Published on: October 23, 2021
‘ಬೂದು ಪಟ್ಟಿ’
‘ಬೂದು ಪಟ್ಟಿ’
ಸುದ್ಧಿಯಲ್ಲಿ ಏಕಿದೆ? ಭಯೋತ್ಪಾದಕರು ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ ಮುಂದುವರಿಸಲು ಹಣಕಾಸು ಕಾರ್ಯಪಡೆ ನಿರ್ಧರಿಸಿದೆ. ಜತೆಗೆ ಟರ್ಕಿಯನ್ನು ಕೂಡ ಈ ಪಟ್ಟಿಗೆ ಸೇರಿಸಲಾಗಿದೆ.
- 2019ರ ಕಾರ್ಯಯೋಜನೆ ಪ್ರಕಾರ, ವಿಶ್ವಸಂಸ್ಥೆ ನಿಷೇಧಿಸಿರುವ ಭಯೋತ್ಪಾದಕರು ಹಾಗೂ ಕಮಾಂಡರ್‌ಗಳ ವಿರುದ್ಧ ಭಯೋತ್ಪಾದನಾ ಹಣಕಾಸು ತನಿಖಾಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಪಾಕಿಸ್ತಾನ ಸಾಬೀತುಪಡಿಸಬೇಕಿದೆ.
- ಪಾಕಿಸ್ತಾನವು ಈಗಾಗಲೇ 34 ಕಾರ್ಯ ಅಂಶಗಳಲ್ಲಿ 30 ಅಂಶಗಳನ್ನು ಸಂಪೂರ್ಣಗೊಳಿಸಿದೆ. ಇದು ಪಾಕಿಸ್ತಾನ ಸರ್ಕಾರದ ಸ್ಪಷ್ಟ ಬದ್ಧತೆಯನ್ನು ತೋರಿಸುತ್ತದೆ. ಹೀಗಾಗಿ ಅದನ್ನು ಕಪ್ಪು ಪಟ್ಟಿಗೆ ಏರಿಸುವ ಬಗ್ಗೆ ಯಾವುದೇ ಚರ್ಚೆಗಳಾಗಿಲ್ಲ.
ಹಿನ್ನಲೆ
- ಪಾಕಿಸ್ತಾನದ ಆರ್ಥಿಕ ಚಟುವಟಿಕೆಗಳಲ್ಲಿ ಗಂಭೀರ ಅವ್ಯವಹಾರಗಳು ನಡೆದಿರುವುದನ್ನು ಏಷ್ಯಾ ಪೆಸಿಫಿಕ್ ಗುಂಪು ಕಂಡುಕೊಂಡ ಬಳಿಕ ಜೂನ್ ತಿಂಗಳಿನಿಂದಲೂ ಪಾಕಿಸ್ತಾನದ ಹಣಕಾಸು ವರ್ಗಾವಣೆಯಲ್ಲಿನ ಅಕ್ರಮಗಳ ಬಗ್ಗೆ ಎಫ್‌ಎಟಿಎಫ್ ಗಮನ ಹರಿಸಿತ್ತು.
ಪರಿಣಾಮ
- ಎಫ್‌ಎಟಿಎಫ್ ಬೂದು ಪಟ್ಟಿಯಲ್ಲಿ ಇರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಂತಹ ವಿವಿಧ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಸಹಾಯ ಪಡೆಯಲು ಪಾಕಿಸ್ತಾನಕ್ಕೆ ಅಡ್ಡಿಯಾಗಿದೆ. ಚೀನಾ, ಟರ್ಕಿ ಹಾಗೂ ಮಲೇಷ್ಯಾ ಪಾಕಿಸ್ತಾನವನ್ನು ಈ ಪಟ್ಟಿಯಿಂದ ಹೊರಗೆ ತರಲು ಪ್ರಯತ್ನಿಸುತ್ತಿವೆ. ಆದರೆ ನಿರೀಕ್ಷಿತ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ವಿಫಲವಾಗಿರುವುದರಿಂದ ಮುಂದಿನ ಏಪ್ರಿಲ್‌ವರೆಗೂ ಅದು ಬೂದು ಪಟ್ಟಿಯಲ್ಲಿ ಮುಂದುವರಿಯಲಿದೆ. ಟರ್ಕಿ, ಜೋರ್ಡಾನ್ ಮತ್ತು ಮಾಲಿ ದೇಶಗಳು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿವೆ.
ಹಣಕಾಸು ಕಾರ್ಯಪಡೆ (FATF)
- FATF ಒಂದು ಅಂತರ್ ಸರ್ಕಾರಿ ಸಂಸ್ಥೆ. ಹಣದ ದುರ್ಬಳಕೆ ಅನ್ನು ಎದುರಿಸಲು ನೀತಿಗಳನ್ನು ಅಭಿವೃದ್ಧಿಪಡಿಸಲು G7 ಗುಂಪಿನ ಉಪಕ್ರಮದ ನಂತರ ಇದನ್ನು 1989 ರಲ್ಲಿ ಸ್ಥಾಪಿಸಲಾಯಿತು. FATF ಆದೇಶವನ್ನು ಭಯೋತ್ಪಾದನೆ ಹಣಕಾಸನ್ನು ಒಳಗೊಳ್ಳಲು 2001 ರಲ್ಲಿ ವಿಸ್ತರಿಸಲಾಯಿತು, .
FATF ನ ಉದ್ದೇಶಗಳು
- ಮಾನದಂಡಗಳನ್ನು ಹೊಂದಿಸುವುದು ಮತ್ತು ಭಯೋತ್ಪಾದಕ ಹಣಕಾಸು, ಮನಿ ಲಾಂಡರಿಂಗ್ ಮತ್ತು ಇತರ ಸಂಬಂಧಿತ ಬೆದರಿಕೆಗಳನ್ನು ಎದುರಿಸಲು ನಿಯಂತ್ರಕ, ಕಾನೂನು ಮತ್ತು ಕಾರ್ಯಾಚರಣಾ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸುವುದು.
- ಈ ಪ್ರದೇಶಗಳಲ್ಲಿ ರಾಷ್ಟ್ರೀಯ ಶಾಸಕಾಂಗ ಮತ್ತು ನಿಯಂತ್ರಕ ಸುಧಾರಣೆಗಳನ್ನು ತರಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸುವುದು.