Published on: December 22, 2022

ಬಿಎಫ್.7 ವೈರಸ್

ಬಿಎಫ್.7 ವೈರಸ್

ಸುದ್ದಿಯಲ್ಲಿ ಏಕಿದೆ? ಚೀನಾದಲ್ಲಿ ಸದ್ಯ ಹೆಚ್ಚುತ್ತಿರುವ   ಕೊರೊನಾ ವೈರಸ್ ಓಮಿಕ್ರಾನ್‌ ಹೊಸ ರೂಪಾಂತರಿ ತಳಿ ಬಿಎಫ್.7 ವೈರಾಣು ಭಾರತದಲ್ಲೂ ಪತ್ತೆಯಾಗಿದೆ.

ಮುಖ್ಯಾಂಶಗಳು

  • ಬಿಎಫ್‌.7 ವೈರಾಣುವಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲೇ ಪತ್ತೆಯಾಗಿತ್ತು
  • 2ನೇ ಪ್ರಕರಣ ಇದೀಗ ವಡೋದರಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಲ್ಲಿ ದೃಢಪಟ್ಟಿದೆ
  • ಬಿಎಫ್‌.7 ವೈರಾಣುವಿನ 3ನೇ ಪ್ರಕರಣ ಒಡಿಶಾ ರಾಜ್ಯದಲ್ಲಿ ಪತ್ತೆಯಾಗಿದೆ.
  • ಇದೇ ವೈರಾಣು ಚೀನಾ ಮಾತ್ರವಲ್ಲ, ಇತರ ದೇಶಗಳಲ್ಲೂ ಕಾಣ ಸಿಕ್ಕಿದೆ. ಅಮೆರಿಕ, ಬ್ರಿಟನ್, ಐರೋಪ್ಯ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಹಾಗೂ ಡೆನ್ಮಾರ್ಕ್‌ ದೇಶಗಳಲ್ಲೂ ಬಿಎಫ್‌.7 ವೈರಾಣು ಪತ್ತೆಯಾಗಿದೆ.

ಚೀನಾದಲ್ಲಿ ಹೆಚ್ಚಾಗಲು ಕಾರಣ :

  • ಚೀನಾ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ.
  • ಈ ಹಿಂದಿನ ವೈರಾಣುವಿನಿಂದ ಸೋಂಕಿಗೆ ಒಳಗಾದವರಿಗೆ ಓಮಿಕ್ರಾನ್ ಬಿಎಫ್‌.7 ವೈರಾಣು ಮಾರಣಾಂತಿಕವಾಗಿದ್ದು ಅತಿ ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ವೈರಾಉ ಹೊಂದಿದೆ.
  • ಚೀನಾದ ದೇಶೀಯ ಲಸಿಕೆ ಕೂಡಾ ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಿಲ್ಲ.

ಬಿಎಫ್‌.7

  • ಓಮಿಕ್ರಾನ್‌ನ ಬಿಎಫ್‌.7 ಉಪ ರೂಪಾಂತರಿಯು ಬಿಎ.5 ರೂಪಾಂತರಿಯಿಂದ ಉಗಮವಾಗಿದೆ ಎಂದು ತಿಳಿದು ಬಂದಿದೆ. ಇದು ಅತ್ಯಂತ ವೇಗವಾಗಿ ಹರಡುವ ಜೊತೆಗೆ ಸೋಂಕುಕಾರಕ ಗುಣ ಹೊಂದಿದೆ. ಮನುಷ್ಯನ ದೇಹ ಪ್ರವೇಶಿಸಿದ ಬಳಿಕ ಈ ವೈರಾಣು ಅತ್ಯಂತ ಕಡಿಮೆ ಅವಧಿಯಲ್ಲಿ ದ್ವಿಗುಣಗೊಳ್ಳಲು ಆರಂಭವಾಗುತ್ತದೆ. ಜೊತೆಗೆ ಮರು ಸೋಂಕಿಗೆ ಕಾರಣವಾಗುವ ಗುಣವೂ ಈ ವೈರಾಣುವಿನಲ್ಲಿದೆ.
  • ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಪರಿಷ್ಕೃತ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
  • ಆದಷ್ಟು ಬೇಗ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚೋದು,
  • ಜಿನೋಮ್ ಸೀಕ್ವೆನ್ಸಿಂಗ್ ನಡೆಸುವುದು.
  • ಸೋಂಕಿತರನ್ನು ಕ್ವಾರಂಟೈನ್ ಮಾಡೋದು ಹಾಗೂ ಸೂಕ್ತ ಚಿಕಿತ್ಸೆಯನ್ನು ನೀಡೋದರ ಕುರಿತಾಗಿ ಈ ಮಾರ್ಗಸೂಚಿಯಲ್ಲಿ ವಿವರಣೆ ನೀಡಲಾಗಿದೆ.
  • ಭಾರತವು ಕೋವಿಡ್ ಸೋಂಕಿನ ನಿರ್ವಹಣೆಗ 5 ಹಂತಗಳಲ್ಲಿ ಕ್ರಮ ವಹಿಸಲು ಮುಂದಾಗಿದೆ. ಪರೀಕ್ಷೆ – ಪತ್ತೆ – ಚಿಕಿತ್ಸೆ – ಲಸಿಕೆ ಹಾಗೂ ಕೋವಿಡ್ ಮಾರ್ಗಸೂಚಿ ಪಾಲನೆ. ಈ ಐದೂ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಕೋವಿಡ್ ಪ್ರಸರಣವನ್ನು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ.