Published on: January 2, 2023

ಭಾರತ- ಪಾಕಿಸ್ತಾನ ಪರಸ್ಪರ ಪರಮಾಣು ಸ್ಥಾವರಗಳು

ಭಾರತ- ಪಾಕಿಸ್ತಾನ ಪರಸ್ಪರ ಪರಮಾಣು ಸ್ಥಾವರಗಳು

ಸುದ್ದಿಯಲ್ಲಿ ಏಕಿದೆ? ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಒಪ್ಪಂದಡಿ ತಮ್ಮ ರಾಷ್ಟ್ರಗಳಲ್ಲಿರುವ ಪರಮಾಣು ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಪದ್ಧತಿ 32 ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮುಖ್ಯಾಂಶಗಳು

  • ಪ್ರತಿ ವರ್ಷ ಜನವರಿಯಲ್ಲಿ ಭಾರತ- ಪಾಕಿಸ್ತಾನ ಪರಸ್ಪರ ಪರಮಾಣು ಸ್ಥಾವರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
  • ನವದೆಹಲಿ ಮತ್ತು ಇಸ್ಲಾಮಾಬಾದ್ ನಲ್ಲಿ ಏಕಕಾಲದಲ್ಲಿ ರಾಯಭಾರಿಗಳ ಮೂಲಕ ಇದು ನಡೆದಿದೆ.
  • ಭಾರತ ಮತ್ತು ಪಾಕಿಸ್ತಾನ ನಡುವಣ ಪರಮಾಣು ಸ್ಥಾವರಗಳ ವಿರುದ್ಧದ ದಾಳಿ ನಿಷೇಧ ಒಪ್ಪಂದಡಿ ಮಾಹಿತಿ ವಿನಿಮಯ ನಡೆದಿದೆ.
  • ತಮ್ಮ ಜೈಲು ಅವಧಿ ಪೂರ್ಣಗೊಳಿಸಿರುವ ಹಾಗೂ ತಮ್ಮ ರಾಷ್ಟ್ರೀಯತೆ ಖಚಿತವಾಗಿರುವ 631 ಭಾರತೀಯ ಮೀನುಗಾರರು ಮತ್ತು ಇಬ್ಬರು ನಾಗರಿಕ ಕೈದಿಗಳ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ಮತ್ತು ಅವರನ್ನು ತಾಯ್ನಾಡಿಗೆ ಮರಳಿಸುವಂತೆ ಪಾಕಿಸ್ತಾನಕ್ಕೆ ಭಾರತ ಸೂಚನೆ ನೀಡಿದೆ.

ಒಪ್ಪಂದ:

  • ಪರಮಾಣು ಘಟಕಗಳ ಮೇಲೆ ದಾಳಿ ನಡೆಸುವುದರಿಂದ ನಿರ್ಬಂಧಿಸುವಂತೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳ ಅಡಿಯಲ್ಲಿ ಪರಮಾಣು ಸ್ಥಾವರಗಳು ಹಾಗೂ ಸೌಲಭ್ಯಗಳ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಕ್ಕೆ 1988ರ ಡಿ. 31ರಂದು ಸಹಿ ಹಾಕಲಾಗಿತ್ತು. 1991ರ ಜನವರಿ 27ರಂದು ಇದು ಜಾರಿಗೆ ಬಂದಿತ್ತು.
  • 2008ರ ಒಪ್ಪಂದಕ್ಕೆ ಅನುಗುಣವಾಗಿ ಪ್ರತಿ ಕ್ಯಾಲೆಂಡರ್ ವರ್ಷದ ಜನವರಿ 1 ಮತ್ತು ಜೂನ್ 1ರಂದು ಎರಡೂ ದೇಶಗಳು ತಮ್ಮಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಹಂಚಿಕೊಳ್ಳುತ್ತವೆ.