Published on: August 6, 2022

ಬ್ಯ್ಲಾಕ್ ಟೈಗರ್

ಬ್ಯ್ಲಾಕ್ ಟೈಗರ್

ಸುದ್ದಿಯಲ್ಲಿ ಏಕಿದೆ?  

ಅಪರೂಪದ ಕಪ್ಪು ಹುಲಿ ಭಾರತದ ಒಡಿಶಾದ ಕಾಡಿನಲ್ಲಿ ಇದೆ.  ಒಡಿಶಾದ ‘ಸಿಮ್ಲಿಪಾಲ್ ನ್ಯಾಷನಲ್ ಪಾರ್ಕ್‌’ನಲ್ಲಿ ಈ ಕಪ್ಪು ಹುಲಿಯ ಚಲನವಲನಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಖ್ಯಾಂಶಗಳು

  • 2007 ರಲ್ಲೇ ಈ ಕಪ್ಪು ಹುಲಿಯನ್ನು ಒಡಿಶಾದಲ್ಲಿ ಗುರುತಿಸಲಾಗಿತ್ತು. ಅಸಲಿಗೆ ಕ‍ಪ್ಪು ಹುಲಿ ಎನ್ನುವುದು ಇರುವುದಿಲ್ಲ, ಬದಲಿಗೆ ಅದರ ಆನುವಂಶಿಕ ಬೆಳವಣಿಗೆ ಆಧಾರದ ಮೇಲೆ ಚರ್ಮದ ಬಣ್ಣದಲ್ಲಿ ವ್ಯತ್ಯಾಸವಾಗಿರುತ್ತದೆ.
  • ಪ್ರಪಂಚದಲ್ಲಿ ಸದ್ಯ 3900 ಹುಲಿಗಳು ಇದ್ದು ಇದರಲ್ಲಿ ಭಾರತದಲ್ಲಿ 1900 ಹುಲಿಗಳು ಇವೆ. ಕರ್ನಾಟಕದಲ್ಲಿ ಸುಮಾರು 400 ಹುಲಿಗಳು ಇವೆ. ಪ್ರಪಂಚದಲ್ಲಿ ಐದು ಅಥವಾ ಆರು ಕಪ್ಪು ಹುಲಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.
  • ಸುಮಾತ್ರಾ ಹುಲಿ ಅಳವಿನಂಚಿನಲ್ಲಿರುವ ಹುಲಿಯಾಗಿದೆ.