Published on: June 6, 2022

‘ಭಾರತ ಗೌರವ್’ ರೈಲು

‘ಭಾರತ ಗೌರವ್’ ರೈಲು

ಸುದ್ಧಿಯಲ್ಲಿ ಏಕಿದೆ?

ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಭಾರತ್‌ ಗೌರವ್‌ ಯೋಜನೆಯನ್ನು ಪರಿಚಯಿಸಿದ್ದು, ಕರ್ನಾಟಕ ಸರ್ಕಾರವು ಎರಡು ತಿಂಗಳೊಳಗೆ ಬೆಂಗಳೂರಿನಿಂದ ಕಾಶಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಪ್ರವಾಸಿ ರೈಲುಗಳ ಭಾಗವಾಗಿರುವ ಮೊದಲ ‘ಭಾರತ್ ಗೌರವ್’ ರೈಲು ಸಂಚಾರ ಆರಂಭಿಸಲು ಉತ್ಸುಕವಾಗಿದೆ.

ಮುಖ್ಯಾಂಶಗಳು

  • ವಾರ್ಷಿಕವಾಗಿ ಕನಿಷ್ಟ 25,000 ಜನರು ರೈಲಿನಲ್ಲಿ ಪ್ರಯಾಣಿಸುವ ನಿರೀಕ್ಷೆಗಳಿವೆ.
  • ಪ್ರವಾಸಿಗರಿಗೆ 7 ದಿನಗಳ ತೀರ್ಥಯಾತ್ರೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ ಈ ಕುರಿತು ಎಸ್’ಡಬ್ಲ್ಯೂಆರ್ ಜೊತೆಗೆ ಮಾತುಕತೆ ನಡೆಸಿದೆ.
  • ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು ಸ್ಥಳೀಯ ಸಾರಿಗೆ ಮತ್ತು ವಸತಿ ಅಗತ್ಯಗಳನ್ನು ನೋಡಿಕೊಳ್ಳಲಿದೆ.
  • ಕರ್ನಾಟಕದ ಖಾಯಂ ನಿವಾಸಿಗಳಿಗೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾದ 5,000 ರೂಪಾಯಿಗಳ ಕಾಶಿ ಯಾತ್ರೆ ಸಬ್ಸಿಡಿಯನ್ನು ಭಾರತ್ ಗೌರವ್ ರೈಲನ್ನು ಬಳಸುವವರು ಮತ್ತು ಇತರ ಸಾರಿಗೆ ವಿಧಾನಗಳನ್ನು ಬಳಸುವವರು ಪಡೆಯಬಹುದು.
  • ದೇಗುಲ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪ್ರಧಾನಿ ಮೋದಿಯವರ ‘ದಿವ್ಯ ಕಾಶಿ, ಭವ್ಯ ಕಾಶಿ’ ಅಭಿಯಾನವನ್ನು ಉತ್ತೇಜಿಸಲು ಕರ್ನಾಟಕದ ಜನರಿಗೆ ಈ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ.

ಭಾರತ್ ಗೌರವ್ ಯೋಜನೆ

  • ಭಾರತ್ ಗೌರವ್ ಯೋಜನೆಯನ್ನು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಪ್ರಪಂಚದ ಜನರಿಗೆ ಪ್ರದರ್ಶಿಸಲು ರೈಲ್ವೇ ಸಚಿವಾಲಯವು ಜಾರಿಗೆ ತಂದಿದ್ದು, ರೈಲುಗಳ ಮಾಲೀಕತ್ವವನ್ನು ರಾಜ್ಯ ಸರ್ಕಾರ ಅಥವಾ ಖಾಸಗಿಯವರು ವಹಿಸಿಕೊಳ್ಳಬಹುದಾಗಿದೆ.