Published on: October 19, 2022

ಬುಕರ್‌ ಪ್ರಶಸ್ತಿ

ಬುಕರ್‌ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ?

ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ  ಅವರ ಎರಡನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕೃತಿಗೆ 2022ನೇ ಸಾಲಿನ ಪ್ರತಿಷ್ಠಿತ ಬುಕರ್‌ ಪ್ರಶಸ್ತಿ ದೊರೆತಿದೆ.

ಮುಖ್ಯಾಂಶಗಳು

  • ಕರುಣತಿಲಕ ಅವರ ಈ ಕಾದಂಬರಿಯು 1990ರ ದಶಕದಲ್ಲಿ ಶ್ರೀಲಂಕಾ ಕಂಡ ಅತ್ಯಂತ ಕ್ರೂರ ಆಂತರಿಕ ಯುದ್ಧದಲ್ಲಿ ಕೊಲೆಯಾದ ಛಾಯಾಗ್ರಾಹಕ ಮಾಲಿ ಅಲ್ಮೇಡಾ ಅವರ ಕುರಿತಾದ, ಮಾಲಿ ಕೊಲೆಯ ನಂತರದ ತನಿಖೆಯ ರೋಚಕ ಕಥಾವಸ್ತುವನ್ನು ತೆರೆದಿಡುತ್ತದೆ.
  • ‘ದಿ ಸೆವೆನ್‌ ಮೂನ್ಸ್‌ ಆಫ್‌ ಮಾಲಿ ಅಲ್ಮೇಡಾ’ ಕಾದಂಬರಿಯನ್ನು ಇಂಡಿಪೆಂಡೆಂಟ್‌ ಪ್ರೆಸ್‌ ಸಾರ್ಟ್‌ ಆಫ್‌ ಬುಕ್ಸ್‌ ಪ್ರಕಟಿಸಿದೆ.
  • ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಕರುಣಾತಿಲಕ ಅವರು 50 ಸಾವಿರ ಪೌಂಡ್‌ (ರೂ. 46.50 ಲಕ್ಷ)  ನಗದು ಒಳಗೊಂಡ ಸಾಹಿತ್ಯ ಬಹುಮಾನ ಸ್ವೀಕರಿಸಿದ ಶ್ರೀಲಂಕಾ ಮೂಲದ ಎರಡನೇ ಕಾದಂಬರಿಕಾರ ಎನಿಸಿಕೊಂಡರು.
  • ಲಂಕಾ ಮೂಲದ ಕಾದಂಬರಿಕಾರ ಮೈಕೆಲ್‌ ಒಂಡಾಟ್ಜೆ ಅವರ ‘ದಿ ಇಂಗ್ಲಿಷ್‌ ಪೇಷೆಂಟ್‌’ ಕಾದಂಬರಿಗೆ   1992ರಲ್ಲಿ ಬುಕರ್‌ ಪ್ರಶಸ್ತಿ ಲಭಿಸಿತ್ತು.