Published on: December 13, 2021

ಭುವನ ಸುಂದರಿ

ಭುವನ ಸುಂದರಿ

ಸುದ್ಧಿಯಲ್ಲಿ ಏಕಿದೆ? ಭಾರತದ ಮೂರನೇ ಭುವನ ಸುಂದರಿಯಾಗಿ ಪಂಜಾಬ್ ಮೂಲದ ರೂಪದರ್ಶಿ, ನಟಿ ಹರ್ನಾಜ್ ಕೌರ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅವರು ಪರಗ್ವೆ ಹಾಗೂ ದಕ್ಷಿಣ ಆಫ್ರಿಕಾದ ಸ್ಪರ್ಧಿಗಳನ್ನು ಹಿಂದಿಕ್ಕಿ ಕಿರೀಟ ಧರಿಸಿದ್ದಾರೆ.

ಮುಖ್ಯಾಂಶಗಳು

  • ಭಾರತಕ್ಕೆ ಸುಮಾರು 21 ವರ್ಷಗಳ ಬಳಿಕ ಮತ್ತೆ ಭುವನ ಸುಂದರಿ ಕಿರೀಟ ಒಲಿದಿದೆ.
  • 2020ರ ಮಾಜಿ ಭುವನ ಸುಂದರಿ, ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಅವರಿಗೆ ಕಿರೀಟ ತೊಡಿಸಿದರು.
  • ಪರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರು ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿದರು. ಪೋರ್ಟರಿಕೋ, ಅಮೆರಿಕ, ಬಹಾಮಸ್, ಪರಗ್ವೆ, ದಕ್ಷಿಣ ಆಫ್ರಿಕಾ, ಪಿಲಿಪ್ಪೀನ್ಸ್, ಫ್ರಾನ್ಸ್, ಕೊಲಂಬಿಯಾ ಮತ್ತು ಅರುಬಾದ ಸ್ಪರ್ಧಿಗಳು ಟಾಪ್ 10ಕ್ಕೆ ಆಯ್ಕೆಯಾಗಿದ್ದರು.

ಮಿಸ್ ಯೂನಿವರ್ಸ್ ಸ್ಪರ್ಧೆ

  • ಮಿಸ್ ಯೂನಿವರ್ಸ್ ಸ್ಪರ್ಧೆ 1952ರಲ್ಲಿ ಆರಂಭವಾಗಿತ್ತು. ಆದರೆ ಭಾರತಕ್ಕೆ ಮೊದಲ ಬಾರಿ ಭುವನ ಸುಂದರಿ ಕಿರೀಟ ಒಲಿದಿದ್ದು 42 ವರ್ಷಗಳ ಬಳಿಕ. 1994ರಲ್ಲಿ ನಟಿ ಸುಷ್ಮಿತಾ ಸೇನ್ ಅವರು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. ಅವರ ಬಳಿಕ ಲಾರಾ ದತ್ತಾ ಕಿರೀಟ ಧರಿಸಿದ್ದರು.