Published on: August 9, 2022

ಭಾರತ–ಅಮೆರಿಕ ಮೆಗಾ ಸಮರಾಭ್ಯಾಸ

ಭಾರತ–ಅಮೆರಿಕ ಮೆಗಾ ಸಮರಾಭ್ಯಾಸ

ಸುದ್ದಿಯಲ್ಲಿ ಏಕಿದೆ?

ಚೀನಾ ಹಾಗೂ ತೈವಾನ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಭಾರತ–ಅಮೆರಿಕ, ಚೀನಾ ಗಡಿಯಲ್ಲಿ ಜಂಟಿ ಮೆಗಾ ಸಮರಾಭ್ಯಾಸ ನಡೆಸಲು ಯೋಜಿಸಿವೆ.

ಮುಖ್ಯಾಂಶಗಳು

  • 2022 ಅಕ್ಟೋಬರ್ 14 ರಿಂದ 31ರವರೆಗೆ ಭಾರತ ಹಾಗೂ ಅಮೆರಿಕದ ಮಿಲಿಟರಿ ವಿಭಾಗದಿಂದ ಉತ್ತರಾಖಂಡದ ಹೌಲಿಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಇದು ಭಾರತ–ಅಮೆರಿಕದ 18ನೇ ಆವೃತ್ತಿಯ ಸಮರಾಭ್ಯಾಸ ಆಗಿದೆ.
  • ಚೀನಾ, ಭಾರತದೊಂದಿಗೆ ಹೊಂದಿರುವ ಪೂರ್ವ ಲಡಾಖ್‌ನ ಗಡಿ ಕಲಹ ಪ್ರದೇಶದ ಸನಿಹದಲ್ಲಿ ಉತ್ತರಾಖಂಡದ ಔಲಿ ಇದೆ.
  • ಉತ್ತರಾಖಂಡದ ಔಲಿಯು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಯಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿದೆ, ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿಯಾಗಿದೆ. ಸಮುದ್ರ ಮಟ್ಟದಿಂದ 2,800 ಮೀಟರ್ (9,200 ಅಡಿ) ಎತ್ತರದಲ್ಲಿದೆ.

ಸಮರಾಭ್ಯಾಸ ಬಗ್ಗೆ:

  • ಈ ಸಮರಾಭ್ಯಾಸವು ಭಾರತ ಮತ್ತು ಯುಎಸ್ ಸೈನ್ಯಗಳ ನಡುವೆ ತಿಳುವಳಿಕೆ, ಸಹಕಾರ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
  • ಪೂರ್ವ ಲಡಾಖ್‌ನಲ್ಲಿ ಭಾರತವು ಚೀನಾದೊಂದಿಗಿನ ಗಡಿ ರೇಖೆಯ ಹಿನ್ನಲೆಯಲ್ಲಿ”ಸಮರಾಭ್ಯಾಸ” ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತ-ಅಮೆರಿಕ ರಕ್ಷಣಾ ಸಂಬಂಧಗಳು ಏರುಮುಖದಲ್ಲಿವೆ.
  • ಕಳೆದ ವರ್ಷ ಅಮೆರಿಕ–ಭಾರತ ಜಂಟಿ ಸಮರಾಭ್ಯಾಸವು ಅಮೆರಿಕದ ಅಲಾಸ್ಕಾದಲ್ಲಿ ನಡೆದಿತ್ತು. ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಅಮೆರಿಕ 2016 ರಲ್ಲಿ  ಘೋಷಿಸಿದೆ.
  • ಎರಡೂ ರಾಷ್ಟ್ರಗಳ ನಡುವೆ ಕಳೆದ ಐದಾರು ವರ್ಷಗಳಲ್ಲಿ ಶಸ್ತ್ರಾಸ್ತ್ರ ಖರೀದಿ, ಒಪ್ಪಂದ ಹಾಗೂ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಧಾರಣೆಗಳಾಗಿವೆ.

ಎರಡು ದೇಶಗಳ ರಕ್ಷಣಾ ಇತಿಹಾಸ:

  • 2016 ರಲ್ಲಿ ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೊರಾಂಡಮ್ ಆಫ್ ಅಗ್ರಿಮೆಂಟ್ (LEMOA) ಸೇರಿದಂತೆ ಪ್ರಮುಖ ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
  • COMCASA (ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ) ಅಡಿ ಭಾರತ ಮತ್ತು ಅಮೆರಿಕದ ಮಿಲಟರಿ ನಡುವೆ ಉನ್ನತ ತಂತ್ರಜ್ಞಾನ ಹಂಚಿಕೆಗೆ ಸಂಬಂಧಿಸಿದಂತೆ 2018 ರಲ್ಲಿ ಮಹತ್ವದ ಬದಲಾವಣೆ ಆಗಿದೆ.

ಅಕ್ಟೋಬರ್ 2020 ರಲ್ಲಿ, ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಭಾರತ ಮತ್ತು ಯುಎಸ್ ಬಿಇಸಿಎ (ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ) ಕ್ಕೆ ಸಹಿ ಹಾಕಿದವು. ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಲಾಜಿಸ್ಟಿಕ್ಸ್ ಮತ್ತು ಜಿಯೋಸ್ಪೇಷಿಯಲ್ ನಕ್ಷೆಗಳನ್ನು ಹಂಚಿಕೊಳ್ಳಲು ಒಪ್ಪಂದವು ಮಾಡುತ್ತದೆ.