Published on: July 5, 2024
ಬಿದಿರು ಥೀಮ್ ನ ಮೆಟ್ರೋ ನಿಲ್ದಾಣ
ಬಿದಿರು ಥೀಮ್ ನ ಮೆಟ್ರೋ ನಿಲ್ದಾಣ
ಸುದ್ದಿಯಲ್ಲಿ ಏಕಿದೆ? ಸಂಪೂರ್ಣ ಬಿದಿರಿನ ಅಲಂಕಾರ (ಬಂಬೂ ಥೀಮ್)ದ ಮೆಟ್ರೋ ರೈಲು ನಿಲ್ದಾಣ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇಂಥ ನಿಲ್ದಾಣ ದೇಶದಲ್ಲೇ ಮೊದಲನೆಯದಾಗಿದೆ.
ಮುಖ್ಯಾಂಶಗಳು
- ಮೆಟ್ರೋ ನಿಲ್ದಾಣ ನಿರ್ಮಿಸಲು ಬಂಬೂ ಸೊಸೈಟಿ ಆಫ್ ಇಂಡಿಯಾ (ಬಿಎಸ್ಐ) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್)ಗೆ ಪ್ರಸ್ತಾವನೆ ಸಲ್ಲಿಸಿದೆ.
- ನಿಲ್ದಾಣದ ತೆರೆದ ಪ್ರದೇಶಗಳು ಮತ್ತು ಅಲಂಕಾರಕ್ಕೆ ತ್ರಿಪುರಾದ ‘ಬಂಬುಸಾ ತುಲ್ಡಾ’ ಪ್ರಭೇದದ ಬಿದಿರನ್ನು ಬಳಸಲಾಗುವುದು
- ಮೆಟ್ರೋ ಟ್ರ್ಯಾಕ್‌ಗಳು ಮತ್ತು ನಿಲ್ದಾಣಗಳ ಕೆಳಗಿನ ಮಧ್ಯಭಾಗಗಳನ್ನು ಸ್ಥಳೀಯ ಮತ್ತು ಭಾರತೀಯ ಬಿದಿರನ್ನು ಬಳಸಿ ಹಸಿರೀಕರಣಗೊಳಿಸಲಾಗುವುದು
- ಭೂದೃಶ್ಯ, ತೆರೆದ ಪ್ರದೇಶ ಮತ್ತು ಕರಕುಶಲ ವಸ್ತುಗಳನ್ನು ಬಿದಿರಿನಿಂದ ಮಾಡಲಾಗುತ್ತದೆ. ಅಲ್ಲದೆ, ಬನ್ನೇರುಘಟ್ಟ ರಸ್ತೆಯಲ್ಲಿ ಜಯದೇವ ಆಸ್ಪತ್ರೆಯಿಂದ ಮೀನಾಕ್ಷಿ ದೇವಸ್ಥಾನದವರೆಗಿನ ಐದು ಕಿಲೋಮೀಟರ್ ಉದ್ದದ ಮೆಟ್ರೋ ಟ್ರ್ಯಾಕ್‌ಗಳು ಮತ್ತು ನಿಲ್ದಾಣಗಳ ಕೆಳಗೆ ಬಂಬುಸಾ ಮಲ್ಟಿಪ್ಲೆಕ್ಸ್‌ನಿಂದ ಹಸಿರೀಕರಣಗೊಳಿಸಲಾಗುವುದು
- ನಿಧಿ ನೆರವು: ಮೆಟ್ರೋ ನಿಲ್ದಾಣದ ಅಭಿವೃದ್ಧಿ ಮತ್ತು ಹಳಿಯ ಕೆಳಭಾಗದಲ್ಲಿನ ಹಸಿರೀಕರಣಕ್ಕೆ ಬಿಎಂಆರ್‌ಸಿಎಲ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ನೆರವು ಪಡೆಯಲು ಉದ್ದೇಶಿಸಲಾಗಿದೆ.