ಟಿರಿಯಾ, ಯೂರಿಯಾ ಮತ್ತು ನಿಕಲ್ ಕ್ಲೋರೈಡ್ ನನ್ನು ಬೆರೆಸಿ ಮೊದಲು ಸ್ಲರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಸ್ಲರಿಯನ್ನು ಯಾವುದೇ ಅಪೇಕ್ಷಿತ ಆಕಾರದ ಅಚ್ಚುಗಳಲ್ಲಿ ಸುರಿಯಬಹುದು ಮತ್ತು ಕೆಲವು ದಿನಗಳಲ್ಲಿ ಬ್ಯಾಕ್ಟೀರಿಯಾ ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಹರಳುಗಳಾಗಿ ಪರಿವರ್ತಿಸುತ್ತದೆ. ಈ ಹರಳುಗಳು ಸೂಕ್ಷ್ಮಜೀವಿಗಳಿಂದ ಸ್ರವಿಸುವ ಬಯೋಪಾಲಿಮರ್‌ಗಳೊಂದಿಗೆ, ಮಣ್ಣಿನ ಕಣಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಸಿಮೆಂಟ್ ಆಗಿ ಕಾರ್ಯನಿರ್ವಹಿಸುತ್ತವೆ.

ಅನುಕೂಲ

  • ಈ ವಿಧಾನದ ಅನುಕೂಲವೆಂದರೆ ಇದು ಇಟ್ಟಿಗೆ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
  • ರಂಧ್ರಗಳ ಜಾಗದಲ್ಲಿ ಒಳನುಸುಳುವ ಬ್ಯಾಕ್ಟೀರಿಯಾಗಳು ಕಣಗಳನ್ನು ಒಟ್ಟಿಗೆ ಬಂಧಿಸಲು ತಮ್ಮದೇ ಆದ ಪ್ರೋಟೀನ್‌ ಬಳಸುತ್ತವೆ, ಸಾಂದ್ರತೆಯನ್ನು ಕಡಿಮೆ ಮಾಡುತ್ತವೆ ಮತ್ತು ಬಲವಾದ ಇಟ್ಟಿಗೆಗಳಿಗೆ ಕಾರಣವಾಗುತ್ತದೆ.