Published on: April 23, 2022

‘ಬ್ರಹ್ಮೋಸ್’

‘ಬ್ರಹ್ಮೋಸ್’

ಸುದ್ಧಿಯಲ್ಲಿ ಏಕಿದೆ?  ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಎಂದೇ ಖ್ಯಾತಿ ಗಳಿಸಿರುವ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ.

ಮುಖ್ಯಾಂಶಗಳು

  • ಭಾರತೀಯ ವಾಯುಪಡೆ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ಸುಖೋಯ್30 ಜೆಟ್ ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ್ದು, ಎರಡೂ ಪರೀಕ್ಷೆಯಲ್ಲಿ ಒಂದೇ ಗುರಿ ನಿಗದಿ ಪಡಿಸಲಾಗಿತ್ತು. ಎರಡೂ ಮಾರ್ಗದಲ್ಲಿ ಒಂದೇ ಗುರಿಯನ್ನು ಧ್ವಂಸ ಮಾಡುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ
  • ಮೊದಲು ನೌಕಾ ಮಾರ್ಗವಾಗಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಐಎನ್ಎಸ್ ಡೆಲ್ಲಿ ಯುದ್ಧನೌಕೆ ಮೂಲಕ ಕ್ಷಿಪಣಿ ಪ್ರಯೋಗ ಮಾಡಲಾಗಿದ್ದು, ಈ ವೇಳೆ ಕ್ಷಿಪಣಿಗೆ ಗುರಿಯಾಗಿ ಮತ್ತೊಂದು ನೌಕೆಯನ್ನು ನೀಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ನೌಕೆಯನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿತ್ತು. ಬಳಿಕ ಭಾರತೀಯ ವಾಯುಪಡೆಯ Su-30MKI ಯುದ್ಧ ವಿಮಾನದ ಮೂಲಕ ವಾಯುನೆಲೆಯಿಂದ ಹೊರಟು ಅದೇ ಹಡಗಿನ ಮೇಲೆ ದಾಳಿ ಮಾಡಿತ್ತು. ಈ ವೇಳೆಯೂ ಬ್ರಹ್ಮೋಸ್ ಕ್ಷಿಪಣಿ ಹಡಗನ್ನು ಯಶಸ್ವಿಯಾಗಿ ಹೊಡೆದರುಳಿಸಿತ್ತು.
  • ಕ್ಷಿಪಣಿಯ ಈ ವೇಗವು ಶತ್ರುರಾಷ್ಟ್ರಗಳ ವಾಯು ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಂಡು ಗುರಿಯನ್ನು ತಲುಪಲು ನೆರವಾಗುತ್ತದೆ. ಈ ವೇಗದಲ್ಲಿ ಕ್ಷಿಪಣಿಯನ್ನು ಗುರುತಿಸುವುದೂ ಕೂಡ ಕಷ್ಟಕರವಾಗುತ್ತದೆ