Published on: November 2, 2022
ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್
ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್
ಸುದ್ದಿಯಲ್ಲಿ ಏಕಿದೆ?
ಮಂಗಳೂರಿನಲ್ಲಿ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ಭಾರತದಲ್ಲಿ (ಹಸಿರು ಜಲಜನಕ) ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.
ಮುಖ್ಯಾಂಶಗಳು
- ಯಾವ ಕಂಪನಿಗಳು ಹೂಡಿಕೆ ಮಾಡಲಿವೆ? ಎಸಿಎಂಇ ಸೋಲಾರ್, ಎ ಬಿ C ಕ್ಲೀನ್ ಟೆಕ್ , ರಿನ್ಯೂ ಪವರ್ , ಅವಾದ , ಜೆ ಎಸ್ಡಬ್ಲ್ಯೂ ಗ್ರೀನ್ ಹೈಡ್ರೋಜನ್ , ಪೆಟ್ರೊನಾಸ್ ಹೈಡ್ರೋಜನ್ ಮತ್ತು O2 ಪವರ್ ಎಂಬ ಏಳು ಕಂಪನಿಗಳು ಗ್ರೀನ್ ಹೈಡ್ರೋಜನ್ ಉತ್ಪಾದನೆಗಾಗಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಅವುಗಳಲ್ಲಿ ನಾಲ್ಕು ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಹೂಡಿಕೆಗೆ ಅನುಮತಿ ನೀಡಲಾಗಿದ್ದು, ಮೂರು ಎಂಒಯು ಹಂತದಲ್ಲಿವೆ.
- ಒಟ್ಟು ಹೂಡಿಕೆಯ ಗಾತ್ರ: ಗ್ರೀನ್ ಹೈಡ್ರೋಜನ್ನಲ್ಲಿ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳಾಗಿದ್ದು ಹೂಡಿಕೆದಾರರು ಮಂಗಳೂರು ಬಂದರಿನ ಹತ್ತಿರದ ಸ್ಥಳವನ್ನು ಕೇಳಿದ್ದಾರೆ. ಗ್ರೀನ್ ಹೈಡ್ರೋಜನ್ ನ್ನು ಗ್ರೀನ್ ಅಮ್ಮೋನಿಯಾಕ್ಕೆ ಪರಿವರ್ತಿಸಿ ರಫ್ತು ಮಾಡಬಹುದು.
- ಗ್ರೀನ್ ಹೈಡ್ರೋಜನ್ ಘಟಕ ಸ್ಥಾಪನೆಗೆ ಮುಖ್ಯ ಅವಶ್ಯಕತೆಯೆಂದರೆ ಸೌರ ಮತ್ತು ಪವನ ಶಕ್ತಿಯ ನಿಯಮಿತ ಪೂರೈಕೆಯನ್ನು ಹೊಂದಿರಬೇಕು ಅದಕ್ಕಾಗಿ ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ಘಟಕಗಳನ್ನು ಸ್ಥಾಪಿಸುತ್ತಾರೆ.
- ಎಲ್ಲಿಂದ ಇಂಧನ ಒದಗಿಸಲಾಗುವುದು? ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಅಥವಾ/ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಟ್ರಾನ್ಸ್ಮಿಷನ್ ಲೈನ್ಗಳ ಮೂಲಕ ಮಂಗಳೂರಿನ ಹೈಡ್ರೋಜನ್ ಸ್ಥಾವರಗಳಿಗೆ ಹಸಿರು ಶಕ್ತಿಯನ್ನು ರವಾನಿಸಲಾಗುತ್ತದೆ.
ಉದ್ದೇಶ
- 2047ರ ಸ್ವಾತಂತ್ರ್ಯ ದಿನಾಚರಣೆ ಮೊದಲು ಹೈಡ್ರೋಡನ್ ಮತ್ತು ಇಂಧನವನ್ನು ರಫ್ತು ಮಾಡುವ ಗುರಿ ಹೊಂದಲಾಗಿದೆ.
ಏನಿದು ಗ್ರೀನ್ ಹೈಡ್ರೋಜನ್:
- ಗ್ರೀನ್ ಹೈಡ್ರೋಜ್ ನವೀಕರಿಸಬಹುದಾದ ಶಕ್ತಿ ಅಥವಾ ಪ್ರಕ್ರಿಯೆಗಳನ್ನು ಬಳಸಿ ಉತ್ಪಾದಿಸಿದಾಗ ಹೈಡ್ರೋಜನ್ ನ್ನು ನವೀಕರಿಸಬಹುದಾದ ಶಕ್ತಿಯಂತೆ ಅಗತ್ಯ ಸಮಯದಲ್ಲಿ ಬಳಸಲು ಸಂಗ್ರಹಿಸಲು ಒಂದು ವಿಧಾನವಾಗಿದೆ. ಹೈಡ್ರೋಜನ್ ಶಕ್ತಿಯನ್ನು ಗ್ಯಾಸ್ ರೂಪದಲ್ಲಿ ಇಲ್ಲವೇ ನೈಸರ್ಗಿಕ ಅನಿಲ ಪೈಪ್ಗಳ ಮೂಲಕವೂ ತಲುಪಿಸಬಹುದಾಗಿದೆ.