Published on: December 1, 2022

ಭಾರತದ ಜಿ20 ಅಧ್ಯಕ್ಷತೆ

ಭಾರತದ ಜಿ20 ಅಧ್ಯಕ್ಷತೆ

ಸುದ್ದಿಯಲ್ಲಿ ಏಕಿದೆ?

ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾದ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೂ ಸೇರಿದಂತೆ ಜಿ20 ಲಾಂಛನವನ್ನು ಹೊಂದಿರುವಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1 ರಿಂದ 7 ರವರೆಗೆ ದೀಪಾಲಂಕಾರದಿಂದ ಝಗಮಗಿಸಲಿವೆ.

ಮುಖ್ಯಾಂಶಗಳು

  • ಈ ವರ್ಷದ ಅಧ್ಯಕ್ಷೀಯ ಅವಧಿಯಲ್ಲಿ ಭಾರತವು 50 ಕ್ಕೂ ಹೆಚ್ಚು ನಗರಗಳು ಮತ್ತು 32 ವಿವಿಧ ವಲಯಗಳಲ್ಲಿ ರಾಷ್ಟ್ರಾದ್ಯಂತ 200 ಸಭೆಗಳನ್ನು ಆಯೋಜಿಸಲಿದೆ.
  • ಮುಂದಿನ ವರ್ಷದ ಶೃಂಗಸಭೆಯಲ್ಲಿ ಸುಸ್ಥಿರ ಪರಿಸರ ಅಭಿವೃದ್ಧಿಗಾಗಿ ಕೈಗೆಟುಕುವ ತಂತ್ರಜ್ಞಾನ ಪೂರೈಕೆಯ ಉದ್ದೇಶವನ್ನು ಒಳಗೊಂಡಿವೆ. ಅಲ್ಲದೇ, ದೇಶದ ಡಿಜಿಟಲ್ ರೂಪಾಂತರವನ್ನು ಜಗತ್ತಿಗೆ ತೋರಿಸುತ್ತದೆ.
  • ಶ್ರೀನಗರದ ಶಂಕರಾಚಾರ್ಯ ದೇವಸ್ಥಾನ, ದೆಹಲಿಯ ಕೆಂಪು ಕೋಟೆ, ತಂಜಾವೂರಿನ ಚೋಳರ ದೇವಸ್ಥಾನ, ಹುಮಾಯೂನ್ ಸಮಾಧಿ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯ, ಬಿಹಾರದ ಶೇರ್ ಶಾ ಸೂರಿಯ ಸಮಾಧಿ ಸೇರಿದಂತೆ ನೂರು ಸ್ಮಾರಕಗಳು ಪಟ್ಟಿಯಲ್ಲಿದ್ದು, ಏಳು ದಿನಗಳ ಕಾಲ ಪ್ರಕಾಶಿಸಲ್ಪಡುತ್ತವೆ.

ವಿಶೇಷ :

ಫೆಬ್ರುವರಿ 2023 ರಲ್ಲಿ ನಡೆಯುವ ಜಿ  20 ಹಣಕಾಸು ಸಚಿವರ ಶೃಂಗಸಭೆಯ ಆತಿಥ್ಯವನ್ನು ರಾಜಧಾನಿ ಬೆಂಗಳೂರು ವಹಿಸಲಿದೆ. ಜಿ 20 ರಾಷ್ಟ್ರಗಳ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.