Published on: February 6, 2023
ಭಾರತ ಇಂಧನ ಸಪ್ತಾಹ-2023
ಭಾರತ ಇಂಧನ ಸಪ್ತಾಹ-2023
ಸುದ್ದಿಯಲ್ಲಿ ಏಕಿದೆ? ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ಕರ್ನಾಟಕದಲ್ಲಿ, ಪ್ರಧಾನಿ ಮೋದಿ ಜಿ 20 ಕಾರ್ಯಕ್ರಮವಾದ ಇಂಡಿಯಾ ಎನರ್ಜಿ ವೀಕ್ ಅನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಾಂಶಗಳು
- ಇದೆ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಇಂಡಿಯನ್ ಆಯಿಲ್‌ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಟ್ವಿನ್-ಕುಕ್ ಟಾಪ್ ಮಾಡೆಲ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.
- ಭಾರತ-ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ “ಭಾರತ ಇಂಧನ ಸಪ್ತಾಹ-2023” ಅನ್ನು ಆಯೋಜಿಸುತ್ತಿದೆ.
- ಭಾರತದಲ್ಲಿ ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ವಿಶ್ವದ ಒಟ್ಟು ಬೇಡಿಕೆಯಲ್ಲಿ ಶೇ 5ರಷ್ಟು ಇದೆ. ಇದು ಮುಂದಿನ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಭಾರತದ ಅಭಿವೃದ್ಧಿಗೆ 4 ಮುಖ್ಯ (ದೇಶೀಯ ಉತ್ಪಾದನೆಯ ಹೆಚ್ಚಳ, ಪೂರೈಕೆಯಲ್ಲಿ ವೈವಿಧ್ಯ, ಜೈವಿಕ ಇಂಧನ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ವಾಹನಗಳ ಬಳಕೆಗೆ ಒತ್ತು) ಸ್ತಂಭಗಳಿವೆ. ಈ ನಾಲ್ಕೂ ಅಂಶಗಳಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ.
- ನಡೆಯುವ ಸ್ಥಳ : ಬೆಂಗಳೂರು
ಘೋಷವಾಕ್ಯ:“ಪ್ರಗತಿ, ಸಹಭಾಗಿತ್ವ ಮತ್ತು ಪರಿವರ್ತನೆ” ಎಂಬುದು ಘೋಷವಾಕ್ಯವಾಗಿದೆ.
ಉದ್ದೇಶ : ಇದು ಜಾಗತಿಕ ಆರ್ಥಿಕ ಪ್ರಗತಿಯ ಇಂಜಿನ್ ಮತ್ತು ಜಾಗತಿಕ ಬಳಕೆಯ ಚಾಲಕಶಕ್ತಿ ಎರಡೂ ಆಗಿರುವ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಅನನ್ಯ ಅವಕಾಶ ಒದಗಿಸುತ್ತದೆ.
ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ
- ಭಾರತದ ಮಹತ್ವಾಕಾಂಕ್ಷೆಯ ಇಂಧನ ಕಾರ್ಯಕ್ರಮ “ಭಾರತ ಇಂಧನ ಸಪ್ತಾಹ-2023” (ಐಇಡಬ್ಲ್ಯೂ-2023)ದ ಮೊದಲ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು.
- 2022ರ ಡಿಸೆಂಬರ್ 23ರಂದು ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ “ಡ್ಯಾನ್ಸಿಂಗ್ ಚಾರ್ಜ್ ಎಲೆಕ್ಟ್ರಿಕ್ ವಾಹನಗಳು”, 2023ರ ಜನವರಿ 8 ರಂದು ನವದೆಹಲಿಯಿಂದ ಮಾನೆಸರ್ ವರೆಗೆ ನಡೆದ ಸುಸ್ಥಿರ ಇಂಧನ ವಾಹನಗಳಿಗಾಗಿ ಕಾರ್ ರ್‍ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳು ಒಳಗೊಂಡಿತ್ತು, ಇವುಗಳ ಮೂಲಕ ಭವಿಷ್ಯದ ಶುದ್ಧ ಹಾಗೂ ಹಸಿರು ಇಂಧನಕ್ಕಾಗಿ ಭಾರತ ಕೈಗೊಂಡಿರುವ ಹಲವು ಹಾದಿಗಳನ್ನು ಬಿಂಬಿಸಲಾಗಿತ್ತು.
- ನೊ ಗೋ ಪ್ರದೇಶಗಳನ್ನು( ಯಾರೂ ಹೋಗಲಾದತಂಹ ಪ್ರದೇಶ) ಶೇಕಡ 99ರಷ್ಟು ತಗ್ಗಿಸುವುದು, ರಾಷ್ಟ್ರೀಯ ದತ್ತಾಂಶ ಭಂಡಾರ(ಎನ್ ಡಿ ಆರ್) ಯೋಜನೆ ಮೂಲಕ ಸುಲಭವಾಗಿ ದತ್ತಾಂಶ ಲಭ್ಯವಾಗುವಂತೆ ಮಾಡುವುದು. ಹೈಡ್ರೋಜನ್ ಸಂಪನ್ಮೂಲ ಮೌಲ್ಯಮಾಪನ(ಎಚ್ ಆರ್ ಎ) ಯೋಜನೆ, ಶ್ರೇಣಿವ್ಯವಸ್ಥೆಯ ಬಾವಿಗಳ ಉಪಕ್ರಮ ಆರಂಭ, ಉತ್ಕೃಷ್ಟ ನಗರ ಅನಿಲ ವಿತರಣಾ ಯೋಜನೆ, ಅನಿಲ ಮೂಲಸೌಕರ್ಯಕ್ಕೆ ಗಣನೀಯ ಒತ್ತು ಮತ್ತಿತರ ಕ್ರಮಗಳು ಸೇರಿವೆ
ನಿಮಗಿದು ತಿಳಿದಿರಲಿ
- ಸಿಎನ್ಜಿ ಸ್ಟೇಷನ್ಗಳು 2014ಲ್ಲಿ 900 ಮಾತ್ರವೇ ಇತ್ತು. ಆದರೆ, ಈಗ 5000ಕ್ಕೆ ಮುಟ್ಟಿವೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ. 2030ರ ಹೊತ್ತಿಗೆ 4 ಎಂಎಂಟಿ ಯಷ್ಟು ಗ್ರೀನ್ ಹೈಡ್ರೋಜನ್ ಉತ್ಪಾದಿಸುತ್ತೇವೆ. ಭಾರತದಲ್ಲಿ ಸೌರಶಕ್ತಿ ಉತ್ಪಾದನೆ ಶೇ 20ರಷ್ಟು ಹೆಚ್ಚಾಗಿದೆ. ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಈ ದಶಕದ ಅಂತ್ಯದಲ್ಲಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಅರ್ಧದಷ್ಟನ್ನು ಪರಿಸರಸ್ನೇಹಿ ಮೂಲಗಳಿಂದಲೂ ಉತ್ಪಾದಿಸುವ ಗುರಿ ಹೊಂದಿದೆ.