Published on: July 26, 2022
ಭಾರತದ 15 ನೇ ರಾಷ್ಟ್ರಪತಿ
ಭಾರತದ 15 ನೇ ರಾಷ್ಟ್ರಪತಿ
ಸುದ್ದಿಯಲ್ಲಿ ಏಕಿದೆ?
ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದ್ರೌಪತಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದವರೊಬ್ಬರು ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಅಲಂಕರಿಸಿದಂತಾಗಿದೆ.
ಮುಖ್ಯಾಂಶಗಳು
- 64 ವರ್ಷ ವಯಸ್ಸಿನ ದ್ರೌಪದಿ ಮುರ್ಮು ಅವರು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದಾರೆ. ಅವರು ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ಮತ್ತು ಒಡಿಶಾಗೆ ಸೇರಿದ ಮೊದಲ ರಾಷ್ಟ್ರಪತಿಯಾಗಿದ್ದಾರೆ.
ದ್ರೌಪದಿ ಮುರ್ಮು
- ಅವರು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಸಂತಾಲ್ ಬುಡಕಟ್ಟು ಸಮುದಾಯದಲ್ಲಿ ಜೂನ್ 20, 1958 ರಂದು ಜನಿಸಿದರು.
- 1979 ರಿಂದ 1983 ರ ಅವಧಿಯಲ್ಲಿ, ಅವರು ಒಡಿಶಾದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡಿದರು.
- 1997 ರಲ್ಲಿ ಬಿಜೆಪಿ ಸೇರಿದ ನಂತರ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. 1997 ರಲ್ಲಿ, ಅವರು ಒಡಿಶಾದ ರೈರಂಗಪುರ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆಯಾದರು.
- ನಂತರ 1998 ರಲ್ಲಿ, ಅವರು ರಾಯರಂಗಪುರ NAC ನ ಉಪಾಧ್ಯಕ್ಷರಾದರು. 2000-2002 ರ ನಡುವೆ, ಅವರು ಒಡಿಶಾ ಸರ್ಕಾರದಲ್ಲಿ ಸಾರಿಗೆ ಮತ್ತು ವಾಣಿಜ್ಯ ಸಚಿವರಾಗಿದ್ದರು.
- 2007 ರಲ್ಲಿ, ಅವರು ವರ್ಷದ ಅತ್ಯುತ್ತಮ ಶಾಸಕರಿಗಾಗಿ ‘ನೀಲಕಂಠ ಪ್ರಶಸ್ತಿ’ ಪಡೆದರು. ಅವರು 2015 ರಲ್ಲಿ ಜಾರ್ಖಂಡ್‌ನ 9 ನೇ ಮತ್ತು 1 ನೇ ಬುಡಕಟ್ಟು ರಾಜ್ಯಪಾಲರಾದರು ಮತ್ತು 2021 ರವರೆಗೆ ಸೇವೆ ಸಲ್ಲಿಸಿದರು.
- ಇದರೊಂದಿಗೆ ರಾಜ್ಯಪಾಲರಾಗಿ ನೇಮಕಗೊಂಡ ಒಡಿಶಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಮತ್ತು ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎಂಬ ಕೀರ್ತಿಯೂ ಅವರದ್ದಾಗಿದೆ. ಅಲ್ಲದೆ, ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆ ಸಲ್ಲಿಸಿದ ಮೊದಲಿಗರೂ ಇವರೇ ಎಂಬುದು ವಿಶೇಷ.
-
ರಾಷ್ಟ್ರಪತಿ ಸ್ಥಾನಕ್ಕೆ ಬುಟ್ಟಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲಿಗರು ದ್ರೌಪದಿ. ಇವರಿಗೂ ಮುನ್ನ ಪ್ರತಿಭಾ ಪಟೇಲ್ ಅವರು ದೇಶದ 12ನೇ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿಯಾಗಿ 2012–2017ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು.