Published on: November 4, 2022
ಬೃಹತ್ ಹೂಡಿಕೆದಾರರ ನೆರವಿಗೆ ಪ್ರತ್ಯೇಕ ಪ್ರಾಧಿಕಾರ:
ಬೃಹತ್ ಹೂಡಿಕೆದಾರರ ನೆರವಿಗೆ ಪ್ರತ್ಯೇಕ ಪ್ರಾಧಿಕಾರ:
ಸುದ್ದಿಯಲ್ಲಿ ಏಕಿದೆ?
ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ತೊಡಕುಗಳನ್ನು ತ್ವರಿತಗತಿಯಲ್ಲಿ ನಿವಾರಿಸಿ, ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡುವ ‘ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ’ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ಈ ಪ್ರಾಧಿಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ (ಕೆಐಎಡಿಬಿ) ಪೂರಕವಾಗಿರುತ್ತದೆ. ಆರಂಭದಲ್ಲಿ ಕೆಐಎಡಿಬಿಯೇ ಉಸ್ತುವಾರಿ ವಹಿಸುತ್ತದೆ .
- ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ, ವಸಾಹತುಗಳ ಸ್ಥಾಪನೆ, ಅವುಗಳ ಕಾರ್ಯಾಚರಣೆ, ನಿಯಂತ್ರಣ, ನಿರ್ವಹಣೆಯನ್ನು ಪ್ರಾಧಿಕಾರವೇ ನೋಡಿಕೊಳ್ಳಲಿದೆ.
- ಎಲ್ಲೆಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಿದೆ ಎಂದು ಜಾಗವನ್ನು ಗುರುತಿಸುವ ಜವಾಬ್ದಾರಿಯನ್ನು ಪ್ರಾಧಿಕಾರಕ್ಕೇ ನೀಡಲಾಗುತ್ತದೆ.
- ಭೂಸ್ವಾಧೀನದಿಂದ ಹಿಡಿದು ತೆರಿಗೆ ನಿಗದಿ ಮತ್ತು ಸಂಗ್ರಹದವರೆಗೆ ಎಲ್ಲವನ್ನೂ ಪ್ರಾಧಿಕಾರವೇ ನೋಡಿಕೊಳ್ಳುತ್ತದೆ. ಆರಂಭದಲ್ಲಿ ತುಮಕೂರು ಮತ್ತು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪಿಸಲಾಗುವುದು
- ಪ್ರಾಧಿಕಾರ ಸಂಗ್ರಹಿಸಿದ ತೆರಿಗೆಯಲ್ಲಿ ಶೇ 30 ರಷ್ಟನ್ನು ಅಲ್ಲಿನ ಸ್ಥಳೀಯ ಸಂಸ್ಥೆಗೆ ಪಾವತಿ ಮಾಡಬೇಕಾಗುತ್ತದೆ.
ಉದ್ದೇಶ
- ಬಂಡವಾಳ ಹೂಡಿಕೆಗೆ ಇನ್ನೂ ಹಲವು ಅಡೆತಡೆಗಳು ಇವೆ. ಇದರಿಂದಾಗಿ ಹೂಡಿಕೆದಾರರಿಗೆ ತ್ವರಿತಗತಿಯಲ್ಲಿ ಅನುಮತಿ ಸಿಗುತ್ತಿಲ್ಲ. ಹೊಸ ಕಾಯ್ದೆಯಿಂದ ರಾಜ್ಯ ಮಟ್ಟದ ಪ್ರಾಧಿಕಾರವೊಂದನ್ನು ರಚಿಸಲಾಗುವುದು.
- ಅಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನಿರ್ದೇಶಕರೂ ಸದಸ್ಯರಾಗಿರುತ್ತಾರೆ. ಒಂದೇ ಕಡೆ ಒಪ್ಪಿಗೆ ಪಡೆಯಲು ಸಾಧ್ಯವಾಗುತ್ತದೆ.