Published on: October 20, 2021

ಭಾರತ್ನೆಟ್:ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಯೋಜನೆ

ಭಾರತ್ನೆಟ್:ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ಯೋಜನೆ

ಸುದ್ಧಿಯಲ್ಲಿ ಏಕಿದೆ?  2020ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್‌ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಯೋಜನೆಯ ಗುರಿಯಾಗಿತ್ತು. ಯೋಜನೆ ಆರಂಭವಾಗಿ 10 ವರ್ಷ ಕಳೆದರೂ, ಮರುನಾಮಕರಣ ಮಾಡಿ ಏಳು ವರ್ಷ ಕಳೆದರೂ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸರ್ಕಾರ ಪದೇ ಪದೇ ಯೋಜನೆಯ ಅವಧಿಯನ್ನು ವಿಸ್ತರಿಸುತ್ತಲೇ ಇದೆ

ಹಿನ್ನಲೆ

  • ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಸರ್ಕಾರದ ಹಲವು ಯೋಜನೆಗಳ ಹೆಸರನ್ನು ಬದಲಿಸಿತ್ತು. 2011ರಲ್ಲಿ ಯುಪಿಎ-2 ಸರ್ಕಾರವು ‘ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲ’ ಯೋಜನೆಯನ್ನು ಆರಂಭಿಸಿತ್ತು. 2014ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ, ‘ಭಾರತ್‌ನೆಟ್’ ಎಂದು ಮರುನಾಮಕರಣ ಮಾಡಿದರು.

ಯೋಜನೆಯ ಹಂತ ಹಾಗೂ ಗುರಿಗಳು

  • 2017; ಮೊದಲ ಹಂತದಲ್ಲಿ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಭೂಗತ ಆಪ್ಟಿಕ್ ಫೈಬರ್ ಕೇಬಲ್ (ಒಎಫ್‌ಸಿ) ಹಾಕುವ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವುದು
  • 2019; ಎರಡನೇ ಹಂತದಲ್ಲಿ ದೇಶದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಭೂಗತ ಫೈಬರ್, ಫೈಬರ್ ಓವರ್ ಪವರ್ ಲೈನ್ಸ್, ರೇಡಿಯೊ ಮತ್ತು ಉಪಗ್ರಹ ಮಾಧ್ಯಮದ ಅತ್ಯುತ್ತಮ ಸಂಪರ್ಕ ಒದಗಿಸುವುದು
  • 2019–2023; ಮೂರನೇ ಹಂತದಲ್ಲಿ ಅತ್ಯಾಧುನಿಕ, ಫ್ಯೂಚರ್‌ ಪ್ರೂಫ್ ನೆಟ್‌ವರ್ಕ್‌, ಜಿಲ್ಲೆಗಳು ಮತ್ತು ಬ್ಲಾಕ್‌ಗಳ ನಡುವೆ ಫೈಬರ್ ಸೇರಿದಂತೆ ರಿಂಗ್ ಟೋಪೋಲಜಿ ಒದಗಿಸುವುದು