Published on: May 7, 2024

ಬ್ಯಾಗ್ ಲೆಸ್ ಸ್ಕೂಲ್’ ದಿನ

ಬ್ಯಾಗ್ ಲೆಸ್ ಸ್ಕೂಲ್’ ದಿನ

ಸುದ್ದಿಯಲ್ಲಿ ಏಕಿದೆ? ಮಧ್ಯಪ್ರದೇಶ ಸರ್ಕಾರವು ಇತ್ತೀಚೆಗೆ ‘ಬ್ಯಾಗ್ಲೆಸ್ ಸ್ಕೂಲ್’ ದಿನ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ.

ಮುಖ್ಯಾಂಶಗಳು

  • ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ‘ಬ್ಯಾಗ್ಲೆಸ್ ಸ್ಕೂಲ್’ ದಿನವನ್ನು ನಿಗದಿಪಡಿಸಲಾಗಿದ್ದು, 2024-25ರ ಶೈ ಕ್ಷಣಿಕ ವರ್ಷದಿಂದ ಜಾರಿಯಾಗಲಿದೆ.
  • ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸಲು ವಿವಿಧ ತರಗತಿಗಳ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲಾ ಬ್ಯಾಗ್ಗಳಿಗೆ ಸಂಬಂಧಿಸಿದಂತೆ ಗರಿಷ್ಠ ತೂಕವನ್ನು ನಿಗದಿಪಡಿಸಿದೆ.

ಉದ್ದೇಶ

ಶಾಲಾ ಮಕ್ಕಳ ಒಟ್ಟು ಬೆಳವಣಿಗೆಯಲ್ಲಿ ಶಾಲಾ ಬ್ಯಾಗ್ಗಳ ತೂಕದ ಪಾತ್ರವು ಮುಖ್ಯವಾಗಿದೆ. ಶೈಕ್ಷಣಿಕ ಸಾಮಗ್ರಿಗಳನ್ನು ಕೊಂಡೊಯ್ಯಲು ಬ್ಯಾಗ್ ಅಗತ್ಯವಾಗಿದ್ದರೂ ಅತಿ ತೂಕದ ಬ್ಯಾಗ್ಗಳನ್ನು ಹೊರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರಿಂದ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶವನ್ನು ಹೊಂದಿದೆ.

ಮಾರ್ಗಸೂಚಿ

ಮಾರ್ಗಸೂಚಿಗಳ ಪ್ರಕಾರ, 1 ಮತ್ತು 2ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗುಗಳು 1.6 ರಿಂದ 2.2 ಕೆಜಿ ತೂಕವನ್ನು ಮೀರಬಾರದು.  3 ರಿಂ ದ 5ನೇ ತರಗತಿಯಲ್ಲಿರುವವರ ಬ್ಯಾಗ್ಗಳ ತೂಕ 1.7-2.5 ಕೆಜಿಗೆ ಮಿತಿಗೊಳಿಸಬೇಕು. 6 ಮತ್ತು 7ನೇ ತರಗತಿಯ ವಿದ್ಯಾರ್ಥಿ ಗಳಿಗೆ, 2-3 ಕೆಜಿ ಮತ್ತು 8ನೇ ತರಗತಿಯಲ್ಲಿರುವವರಿಗೆ 2.5ರಿಂದ 4 ಕೆಜಿಯಷ್ಟು ಭಾರ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಶಾಲಾಚೀಲಗಳು 2.5 ರಿಂದ 4.5 ಕೆ.ಜಿಗಳಷ್ಟೇ ಇರಬೇಕೆಂದು ಅನುಮತಿಸಲಾಗಿದೆ.

ನಿಮಗಿದು ತಿಳಿದಿರಲಿ

2023 ರಲ್ಲಿ ಕರ್ನಾಟಕ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಬ್ಯಾಗ್ ರಹಿತವಾಗಿ ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ’ ಕಾರ್ಯಕ್ರಮ ಜಾರಿಗೊಳಿಸಿದೆ.