Published on: August 5, 2021

ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್ ಪದಕ!

ಭಾರತ ಹಾಕಿ ತಂಡಕ್ಕೆ ಒಲಿಂಪಿಕ್ಸ್ ಪದಕ!

ಸುದ್ಧಿಯಲ್ಲಿ ಏಕಿದೆ ? ಟೋಕಿಯೋ ಒಲಿಂಪಿಕ್ಸ್ ಹಾಕಿ ಪುರುಷರ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆದ್ದ ಭಾರತ ತಂಡ, 41 ವರ್ಷಗಳ ಬಳಿಕ ಮಹತ್ವದ ಕ್ರೀಡಾಕೂಟದಲ್ಲಿ ಪದಕ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತು.

  • ಇನ್ನು ಈ ಹಿಂದೆ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ 41 ವರ್ಷಗಳ ಬಳಿಕ ಮತ್ತೆ ಪದಕ ಗೆದ್ದ ಸಾಧನೆ ಮಾಡಿದೆ.
  • ಪುರುಷ ಹಾಕಿಯಲ್ಲಿ ಮೂರನೇ ಕಂಚಿನ ಪದಕದ ಸಾಧನೆ: ಈ ಹಿಂದೆ 1968ರ ಮೆಕ್ಸಿಕೋ ಸಿಟಿ ಹಾಗೂ 1972ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲೂ ಕಂಚಿನ ಪದಕ ಜಯಿಸಿತ್ತು.

ಪದಕದ ಇತಿಹಾಸ

  • 1908ರಲ್ಲಿ ಒಲಿಂಪಿಕ್ಸ್ ಮಹಾಕ್ರೀಡಾಕೂಟದಲ್ಲಿ ಹಾಕಿ ಕ್ರೀಡೆಯನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಲ್ಲಿಂದ ಇದುವರೆಗೆ ಭಾರತ ಒಟ್ಟು ಎಂಟು ಚಿನ್ನದ ಪದಕಗಳನ್ನು ಜಯಿಸಿದೆ. ಇದರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೂರು ಚಿನ್ನದ ಪದಕಗಳು ಸೇರಿವೆ.
  • 1932ರಿಂದ 1956ರ ವರೆಗೆ ಭಾಗವಹಿಸಿದ ಆರು ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿ ತಂಡವು ಸತತವಾಗಿ ಚಿನ್ನ ಗೆದ್ದ ಸಾಧನೆ ಮಾಡಿತು. 1960ರಲ್ಲಿ ಪಾಕಿಸ್ತಾನ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ 1964ರಲ್ಲಿ ಮತ್ತದೇ ಪಾಕಿಸ್ತಾನವನ್ನು ಮಣಿಸಿ ಸ್ವರ್ಣದ ಪದಕಕ್ಕೆ ಮುತ್ತಿಕ್ಕಿತು. 1968 ಹಾಗೂ 1972ರಲ್ಲಿ ಕಂಚಿನ ಪದಕ ಜಯಿಸಿತು.