Published on: November 17, 2022

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಸುದ್ದಿಯಲ್ಲಿ ಏಕಿದೆ? 

ಜಾಗತಿಕವಾಗಿ ಮಹತ್ವ ಪಡೆದಿರುವ 25ನೇ ಆವೃತ್ತಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬೆಂಗಳೂರು ಟೆಕ್ ಸಮ್ಮಿಟ್) ಪ್ರಧಾನಮಂತ್ರಿ ನರೇಂದ್ರಮೋದಿ ಅವರು ವರ್ಚುವಲ್‌ ಚಾಲನೆ ನೀಡಿದರು. 25ನೇ ಅವೃತ್ತಿಯ ಸಂಭ್ರಮಾಚರಣೆಯ ಪ್ರಯುಕ್ತ ‘ಸ್ಮರಣಾರ್ಥ ಫಲಕ’ವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.

ಮುಖ್ಯಾಂಶಗಳು

  • ಈ ಸಮಾವೇಶದಲ್ಲಿ ಕನಿಷ್ಠ 9 ಒಡಂಬಡಿಕೆಗಳಿಗೆ ಸಹಿ ಮಾಡಲಾಗುವುದು ಮತ್ತು 20 ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆ ಮಾಡಲಾಗುವುದು
  • ಇಎಸ್‌ಡಿಎಂ ಪರಿಸರ ವ್ಯವಸ್ಥೆಯಲ್ಲಿ ವೈವಿಧ್ಯಮಯ ಉತ್ಪನ್ನದಲ್ಲಿ ಹೆಸರು ಮಾಡಿರುವ ಕಂಪನಿಗಳು ಸುಮಾರು 36,804 ಕೋಟಿ ಮೊತ್ತದ ಹೂಡಿಕೆಯೊಂದಿಗೆ ಕರ್ನಾಟಕದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಉತ್ಸುಕವಾಗಿವೆ.
  • ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಆಚೆಗೆ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ‌ಮಾಡುತ್ತಿದೆ. ಇದಕ್ಕಾಗಿಯೇ ಆರು ಹೊಸ ನಗರಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
  • ಆಯೋಜಕರು: ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  ಕರ್ನಾಟಕ
  • ಸಹಯೋಗ : “ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ)
  • ಥೀಮ್‌ : ಟೆಕ್ ಫಾರ್ ನೆಕ್ಸ್ಟ್ ಜೆನ್

ಜ್ಞಾನ ನಗರ :

  • ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ಒಂದು ಸ್ಥಳವನ್ನು ಜ್ಞಾನ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುವುದು.

ಉದ್ದೇಶ

  • ಎಲೆಕ್ಟ್ರಾನಿಕ್ಸ್‌, ಐಟಿ, ಟೆಕ್‌, ಬಯೋಟೆಕ್‌ ಮತ್ತು ಸ್ಟಾರ್ಟಪ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ಭವಿಷ್ಯದ ಐಟಿ-ಬಿಟಿ ಕ್ಷೇತ್ರ ಹೇಗಿರಬೇಕೆಂಬ ಪರಿಕಲ್ಪನೆಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ..
  • ಗೋಷ್ಠಿ ವಿಷಯಗಳು: ಕೃತಕ ಬುದ್ಧಿಮತ್ತೆ, ಬಿಗ್‌ ಡೇಟಾ, ಸೆಮಿಕಂಡಕ್ಟರ್‌, ಮಷೀನ್‌ ಲರ್ನಿಂಗ್‌, 5 ಜಿ, ರೋಬೋಟಿಕ್ಸ್‌, ಫಿನ್‌ ಟೆಕ್‌, ಜೀನ್ ಎಡಿಟಿಂಗ್‌, ಮೆಡಿ ಟೆಕ್‌, ಸ್ಪೇಸ್‌ ಟೆಕ್‌, ಜೈವಿಕ ಇಂಧನ ಸುಸ್ಥಿರತೆ, ಇ–ಸಂಚಾರ ಮುಂತಾದವು.
  • ಭಾಗವಹಿಸುವ ದೇಶಗಳು:ಜಪಾನ್‌, ಫಿನ್ಲೆಂಡ್‌, ನೆದರ್ಲೆಂಡ್ಸ್, ಡೆನ್ಮಾರ್ಕ್‌, ಸ್ವೀಡನ್‌, ಸ್ವಿಟ್ಜರ್ಲೆಂಡ್‌, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕಾ, ಲಿಥುವೇನಿಯಾ, ಕೆನಡಾ ಮುಂತಾದವು.
  • ನವೋದ್ಯಮ ಪಾರ್ಕ್ :ಮುಂದಿನ ಆರು ತಿಂಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನವೋದ್ಯಮ ಪಾರ್ಕ್ ಸ್ಥಾಪಿಸಲಾಗುವುದು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃಷಿ ಸಂಬಂಧಿ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳ‌ ನವೋದ್ಯಮಗಳಿಗೂ ಈ ಪಾರ್ಕ್ ನಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು.

ಈ ಪಾರ್ಕನ್ನು ಸ್ಥಾಪಿಸುವ ಉದ್ದೇಶ

  • ಸ್ಟಾರ್ಟಪ್ ಪರಿಸರ ವ್ಯವಸ್ಥೆಗೆ ಮತ್ತು ಪರಿಸರ ಸ್ನೇಹಿ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರಗಳಿಗೆ ಹೆಚ್ಷಿನ ಉತ್ತೇಜನ ನೀಡುವುದು.
  • ಆರು ಹೊಸ ಹೈಟೆಕ್ ನಗರಗಳು : ಹುಬ್ಬಳ್ಳಿ, ಧಾರವಾಡ, ಮೈಸೂರು, ಮಧ್ಯ ಕರ್ನಾಟಕ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆರು ತಿಂಗಳ ಅವಧಿಯಲ್ಲಿ ನಿರ್ಮಿಸಲಾಗುವುದು. ಈ ನಗರಗಳು ರಾಜ್ಯದ ಅಭಿವೃದ್ಧಿಗೆ ಜ್ಞಾನ, ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳನ್ನು ಉತ್ತೇಜಿಸುತ್ತವೆ.