Published on: July 16, 2023

ಬ್ಯಾಸ್ಟಿಲ್ ಡೇ-ಪರೇಡ್‌

ಬ್ಯಾಸ್ಟಿಲ್ ಡೇ-ಪರೇಡ್‌

ಸುದ್ದಿಯಲ್ಲಿ ಏಕಿದೆ? ಪ್ಯಾರಿಸ್‌ನಲ್ಲಿ ಜುಲೈ 14 ರಂದು   ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರೆಂಚ್ ರಾಷ್ಟ್ರೀಯ ದಿನ- ಬ್ಯಾಸ್ಟಿಲ್ ಡೇ- ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮುಖ್ಯಾಂಶಗಳು

  • ಈ ವರ್ಷ ಫ್ರೆಂಚರು ಭಾರತವನ್ನು ಪರೇಡ್‌ನಲ್ಲಿ ಗೌರವ ಅತಿಥಿಯಾಗಿ ಆಯ್ಕೆ ಮಾಡಿದ್ದಾರೆ. ಭಾರತದ ಮೂರು ಸೇನಾಪಡೆಗಳು ಭಾಗವಹಿಸಿದ್ದವು. ಭಾರತದ ಗಣರಾಜ್ಯೋತ್ಸವ ಪರೇಡ್ನಲ್ಲಿ ನೌಕಾಪಡೆ ತುಕಡಿ ಮುನ್ನಡೆಸಿ ನಾಡಿಗೆ ಹೆಮ್ಮೆ ತಂದ ಲೆಫ್ಟಿ ನೆಂಟ್ ಕಮಾಂಡರ್ ಮಂಗಳೂರಿನ ದಿಶಾ ಅಮೃತ್ ಅವರು ಈ ಬಾರಿ ಫ್ರಾನ್ಸ್ ದೇಶದ ಪ್ಯಾರಿಸ್ನ ಬಾಸ್ಟಿಲ್ ಡೇ ಪರೇಡ್ನಲ್ಲಿ ಭಾಗವಹಿಹಿಸಿದ್ದರು. ಭಾರತದ ನೌಕಾ ದಳ, ಭೂ ದಳ, ವಾಯು ದಳ ಸೇರಿದಂತೆ ಮೂರು ತುಕಡಿಗಳೂ ಪಾಲ್ಗೊಗೊಂಡಿದ್ದು ವಿಶೇಷ.
  • ವಿಶ್ವದ ಅತ್ಯಂತ ಸುಂದರವಾದ ಅವೆನ್ಯೂ ಎಂದು ಕರೆಯಲ್ಪಡುವ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಚಾಂಪ್ಸ್-ಎಲಿಸೀಸ್, ಫ್ರೆಂಚ್ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದವು.
  • ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಮಾತ್ರವಲ್ಲದೇ, ಅದೇ ದಿನ ಇಂಡೋ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವು ಆಗಿದೆ.

ದಿಶಾ ಅಮೃತ್

  • ದಿಶಾ ಮಂಗಳೂರಿನ ಬೋಳೂರು ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ. ಮಂಗಳೂರಿನ ಕೆನರಾ, ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಕಲಿತು ತನ್ನಿಚ್ಚೆಯಂತೆಯೇ ನೌಕಾಪಡೆ ಸೇರಿದ್ದಾರೆ. 2016ರಲ್ಲಿ ನೌಕಾಪಡೆ ಸೇರಿದ ಇವರು ಪ್ರಸ್ತುತ ಲೆಫ್ಟಿ ನೆಂಟ್ ಕಮಾಂಡರ್ ಆಗಿದ್ದ್ದಾರೆ.

ಬಾಸ್ಟಿಲ್ ಡೇ

  • ಫ್ರಾನ್ಸ್ ರಾಷ್ಟ್ರೀಯ ದಿನವನ್ನು ಜುಲೈ 14 ರಂದು ಆಚರಿಸಲಾಗುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಬಾಸ್ಟಿಲ್ ಡೇ ಎಂದು ಕರೆಯಲಾಗುತ್ತದೆ. ಇದು ಫ್ರೆಂಚ್ ಕ್ರಾಂತಿಯ ಪ್ರಮುಖ ಘಟನೆಯಾಗಿದೆ. ಫ್ರೆಂಚ್ ಭಾಷೆಯಲ್ಲಿ, ದಿನದ ಔಪಚಾರಿಕ ಹೆಸರು ‘ಫೆಟೆ ನ್ಯಾಷನಲ್’.
  • ಫ್ರೆಂಚ್ ಕ್ರಾಂತಿಯ ಸಮಯದಲ್ಲಿ 1789 ರಲ್ಲಿ ಪುರಾತನ ರಾಜಮನೆತನದ ಕೋಟೆಯಾದ ಬಾಸ್ಟಿಲ್ ಜೈಲಿನ ದಾಳಿಯ ವಾರ್ಷಿಕೋತ್ಸವವನ್ನು ಗುರುತಿಸುವ ದಿನದ ಆಚರಣೆಗಳ ಪ್ರಮುಖ ಅಂಶವಾಗಿದೆ.
  • ಆಚರಣೆ: ಆರಂಭದಿಂದಲೂ, ದಿನವನ್ನು ಮಿಲಿಟರಿ ಮೆರವಣಿಗೆಗಳು, ಪಟಾಕಿಗಳು, ಭಾಷಣಗಳು ಮತ್ತು ಸಾರ್ವಜನಿಕ ಪ್ರದರ್ಶನಗಳೊಂದಿಗೆ ಆಚರಿಸಲಾಗುತ್ತದೆ. Vive le 14 Juillet!” (“ಜುಲೈ 14ನೇ ತಾರೀಖು ಬದುಕಲಿ!”) ಎಂಬುದು ದಿನಕ್ಕೆ ಸಂಬಂಧಿಸಿದ ಘೋಷಣೆಯಾಗಿದೆ.

ನಿಮಗಿದು ತಿಳಿದಿರಲಿ

  • ಪ್ರತಿ ವರ್ಷ, ಬಾಸ್ಟಿಲ್ ಡೇ ಮೆರವಣಿಗೆಯ ಸಂದರ್ಭದಲ್ಲಿ, ಫ್ರಾನ್ಸ್ ಅಧ್ಯಕ್ಷರು ವಿಶ್ವ ನಾಯಕರು ಮತ್ತು ರಾಷ್ಟ್ರಗಳ ಮುಖ್ಯಸ್ಥರನ್ನು ಅತಿಥಿಯಾಗಿ ಆಹ್ವಾನಿಸುತ್ತಾರೆ. ಈ ಬಾರಿ ಈ ವಿಶೇಷ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಈ ಹಿಂದೆ 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದರು. ಬಾಸ್ಟಿಲ್ ಡೇ ಪರೇಡ್‌ಗೆ ಆಹ್ವಾನ ಪಡೆದ ಭಾರತದ ಎರಡನೇ ಪ್ರಧಾನಿ ನರೇಂದ್ರ ಮೋದಿ.