Published on: June 14, 2022

ಬೇಡ್ತಿ–ವರದಾ ಜೋಡಣೆ:

ಬೇಡ್ತಿ–ವರದಾ ಜೋಡಣೆ:

ಸುದ್ದಿಯಲ್ಲಿ ಏಕಿದೆ?

ಪಶ್ಚಿಮ ಘಟ್ಟವನ್ನು ಸಮೃದ್ಧವಾಗಿಡುವ ಪ್ರಮುಖ ನದಿಗಳು ಬೇಡ್ತಿ ಹಾಗೂ ವರದಾ. ಈ ನದಿಗಳ ನೀರನ್ನು ಬಿಸಿಲನಾಡಿನ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ‘ರಾಷ್ಟ್ರೀಯ ಜಲಮೂಲ ಅಭಿವೃದ್ಧಿ ಏಜೆನ್ಸಿ’ (ಎನ್.ಡಬ್ಲ್ಯು.ಡಿ.ಎ.) ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ

ಮುಖ್ಯಾಂಶಗಳು 

  • 2021ರ ಬಜೆಟ್‍ನಲ್ಲಿ ಡಿ.ಪಿ.ಆರ್.ಸಿದ್ಧಪಡಿಸಲು ಅನುದಾನ ಮೀಸಲಿಡಲಾಗಿತ್ತು.ಈಚೆಗೆ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆಯಾಗಿದೆ. ಇದನ್ನು ಆಧರಿಸಿ ಸರ್ಕಾರ ಶೀಘ್ರವೇ ಯೋಜನೆ ಜಾರಿಗೆ ತರಬಹುದು ಎಂಬ ಆತಂಕ ಜಿಲ್ಲೆಯಲ್ಲಿ ಮನೆಮಾಡಿದೆ.

ಉದ್ದೇಶ

  • ‘ತುಂಗಭದ್ರಾ ಎಡದಂಡೆ ಯೋಜನಾ ಪ್ರದೇಶವಾದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ನೀರನ್ನು ಒಯ್ಯುವುದು ಯೋಜನೆಯ ಉದ್ದೇಶ.

ಏನಿದು ಯೋಜನೆ?

  • ಕೇಂದ್ರ ಸರ್ಕಾರದ ಜಲ ನೀತಿ ಅನ್ವಯ ಗಂಗಾ ಕಾವೇರಿ ನದಿ ಜೋಡಣೆಯ ಭಾಗವಾಗಿ ಬೇಡ್ತಿ – ವರದ ನದಿ ಜೋಡಣೆಯ ಪ್ರಸ್ತಾಪವಾಗಿದೆ. ಮಲೆನಾಡಿನ ದಟ್ಟ ಕಾಡಿನ ನಡುವೆ ಹರಿಯುವ ಬೇಡ್ತಿ ಮತ್ತು ಉಪನದಿಗಳಿಗೆ ಆಣೆಕಟ್ಟು ಕಟ್ಟಿ ವರದ ನದಿ ಮೂಲಕ ಬಯಲುಸೀಮೆ ಜಿಲ್ಲೆಗಳಿಗೆ ನೀರು ಸಾಗಿಸುವ ಬ್ರಹುತ್ ಯೋಜನೆ ಇದಾಗಿದೆ.ಆ ಭಾಗದ ಕುಡಿಯುವ ನೀರು ಮತ್ತು ಕೃಷಿ ಬೆಳೆಗಳಿಗೆ ನೀರಾವರಿ ಸೌಲಭ್ಯ ತಲುಪಿಸುವ ಗುರಿಯಾಗಿದೆ.

ಎಲ್ಲಿದೆ ಬೇಡ್ತಿ ನದಿ?

  • ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿ ಯಲ್ಲಾಪುರ ಮತ್ತು ಶಿರಸಿ ಭಾಗದಲ್ಲಿ ಉಪನದಿಗಳನ್ನು ಕೂಡಿಕೊಂಡು ಅಂಕೋಲಾ ತಾಲೂಕು ಪ್ರವೇಶಿಸಿ ಗಂಗಾವಳಿ ನದಿಯಾಗಿ ಆರಭಿ ಸಮುದ್ರವನ್ನು ಸೇರುತ್ತದೆ.
  • ಬೇಡ್ತಿ ನದಿ ತಾಣಗಳು: ಮಾಗೋಡು ಜಲಪಾತ, ಶಾಲ್ಮಲಾ ಉಪನದಿಯ ಸಹಸ್ರಲಿಂಗ ಸೇರಿ ವಿಶಿಷ್ಟ ತಾಣಗಳನ್ನು ಬೇಡ್ತಿ ಕಣಿವೆ ಹೊಂದಿದೆ.

ಪರಿಸರ ತಜ್ಞರ ಅಭಿಪ್ರಾಯ

  • ‘ನದಿ ನೀರನ್ನು ತಿರುಗಿಸಿ ಒಯ್ಯುವ ಯೋಜನೆ ನಿಷ್ಪ್ರಯೋಜಕ ಎಂಬುದು ಎತ್ತಿನ ಹೊಳೆ ಯೋಜನೆಯಿಂದ ಮನದಟ್ಟಾಗಿದೆ. ಆದರೂ ಸರ್ಕಾರ ಸಾವಿರಾರು ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಂಡು ಸೂಕ್ಷ್ಮ ಪರಿಸರಕ್ಕೆ ಕುತ್ತು ತರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎನ್ನುತ್ತಾರೆ.
  • ಸ್ಥಳ ಸಮೀಕ್ಷೆ ನಡೆಸದೆ ಕೇವಲ ನಕ್ಷೆ, ಮಳೆಯ ಅಂಕಿ–ಅಂಶ ಆಧರಿಸಿ ಸಿದ್ಧಪಡಿಸಿದ ಡಿ.ಪಿ.ಆರ್. ಅವೈಜ್ಞಾನಿಕವಾಗಿದೆ. ಅರಣ್ಯ ಭೂಮಿ, ಕೃಷಿಭೂಮಿ ನಾಶದ ಕುರಿತು ನಿಖರ ಮಾಹಿತಿಯನ್ನೂ ಒಳಗೊಂಡಿಲ್ಲ’ ಎಂದು ಪರಿಸರ ತಜ್ಞರು ದೂರಿದ್ದಾರೆ. ಆ ಭಾಗದಲ್ಲಿ ಅತಿ ನೀರಾವರಿಯಿಂದಾಗಿ ಹೊಲಗಳು ಜವುಳಾಗಿದೆ. ಕ್ಷಾರತೆ ಹೆಚ್ಚಿ, ಫಲವತ್ತತೆ ಕಳೆದುಕೊಂಡು ನಿಷ್ಪ್ರಯೋಜಕವಾಗುತ್ತಿದೆ.
  • ‘ನದಿ ಜೋಡಣೆ ಯೋಜನೆಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.ನದಿ ನೀರನ್ನು ಸಾಗಿಸಲು ಪಶ್ಚಿಮಘಟ್ಟದ ಪರ್ವತಗಳಿಗೆ ಕೊರೆಯುವ ಸುರಂಗದಿಂದ ಭೂಕುಸಿತ ಹೆಚ್ಚಲಿದೆ. ಸೂಕ್ಷ್ಮ ಅರಣ್ಯನಾಶ, ವನ್ಯಜೀವಿಗಳಿಗೆ ನೆಲೆ ಇಲ್ಲದಂತಾಗಲಿದೆ.