Published on: December 1, 2021

ಭಾರತದ ಯುನಿಕಾರ್ನ್ಗಳ ಸಂಖ್ಯೆ

ಭಾರತದ ಯುನಿಕಾರ್ನ್ಗಳ ಸಂಖ್ಯೆ

ಸುದ್ಧಿಯಲ್ಲಿ ಏಕಿದೆ? ಭಾರತದಲ್ಲಿ ಕೋವಿಡ್‌ – 19 ಬಿಕ್ಕಟ್ಟಿನ ನಡುವೆಯೂ 2021ರ ಮೊದಲ 11 ತಿಂಗಳಿನಲ್ಲಿ 37 ಯುನಿಕಾರ್ನ್‌ಗಳು ಹೊರಹೊಮ್ಮಿವೆ. ಈ ಮೂಲಕ ದೇಶದ ಒಟ್ಟು ಯುನಿಕಾರ್ನ್‌ಗಳ ಸಂಖ್ಯೆ 77ಕ್ಕೆ ಏರಿದೆ.

ಏನಿದು ಯುನಿಕಾರ್ನ್‌?

  • ಯುನಿಕಾರ್ನ್‌ ಎಂದರೆ 1 ಶತಕೋಟಿ ಡಾಲರ್‌ ಮೌಲ್ಯ ಹೊಂದಿರುವ ಖಾಸಗಿ ಸ್ಟಾರ್ಟಪ್‌ಗಳು (ಅಂದಾಜು 7,400 ಕೋಟಿ ರೂ.)

ಭಾರತದ ಸಾಧನೆ

  • 2021ರಲ್ಲಿ ಅಮೆರಿಕದ ನಂತರ ಅತಿ ಹೆಚ್ಚು ಸ್ಟಾರ್ಟಪ್‌ಗಳನ್ನು ಯುನಿಕಾರ್ನ್‌ ಕ್ಲಬ್‌ಗೆ ಸೇರಿಸಿದ ದೇಶವೆಂದರೆ ಅದು ಭಾರತ. ಭಾರತದಲ್ಲೀಗ ಯುವ ಜನತೆ ಎಲ್ಲೋ, ಯಾವುದೋ ಕಂಪನಿಯ ಉದ್ಯೋಗಿಯಾಗುವುದಕ್ಕಿಂದ ತಾವೇ ಸ್ವಂತ ಕಂಪನಿಯನ್ನು ಹುಟ್ಟು ಹಾಕಿ ನೂರಾರು ಮಂದಿಗೆ ಉದ್ಯೋಗ ನೀಡುವಷ್ಟರಮಟ್ಟಿಗೆ ಉದ್ಯಮಶೀಲರಾಗಿ ಬೆಳೆಯಲು ಬಯಸುತ್ತಿದ್ದಾರೆ. ಇದು ಸಂಪತ್ತಿನ ಸೃಷ್ಟಿಗೆ ನಿರ್ಣಾಯಕವೂ ಹೌದು ಎನ್ನುತ್ತಾರೆ ತಜ್ಞರು.

2021ರ ಟಾಪ್‌ ಯುನಿಕಾರ್ನ್‌ಗಳ ಪಟ್ಟಿ ಹೀಗಿದೆ,

  • ಭಾರತ್‌ಪೇ, ಕಾಯಿನ್‌ಡಿಸಿಎಕ್ಸ್‌, ಅಪ್‌ಗ್ರೇಡ್‌, ಮೈಂಡ್‌ಟಿಕಲ್‌, ಡ್ರೋಮ್‌, ಮೀಶೊ, ಅರ್ಬನ್‌ ಕಂಪನಿ, ಶೇರ್‌ಚಾಟ್‌, ನೋ ಬ್ರೋಕರ್‌, ಮೊಬಿವಿಕ್‌

ಯುನಿಕಾರ್ನ್‌ ಹೆಚ್ಚಳಕ್ಕೆ ಕಾರಣವೇನು?

  • ಕಳೆದ ಎರಡು ವರ್ಷಗಳಿಂದ ಭಾರತದಲ್ಲಿಸಂಭವಿಸಿರುವ ವ್ಯಾಪಕ ಡಿಜಿಟಲೀಕರಣ
  • ಹೆಚ್ಚುತ್ತಿರುವ ಆನ್‌ಲೈನ್‌ ವಹಿವಾಟು
  • ಆನ್‌ಲೈನ್‌ ಗ್ರಾಹಕರ ಸಂಖ್ಯೆ ಹೆಚ್ಚಳ
  • ಸ್ಟಾರ್ಟ್‌ಅಪ್‌ಗಳಿಗೆ ಸಿಗುತ್ತಿರುವ ಆರಂಭಿಕ ಹೂಡಿಕೆಯ ಬೆಂಬಲ
  • ಐಐಟಿ ಮತ್ತು ಉನ್ನತ ಬಿಸಿನೆಸ್‌ ಸ್ಕೂಲ್‌ಗಳಲ್ಲಿ ಓದಿದ ಯುವಜನತೆ ತಮ್ಮದೇ ಸ್ಟಾರ್ಟಪ್‌ ಸ್ಥಾಪಿಸಲು ಬಯಸುತ್ತಿರುವುದು
  • ಸ್ಟಾರ್ಟ್‌ಅಪ್‌ಗಳ ಹಬ್‌ ಬೆಂಗಳೂರಿನಲ್ಲಿವೆ ಬರೋಬ್ಬರಿ 34 ಯುನಿಕಾರ್ನ್‌ಗಳು!

ದೇಶದಲ್ಲೇ ಸ್ಟಾರ್ಟ್‌ಅಪ್‌ಗಳ ಹಬ್‌ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಹಲವಾರು ಕಂಪನಿಗಳು ಜನ್ಮ ತಳೆದು ಯುನಿಕಾರ್ನ್‌ಗಳಾಗಿ ಬೆಳೆದಿವೆ.

  • ಕ್ರೆಡ್‌, ಡಿಜಿಟ್‌ಇನ್ಷೂರೆನ್ಸ್‌, ಗ್ಲಾನ್ಸ್‌, ಗ್ರೋವ್‌, ಮು ಸಿಗ್ಮಾ, ಓಲಾ ಎಲೆಕ್ಟ್ರಿಕ್‌, ಬಿಗ್‌ ಬಾಸ್ಕೆಟ್‌, ಬೈಜೂಸ್‌, ಡೈಲಿಹಂಟ್‌, ಇನ್‌ಮೊಬಿ, ಮೀಶೊ, ರೇಜರ್‌ಪೇ, ಶೇರ್‌ಚಾಟ್‌, ಸ್ವಿಗ್ಗಿ, ಉಡಾನ್‌, ಅನ್‌ಅಕಾಡೆಮಿ, ಸ್ಲೆತ್ರೖಸ್‌ ಇತ್ಯಾದಿ 34 ಯುನಿಕಾರ್ನ್‌ಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇವೆ.