Published on: September 30, 2023

ಬೆನ್ನು ಕ್ಷುದ್ರಗ್ರಹದ ಮಾದರಿಗಳು

ಬೆನ್ನು ಕ್ಷುದ್ರಗ್ರಹದ ಮಾದರಿಗಳು

ಸುದ್ದಿಯಲ್ಲಿ  ಏಕಿದೆ? ಬೆನ್ನು’ ಕ್ಷುದ್ರಗ್ರಹ ಮಾದರಿಯನ್ನು ಹೊತ್ತು ತಂದ ‘ಒಸಿರಿಸ್‌- ರೆಕ್ಸ್‌’ ಎಂಬ ಬಾಹ್ಯಾಕಾಶ ನೌಕೆಯ ಕ್ಯಾಪ್ಸೂಲ್‌ 3 ವರ್ಷಗಳ ನಂತರ ಸುರಕ್ಷಿತವಾಗಿ ಭೂಮಿಯ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ.

ಮುಖ್ಯಾಂಶಗಳು

  • ಅಮೆರಿಕದ ‘ಯುಟ್ಹಾ’ದಲ್ಲಿನ ರಕ್ಷಣಾ ಇಲಾಖೆಗೆ ಸೇರಿದ ಮರುಭೂಮಿ ಮೇಲೆ ಕ್ಷುದ್ರಗ್ರಹದ ಮಾದರಿ ಹೊತ್ತ ಕ್ಯಾಪ್ಸೂಲ್‌ ಇಳಿದಿದೆ. 2 ವರ್ಷಗಳ ಪ್ರಯಾಣದ ಬಳಿಕ ಅಮೆರಿಕದ ನೆಲಕ್ಕೆ ಮರಳಿದೆ. ಇಲ್ಲಿಗೆ 7 ವರ್ಷಗಳ ಕಾರ್ಯಾಚರಣೆ ಪೂರ್ಣಗೊಂಡಿದೆ.
  • ‘ಬೆನ್ನು’ವಿನಲ್ಲಿನ ಕಲ್ಲು – ಮಣ್ಣುಗಳ ಮಾದರಿಯನ್ನು ಅಧ್ಯಯನಿಸಿ, ಸೌರವ್ಯೂಹದ ವಿಕಾಸವನ್ನು ತಿಳಿದು ಕ್ಷುದ್ರಗ್ರಹವನ್ನು ನಾಶಮಾಡುವ ಯೋಜನೆ ನಾಸಾಕ್ಕಿದೆ.

ಈ ಕ್ಷುದ್ರಗ್ರಹದ ಅಧ್ಯಯನಕ್ಕೆ ಕಾರಣಗಳು

  • ವಿಜ್ಞಾನಿಗಳಿಗೆ ಮೊದಲಿನಿಂದಲೂ ಗುರು ಮತ್ತು ಮಂಗಳ ನಡುವೆ ಇರುವ ಕ್ಷುದ್ರಗ್ರಹಗಳ ಮೇಲೆ ಭಯಾನಕ ಶಂಕೆ ಇದೆ. 65 ದಶಲಕ್ಷ ವರ್ಷಗಳ ಹಿಂದೆ ಭೂಮಿಗೆ ಬೃಹತ್‌ ಕ್ಷುದ್ರಗ್ರಹ ಅಪ್ಪಳಿಸಿ, ಡೈನೋಸಾರ್‌ ಸಹಿತ ಸಾಕಷ್ಟು ಜೀವಿಗಳು ಅಂತ್ಯವಾದವು ಎನ್ನುವುದು ವಿಜ್ಞಾನಿಗಳ ನಂಬಿಕೆ. ‘ಬೆನ್ನು’ ಕ್ಷುದ್ರಗ್ರಹದ ಮೇಲೆ ಇಂಥದ್ದೇ ಅನುಮಾನವಿದ್ದು, ಚಂದ್ರ, ಭೂಮಿಯ ಸರಳರೇಖೆಯಲ್ಲೇ ಬರುವ ‘ಬೆನ್ನು’ ಕ್ಷುದ್ರಗ್ರಹವು 200 ವರ್ಷಗಳ ಬಳಿಕ ಭೂಮಿಗೆ ಅಪ್ಪಳಿಸಲಿದೆ ಎಂಬ ಭಯ ಅಮೆರಿಕದ ನಾಸಾ ವಿಜ್ಞಾನಿಗಳಿಗೆ ಕಾಡುತ್ತಿದೆ.

ಉದ್ದೇಶ  

  • ಈ ಕ್ಷುದ್ರಗ್ರಹದ ಚಲನೆ, ವೇಗ, ಸೌರವ್ಯೂಹದ ವಿಕಾಸ, ಒಂದು ವೇಳೆ ಇದು ಭೂಮಿಯತ್ತ ಧಾವಿಸಿ ಬಂದರೆ, ನಡು ಹಾದಿಯಲ್ಲೇ ಬೆನ್ನುವನ್ನು ಹೊಡೆದು ಹಾಕಲು ಯಾವ ತಂತ್ರ ರೂಪಿಸಬೇಕ ಎಂಬ ಈ ಎಲ್ಲತಂತ್ರಗಳ ಅಧ್ಯಯನಮಾಡುವುದು.

