Published on: May 11, 2024
ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ
ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ
- ಸುದ್ದಿಯಲ್ಲಿ ಏಕಿದೆ? ಬೋಯಿಂಗ್‌ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ಕ್ಕೆ ಇಬ್ಬರು ನಾಸಾ ಗಗನಯಾತ್ರಿಗಳನ್ನು ಅಟ್ಲಾಸ್ V ರಾಕೆಟ್‌ನಲ್ಲಿ ಉಡಾವಣೆಯಾಗಲಿದೆ.
ಮುಖ್ಯಾಂಶಗಳು
- ಇದೇ ಮೊದಲ ಬಾರಿಗೆ ಸ್ಟಾರ್‌ಲೈನರ್ ಗಗನಯಾತ್ರಿಗಳನ್ನು ಹೊತ್ತೊಯ್ಯುವ ತನ್ನ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದೆ.
- ಇಬ್ಬರು ನಾಸಾ ಗಗನಯಾತ್ರಿಗಳು ಬ್ಯಾರಿ “ಬುಚ್” ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್
- ಈ ಯೋಜನೆ ಯಶಸ್ವಿಯಾದರೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮಾನವ ಸಹಿತ ನೌಕೆ ಕಳುಹಿಸಿದ ಎರಡನೇ ಖಾಸಗಿ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೋಯಿಂಗ್ ಸಂಸ್ಥೆ ಪಾತ್ರವಾಗಲಿದೆ.
- ಎಲಾನ್ ಮಸ್ಕ್ ಅವರ ‘ಸ್ಪೇಸ್ಎಕ್ಸ್’ ಸಂಸ್ಥೆ ಈ ಮೊದಲು ಐಎಸ್ಎಸ್ ಗೆ ಗಗನನೌಕೆ ಉಡಾವಣೆ ಮಾಡಿತ್ತು.
ಬೋಯಿಂಗ್‌ನ ಸ್ಟಾರ್‌ಲೈನರ್
- ಬೋಯಿಂಗ್‌ನ ಸ್ಟಾರ್‌ಲೈನರ್ ಅನ್ನು CST-100 (ಸಿಬ್ಬಂದಿ ಬಾಹ್ಯಾಕಾಶ ಸಾರಿಗೆ) ಎಂದೂ ಕರೆಯಲಾಗುತ್ತದೆ.
- ಇದು ಎರಡು ಮಾಡ್ಯೂಲ್‌ಗಳನ್ನು ಒಳಗೊಂಡಿದೆ:
ಸಿಬ್ಬಂದಿ ಮಾಡ್ಯೂಲ್: ಪ್ರಯಾಣದ ಸಮಯದಲ್ಲಿ ಗಗನಯಾತ್ರಿಗಳು ಇರುತ್ತಾರೆ.
ಸೇವಾ ಮಾಡ್ಯೂಲ್: ಈ ಭಾಗವು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳಿಗೆ ವಿದ್ಯುತ್, ಪ್ರೊಪಲ್ಷನ್ (ಚಲನೆ), ತಾಪಮಾನ ನಿಯಂತ್ರಣ, ಗಾಳಿ ಮತ್ತು ನೀರನ್ನು ಒದಗಿಸಲು ನಿರ್ಮಾಣ ಮಾಡಲಾಗಿದೆ.
- ಉದ್ದೇಶ: ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶದಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷಿಸಲು ಕಳುಹಿಸಲಾಗುತ್ತಿದೆ.
- ಭೂಮಿಗೆ ಹಿಂದಿರುಗುವ ಮೊದಲು ಸುಮಾರು 10 ದಿನಗಳ ಕಾಲ ಅಲ್ಲಿಯೇ ಇರುತ್ತದೆ.
- ಮಿಷನ್ ಸಮಯದಲ್ಲಿ ಗಗನಯಾತ್ರಿಗಳು ಹೊಸ ಬಾಹ್ಯಾಕಾಶ ಸೂಟ್(ಧಿರಿಸು)ಗಳನ್ನು ಪರೀಕ್ಷಿಸುತ್ತಾರೆ.
- ಈ ನೀಲಿ ಸೂಟ್‌ಗಳು ಮೊದಲಿನವುಕ್ಕಿಂತ ಸುಮಾರು 40% ಹಗುರವಾಗಿವೆ