Published on: January 30, 2024
ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ
ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ
ಸುದ್ದಿಯಲ್ಲಿ ಏಕಿದೆ? ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕ್ನಲ್ಲಿ(ರೈಸಿನಾ ಹಿಲ್ಸ್) ‘ಬೀಟಿಂಗ್ ರೀಟ್ರೀಟ್’ ಕಾರ್ಯ ಕ್ರಮ ನಡೆಯಿತು . ಕಾರ್ಯ ಕ್ರಮದಲ್ಲಿ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಿಆರ್ಪಿಎಫ್ನ ಬ್ಯಾಂಡ್ಗಳು 31 ಭಾರತೀಯ ಗೀತೆಗಳನ್ನು ನುಡಿಸಿದವು.
ಬೀಟಿಂಗ್ ರಿಟ್ರೀಟ್ ಸಮಾರಂಭ
- ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರ ಮೊದಲು 1950 ರ ದಶಕದಲ್ಲಿ ಎಲಿಜಬೆತ್ II ಮತ್ತು ಪ್ರಿನ್ಸ್ ಫಿಲಿಪ್ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದಾಗ ಪ್ರಾರಂಭವಾಯಿತು.
- ಭಾರತೀಯ ಸೇನೆಯ ಪದಾತಿ ದಳವಾಗಿರುವ ಗ್ರೆನೇಡಿಯರ್ಸ್ ರೆಜಿಮೆಂಟ್ನ ಅಧಿಕಾರಿ ಮೇಜರ್ ಜಿ.ಎ.ರಾಬರ್ಟ್ಸ್ ಈ ಕಲ್ಪನೆಯನ್ನು ರೂಪಿಸಿದರು.
- ಭಾರತದಲ್ಲಿ, ಗಣರಾಜ್ಯೋತ್ಸವವು ಅಧಿಕೃತವಾಗಿ ಬೀಟಿಂಗ್ ರಿಟ್ರೀಟಿಂಗ್ ಸಮಾರಂಭದೊಂದಿಗೆ ಕೊನೆಗೊಳ್ಳುತ್ತದೆ.
- ಈ ಸಮಾರಂಭವನ್ನು ಪ್ರತಿ ವರ್ಷ ಜನವರಿ 29 ರಂದು ಗಣರಾಜ್ಯೋತ್ಸವದ ನಂತರ ಮೂರನೇ ದಿನ ನಡೆಸಲಾಗುತ್ತದೆ.
- ಸಮಾರಂಭದ ಸ್ಥಳವೆಂದರೆ ರೈಸಿನಾ ಹಿಲ್ಸ್ (ನವದೆಹಲಿಯಲ್ಲಿರುವ ಪ್ರದೇಶ, ಇದು ಭಾರತದ ರಾಷ್ಟ್ರಪತಿ ಭವನ ಸೇರಿದಂತೆ ಭಾರತ ಸರ್ಕಾರದ ಪ್ರಮುಖ ಕಟ್ಟಡಗಳನ್ನು ಹೊಂದಿದೆ).