Published on: January 25, 2024

‘ಭಾರತ ರತ್ನ’ ಪ್ರಶಸ್ತಿ

‘ಭಾರತ ರತ್ನ’ ಪ್ರಶಸ್ತಿ

ಸುದ್ದಿಯಲ್ಲಿ ಏಕಿದೆ? ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ.

ಮುಖ್ಯಾಂಶಗಳು

  • ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ.
  • ಕರ್ಪೂರಿ ಠಾಕೂರ್ ಅವರ ಜನ್ಮದಿನವನ್ನು 24 ಜನವರಿ 2024 ರಂದು ಆಚರಿಸಲಾಗುತ್ತಿದೆ, ಅದಕ್ಕೂ ಮುನ್ನ ಪ್ರಶಸ್ತಿಯನ್ನು ನೀಡಿ ಗೌರಿಸಲಾಯಿತು

ಕರ್ಪೂರಿ ಠಾಕೂರ್

  • ಜನನ: 24 ಜನವರಿ 1924, ಬಿಹಾರದ ಸಮಸ್ತಿಪುರ ಜಿಲ್ಲೆಯ ಪಿತೌಂಜಿಯಾ (ಈಗ ಕರ್ಪುರಿ ಗ್ರಾಮ) ಗ್ರಾಮ
  • ಮರಣ: 17 ಫೆಬ್ರವರಿ 1988, ಪಾಟ್ನಾ
  • ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಶಿಕ್ಷಕರೂ ಆಗಿದ್ದರು.
  • ಮಂಡಲ ಚಳವಳಿಗೂ ಮುನ್ನ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಮೀಸಲಾತಿ ನೀಡಿದ್ದರು.
  • ಲೋಕನಾಯಕ್ ಜೈಪ್ರಕಾಶ್ ನಾರಾಯಣ್ ಮತ್ತು ರಾಮ್ ಮನೋಹರ್ ಲೋಹಿಯಾ ಇವರ ರಾಜಕೀಯ ಗುರುಗಳು.
  • ಬಿಹಾರ ರಾಜ್ಯದಲ್ಲಿ ಜನನಾಯಕ ಎಂದೇ ಖ್ಯಾತರಾಗಿದ್ದ ಅವರು ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರ ವರೆಗೆ ಸಿಎಂ ಆಗಿದ್ದರು.
  • ಕರ್ಪೂರಿ ಎರಡು ಬಾರಿ ಬಿಹಾರದ ಉಪಮುಖ್ಯಮಂತ್ರಿಯಾಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ

ಭಾರತ ರತ್ನ 

  • ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿಯಾಗಿದೆ
  • ಭಾರತ ರತ್ನ ಪ್ರಶಸ್ತಿಯನ್ನು ಕಲೆ ಸಾಹಿತ್ಯ ವಿಜ್ಞಾನ ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.
  • ಸ್ಥಾಪನೆ: 1954ರಲ್ಲಿ ಆರಂಭಿಸಲಾಯಿತು
  • ಕೊನೆಯ ಪ್ರಶಸ್ತಿ ಪುರಸ್ಕೃತರು 2019 ಪ್ರಣವ್ ಮುಖರ್ಜಿ ಬೋಪೇನ್ ಹಜಾರಿಕಾ ನಾನಾಜಿ ದೇಶಮುಖ್ ಮೊದಲ ಪ್ರಶಸ್ತಿ ಪುರಸ್ಕೃತರು: 1954 ರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಸರ್ ಸಿ ವಿ ರಾಮನ್ ಶ್ರೀ ರಾಜಗೋಪಾಲಚಾರಿ
  • ಅರಳಿ ಎಲೆಯ ಚಿತ್ರದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ ಭಾರತ ರತ್ನ ಎಂದು ಬರೆದಿರುತ್ತದೆ
  • ಈ ಪ್ರಶಸ್ತಿಯನ್ನು ವರ್ಷಕ್ಕೆ ಗರಿಷ್ಠ ಮೂರು ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ.
  • ಸ್ವೀಕರಿಸುವವರಿಗೆ ರಾಷ್ಟ್ರಪತಿಗಳು ಸಹಿ ಮಾಡಿದ ಸನದ್ (ಪ್ರಮಾಣಪತ್ರ) ಮತ್ತು ಪದಕವನ್ನು ನೀಡಲಾಗುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ (MHA) ಪ್ರಕಾರ ಭಾರತ ರತ್ನವು ಯಾವುದೇ ಹಣಕಾಸಿನ ಅನುದಾನವನ್ನು ಹೊಂದಿರುವುದಿಲ್ಲ.