Published on: October 4, 2023
ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿ
ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿ
ಸುದ್ದಿಯಲ್ಲಿ ಏಕಿದೆ? ರಿಯಲ್ ಎಸ್ಟೇಟ್‌ನ CII-CBRE ವರದಿಯ ಪ್ರಕಾರ, ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ, ಉದ್ಯಾನ ನಗರಿ ಬೆಂಗಳೂರು ಭಾರತದ ಗ್ರೀನ್ ಆಫೀಸ್ ಸ್ಪೇಸ್(ಹಸಿರು ಕಚೇರಿ ಸ್ಥಳಾವಕಾಶ)ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಮುಖ್ಯಾಂಶಗಳು
- ದೇಶದ ಶೇಕಡಾ 30 ರಷ್ಟು ಅಂದರೆ 104.5 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಸಿಲಿಕಾನ್ ಸಿಟಿ ಹೊಂದಿದೆ.
- ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ(ಎನ್‌ಸಿಆರ್) 70.2 ಮಿಲಿಯನ್ ಚದರ ಅಡಿಗಳೊಂದಿಗೆ ನಂತರದ ಸ್ಥಾನದಲ್ಲಿದೆ.
- ದೇಶದ ವಾಣಿಜ್ಯ ರಾಜಧಾನಿ ಮುಂಬೈ, 56.6 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ.
- ಹಸಿರು ಕಚೇರಿ ಸ್ಥಳಾವಕಾಶದ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೆ ಸ್ಥಾನದಲ್ಲಿದ್ದು, ಚೆನ್ನೈ ಮತ್ತು ಪುಣೆ ನಂತರದ ಸ್ಥಾನದಲ್ಲಿವೆ.
- 2019ಕ್ಕೆ ಹೋಲಿಸಿದರೆ 2023 ರ ಜೂನ್‌ನಲ್ಲಿ ಭಾರತದ ಅಗ್ರ ಆರು ನಗರಗಳಲ್ಲಿ ಹಸಿರು ಪ್ರಮಾಣೀಕೃತ ಕಚೇರಿ ಕಟ್ಟಡಗಳ ಪ್ರದೇಶ ಶೇ. 36 ರಷ್ಟು ಅಂದರೆ 342 ಮಿಲಿಯನ್ ಚದರ ಅಡಿಗಳಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಗ್ರೀನ್ ಆಫೀಸ್ ಸ್ಪೇಸ್ ಎಂದರೆ
- ಗ್ರೀನ್ ಆಫೀಸ್ ಸ್ಪೇಸ್ ಎಂದರೆ ಪರಿಸರ ಜವಾಬ್ದಾರಿ ಮತ್ತು ಸಂಪನ್ಮೂಲ-ಸಮರ್ಥವಾಗಿರುವ ರಚನೆಯನ್ನು ಸೂಚಿಸುತ್ತದೆ. ಹಸಿರು ಕಛೇರಿಗಳನ್ನು ಇಂಧನ ದಕ್ಷತೆ ಮತ್ತು ಮರುಬಳಕೆ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು, ಇಂಧನ ಉಳಿಸುವುದು ಮತ್ತು ಮಾಲಿನ್ಯ ಕಡಿಮೆ ಮಾಡುವುದು ಇದರ ಗುರಿಯಾಗಿದೆ.