Published on: November 25, 2022
ಬಿಳಿ ಕತ್ತಿನ ರಣಹದ್ದು
ಬಿಳಿ ಕತ್ತಿನ ರಣಹದ್ದು
ಸುದ್ದಿಯಲ್ಲಿ ಏಕಿದೆ?
ನೇಪಾಳದಿಂದ ಕಣ್ಮರೆಯಾಗಿದ್ದ ಅಳಿವಿನಂಚಿನಲ್ಲಿರುವ ಅಪರೂಪದ ರಣಹದ್ದು ಬಿಹಾರದ ದರ್ಭಾಂಗ ಸಮೀಪದ ಪಕ್ಷಿಧಾಮವೊಂದರಲ್ಲಿ ಪತ್ತೆಯಾಗಿದೆ.
ಮುಖ್ಯಾಂಶಗಳು
- ಈ ರಣಹದ್ದಿನ ಮೇಲೆ ನಿಗಾ ಇರಿಸಲು ರೇಡಿಯೊ ಕಾಲರ್ ಕಟ್ಟಲಾಗಿತ್ತು. ಹೀಗಿರುವಾಗಲೂ ಅದು ತನ್ನ ಆವಾಸ ತಾಣದಿಂದ ಹಠಾತ್ ಕಣ್ಮರೆಯಾಗಿ ವಾರದ ಬಳಿಕ, ದರ್ಭಾಂಗ ಸಮೀಪ ಕಾಣಿಸಿಕೊಂಡಿದೆ.
- ಎಲ್ಲೆಡೆ ಅಳಿದು ಹೋಗಿರುವ ಈ ರಣಹದ್ದು ಸದ್ಯ ನೇಪಾಳದ ತನಹುನ್ ಜಿಲ್ಲೆಯಲ್ಲಿ ಮಾತ್ರ ಬೆರಳೆಣಿಕೆಯ ಸಂತತಿ ಉಳಿದಿದೆ.
- 2000ನೇ ಇಸ್ವಿಯಲ್ಲಿಯೇ ಇದು ತುಂಬ ಅಳಿವಿನ ಅಪಾಯದಲ್ಲಿರುವ ಪಕ್ಷಿ ಎಂದು ಘೋಷಣೆ ಮಾಡಲಾಗಿತ್ತು.
ಬಿಳಿ ಕತ್ತಿನ ರಣ ಹದ್ದಿನ ವಿವರ
- ಕುಟುಂಬ: ಅಸಿಪಿಟ್ರಿಡೆ
- ಜಾತಿ : ಜಿಪ್ಸ್
- ವೈಜ್ಞಾನಿಕ ಹೆಸರು : ಜಿಪ್ಸ್ ಬೆಂಗಾಲೆನ್ಸಿಸ್
- ಸಂತಾನಭಿವೃದ್ಧಿ: ಒಂದು ವರ್ಷದಲ್ಲಿ ಒಂದು ಮೊಟ್ಟೆಯನ್ನು ಇಡುತ್ತದೆ.
- ಸಂತಾನೋತ್ಪತ್ತಿ ಸಮಯ: ಅಕ್ಟೋಬರ್ ನಿಂದ ಮಾರ್ಚ್
- ಇದು ಜಿಪ್ಸ್ ಜಾತಿಯ ರಣಹದ್ದುಗಳಲ್ಲಿ ಚಿಕ್ಕದಾಗಿದೆ,
- ಈ ರಣಹದ್ದು ಸಾಮಾನ್ಯವಾಗಿ ಉತ್ತರ ಮತ್ತು ಮಧ್ಯ ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಆಗ್ನೇಯ ಏಷ್ಯಾದ ಮಾನವ ವಸತಿಗಳ ಬಳಿ ಎತ್ತರದ ಮರಗಳ ಮೇಲೆ ತನ್ನ ಗೂಡನ್ನು ನಿರ್ಮಿಸುತ್ತದೆ
ಜಾನುವಾರುಗಳ ಮಾಂಸವೇ ಇವುಗಳಿಗೆ ಕಂಟಕ
- ಮರ ಹಾಗೂ ಎತ್ತರದ ಶಿಖರ ಪ್ರದೇಶಗಳಲ್ಲಿ ಇವು ಸಂತಾನಭಿವೃದ್ಧಿಗೆ ಗೂಡುಕಟ್ಟುತ್ತವೆ. ದೊಡ್ಡ ಗಾತ್ರದ ರೆಕ್ಕೆ ಉಳ್ಳ ‘ವೈಟ್ ರಂಪ್’ಸಂತತಿ ನಶಿಸಲು ಮುಖ್ಯ ಕಾರಣ ಜಾನುವಾರುಗಳ ಮಾಂಸವೇ ಆಗಿರುವುದು ವಿಪರ್ಯಾಸ. ಕಾಲು-ಬಾಯಿ ರೋಗಕ್ಕೆ ಜಾನುವಾರುಗಳಿಗೆ ನೀಡುವ‘ಡೆಕ್ಲೋಫೆನಾಕ್’ ಔಷಧವೇ ಇದಕ್ಕೆ ವಿಷವಾಗಿ ಪರಿಣಮಿಸಿದೆ.
- ಈ ಔಷಧ ನೀಡಿದ ಜಾನುವಾರುಗಳು ಮೃತಪಟ್ಟಾಗ, ಅವುಗಳ ಮಾಂಸ ತಿನ್ನುವ ರಣಹದ್ದುಗಳೂ ಬದುಕುಳಿಯುವುದಿಲ್ಲ.
- ಡೆಕ್ಲೋಫೆನಾಕ್ ಪೀಡಿತ ಮಾಂಸ ತಿನ್ನುವ ಹದ್ದುಗಳ ಯಕೃತ್ ವಿಫಲಗೊಳ್ಳುವುದು ಸಂಶೋಧನೆಯಿಂದ ದೃಢಪಟ್ಟಿದೆ.