‘ಬೆನ್ನು’ ಕ್ಷುದ್ರಗ್ರಹ

  • ಸೌರವ್ಯೂಹದ ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹವೇ ‘ಬೆನ್ನು’.
  • ಭೂಮಿಯಿಂದ 8.1 ಕೋಟಿ ಕಿಮೀ ದೂರದಲ್ಲಿದೆ
  • ಕ್ಷುದ್ರಗ್ರಹವೆಂದರೆ ಅದು ಬಂಡೆಕಲ್ಲೇ ಇದ್ದಿರಬಹುದು ಎಂಬ ವಿಜ್ಞಾನಿಗಳ ಊಹೆಯು 2020ರಲ್ಲಿ ಈ ನೌಕೆ ಇಳಿದಾಗ ಗ್ರಹಿಕೆ ತಪ್ಪಾಗಿತ್ತು. ವಿಜ್ಞಾನಿಗಳು ನಿರೀಕ್ಷಿಸಿದ್ದಷ್ಟು ‘ಬೆನ್ನು’ವಿನ ಮೇಲ್ಮೈ ಗಟ್ಟಿಯಾಗಿರಲಿಲ್ಲ. ಮೃದು ಸ್ವರೂಪದಲ್ಲಿತ್ತು.

ಒರಿಜಿನ್ಸ್ , ಸ್ಪೆಕ್ಟ್ರಲ್  ಇಂಟರ್ಪ್ರಿಟೇಶನ್ , ರಿಸೋರ್ಸ್  ಐಡೆಂಟಿಫಿಕೇಷನ್ , ಆಂಡ್  ಸೆಕ್ಯೂರಿಟಿ -ರೇಗೋಲಿತ್  ಎಕ್ಸ್ಪ್ಲೋರರ್  (‘ಒಸಿರಿಸ್‌-ರೆಕ್ಸ್‌’) ನೌಕೆ

  • ಉಡಾವಣೆ : ನಾಸಾ 2016ರಲ್ಲಿ
  • ‘ಒಸಿರಿಸ್‌- ರೆಕ್ಸ್‌’ ನೌಕೆ ಇಳಿದ ಜಾಗಕ್ಕೆ ನಾಸಾ ‘ನೈಟಿಂಗೇಲ್‌’ ಎಂದು ಹೆಸರಿಟ್ಟಿದೆ.
  • ಮಾದರಿ ಸಂಗ್ರಹಿಸಿ, 2021ರಲ್ಲಿ ಹಿಂತಿರುಗುವ ಹೊತ್ತಿಗೆ ಅಲ್ಲಿ 26 ಅಡಿ ಅಗಲದ ಹೊಸ ಕುಳಿ ನಿರ್ಮಾಣವಾಗಿತ್ತು.
  • ಕ್ಯಾಪ್ಸುಲ್‌ 250 ಗ್ರಾಂ. ಶಿಲಾ ಮಾದರಿಯನ್ನು ಹೊತ್ತು ತಂದಿದೆ.
  • 5 ಶತಕೋಟಿ ವರ್ಷಗಳ ಹಿಂದೆ ಗ್ರಹಗಳ ರಚನೆಯ ಬಗೆಗಿನ ಮಾಹಿತಿ ಇದರ ಸಂಶೋಧನೆಯಿಂದ ಲಭ್ಯವಾಗುವ ನಿರೀಕ್ಷೆಯಿದೆ.
  • ಇದು ಮರುಬಳಕೆಯ ನೌಕೆಯಾಗಿದೆ. ‘ಒಸಿರಿಸ್‌-ರೆಕ್ಸ್‌’ ಪ್ರಸ್ತುತ ‘ಅಪೋಫಿಸ್‌’ ಎಂಬ ಮತ್ತೊಂದು ಕ್ಷುದ್ರಗ್ರಹದತ್ತ ಮುನ್ನಡೆದಿದೆ. 2029ರಲ್ಲಿ ಇದು ‘ಅಪೋಫಿಸ್‌’ ಕ್ಷುದ್ರಗ್ರಹದಲ್ಲಿ ಸಾಫ್ಟ್‌ ಲ್ಯಾಂಡ್‌ ಕಂಡು, ಅಲ್ಲಿಂದಲೂ ಮಾದರಿ ಸಂಗ್ರಹಿಸಿ, ಭೂಮಿಯತ್ತ ಮರಳುವ ನಿರೀಕ್ಷೆಯನ್ನು ನಾಸಾ ಹೊಂದಿದೆ.