Published on: February 1, 2023

ಭಾರತದಲ್ಲಿ ವಿಶ್ವದ ಶೇ 70ರಷ್ಟು ಹುಲಿ ಸಂತತಿ

ಭಾರತದಲ್ಲಿ ವಿಶ್ವದ ಶೇ 70ರಷ್ಟು ಹುಲಿ ಸಂತತಿ


ಸುದ್ದಿಯಲ್ಲಿ ಏಕಿದೆ? ಭಾರತದಲ್ಲಿ 53 ಹುಲಿ ಮೀಸಲು ಅಭಯಾರಣ್ಯಗಳಲ್ಲಿ 2967 ಹುಲಿಗಳಿವೆ. ಜಗತ್ತಿನ ಶೇ 70ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ವರದಿ ನೀಡಿದೆ.


ಮುಖ್ಯಾಂಶಗಳು

  • ಜಗತ್ತಿನ ಒಟ್ಟಾರೆ ಹುಲಿಗಳ ಸಂತತಿಯ ಪೈಕಿ ಸುಮಾರು ಮುಕ್ಕಾಲು ಪಾಲು ಭಾರತದಲ್ಲಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರವು (ಎನ್‌ಟಿಸಿಎ) ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
  • ಎನ್‌ಟಿಸಿಎ ಸಮೀಕ್ಷಾ ವರದಿಯನ್ನು ಕೇಂದ್ರ ಸರಕಾರವು ಅಫಿಡವಿಟ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಮುಖ್ಯವಾಗಿ, ಎನ್‌ಟಿಸಿಎ ಸಮೀಕ್ಷೆ 2018 ಕೇಂದ್ರಿತವಾಗಿವೆ.

ಸಮೀಕ್ಷೆಯ ವರದಿ

  • 5 ವರ್ಷಗಳ ಹಿಂದಿನ ಸಮೀಕ್ಷೆಯ ವರದಿಯ ಪ್ರಕಾರ, ದೇಶದಲ್ಲಿ 2,967 ಹುಲಿಗಳಿವೆ. ಅವುಗಳು ದೇಶದ ವಿವಿಧ ರಾಜ್ಯಗಳಲ್ಲಿನ 53 ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿಇವೆ. ಜಗತ್ತಿನ ಹುಲಿಗಳ ಸಂತತಿಯಲ್ಲಿ ಶೇ 70ರಷ್ಟು ಹುಲಿಗಳು ಭಾರತದಲ್ಲಿ ಇವೆ. ಜತೆಗೆ, ವಾರ್ಷಿಕ ಶೇ 6ರಷ್ಟು ಪ್ರಮಾಣದಲ್ಲಿ ದೇಶಾದ್ಯಂತ ಹುಲಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ.

ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಹುಲಿಗಳ ಸಂತತಿ 

  • ಬಂಡಿಪುರ, ನಾಗರಹೊಳೆ, ಬಿಳಿಗಿರಿ ರಂಗನಾಥ ಸ್ವಾಮಿ (ಬಿಆರ್‌ಟಿ), ಭದ್ರಾ ಹಾಗೂ ದಾಂಡೇಲಿಯಲ್ಲಿ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ.
  • ನಾಲ್ಕು ವರ್ಷಗಳಿಗೊಮ್ಮೆ ಹುಲಿ ಸಂತತಿ ಸಮೀಕ್ಷೆ ನಡೆಸಲಾಗುತ್ತಿದ್ದು, ಅದರಂತೆ 2020ರಲ್ಲಿ ಕರುನಾಡಿನಲ್ಲಿ ಹುಲಿಗಳ ಸಂಖ್ಯೆ ಶೇ 30ರಷ್ಟು ಹೆಚ್ಚಳ ಕಂಡಿದೆ.
  • ನಾಗರಹೊಳೆಯಿಂದ ಕೇರಳದ ವಯನಾಡ್‌ ಹಾಗೂ ತಮಿಳುನಾಡಿನ ಸತ್ಯಮಂಗಲಂವರೆಗೆ ವಿಸ್ತರಿಸಿರುವ ಹುಲಿಗಳ ಸಂರಕ್ಷಿತ ಅಭಯಾರಣ್ಯದಲ್ಲಿ 724 ಹುಲಿಗಳಿವೆ.
  • ಮತ್ತೊಂದೆಡೆ, ಸಹ್ಯಾದ್ರಿ ಘಾಟ್‌ನ ಕೊಲ್ಲೂರು, ಕುದುರೆಮುಖ ಪ್ರಾಂತ್ಯದಲ್ಲಿ 150 ಹುಲಿಗಳು ಕಾಣಿಸಿಕೊಂಡಿವೆ.
    ಅಂಕಿ ಅಂಶ
  • 2020ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡ ಹುಲಿಗಳ ಸಂಖ್ಯೆ 650-700. ಇವುಗಳ ಪೈಕಿ 403 ಹುಲಿಗಳು ಅಭಯಾರಣ್ಯದಲ್ಲಿವೆ.
  • 2018ರಲ್ಲಿ ಎನ್‌ಟಿಸಿಎ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿದ್ದ ಹುಲಿಗಳ ಸಂಖ್ಯೆ 524. ಇವುಗಳಲ್ಲಿ 350 ಹುಲಿಗಳು ಅಭಯಾರಣ್ಯದಲ್ಲಿದ್ದವು.
  • ಬಂಡಿಪುರವೊಂದರಲ್ಲೇ ಕಳೆದ 3 ವರ್ಷಗಳಲ್ಲಿ ಶೇ 10ರಷ್ಟು ಪ್ರಮಾಣದಲ್ಲಿ ಹುಲಿಗಳ ಸಂತತಿ ಏರಿಕೆಯಾಗಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ

ದೇಶದಲ್ಲಿ ಹುಲಿಗಳ ಸಂರಕ್ಷಣೆಗಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್‌ ಅಸ್ತಿತ್ವಕ್ಕೆ ಬಂತು. ನಂತರ ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾಗಿ ಹುಲಿಗಳ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಸ್ಪೆಷಲ್‌ ಟೈಗರ್‌ ಪ್ರೊಟೆಕ್ಷನ್‌ ಫೋರ್ಸ್‌ ದೇಶದಲ್ಲೇ ಮೊದಲ ಬಾರಿಗೆ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಜಾರಿಗೆ ತರಲಾಗಿದೆ.