Published on: January 30, 2023
‘ಭೂಮಿ ಸಾಮರ್ಥ್ಯ ಅಧ್ಯಯನ’
‘ಭೂಮಿ ಸಾಮರ್ಥ್ಯ ಅಧ್ಯಯನ’
ಸುದ್ದಿಯಲ್ಲಿ ಏಕಿದೆ? ಇತರೆ ಪ್ರವಾಸಿ ತಾಣಗಳಲ್ಲಿ ಜೋಶಿಮಠದಂತಹ ವಿಪತ್ತನ್ನು ತಡೆಯಲು ಪ್ರವಾಸೋದ್ಯಮ ಸಚಿವಾಲಯವು ಎಲ್ಲಾ ಪ್ರವಾಸಿ ತಾಣಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿನ ಭೂಮಿ ಸಾಮರ್ಥ್ಯ ಕುರಿತು ಅಧ್ಯಯನ ನಡೆಸಲು ಮುಂದಾಗಿದೆ.
ಮುಖ್ಯಾಂಶಗಳು
- ಪ್ರವಾಸಿ ತಾಣಗಳಲ್ಲಿ ಅತಿಯಾದ ಶೋಷಣೆಯನ್ನು ತಪ್ಪಿಸಲು ಸುಸ್ಥಿರ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುತ್ತಿದೆ.
- ಪರಿಸರ ಸಂರಕ್ಷಣೆ, ಒಂದು ಪ್ರದೇಶದಲ್ಲಿ ಪ್ರವಾಸೋದ್ಯಕ್ಕೆ ಅನುಮತಿ ನೀಡುವುದು ಹಾಗೂ ಸ್ಥಳೀಯರಿಗೆ ಜೀವನೋಪಾಯ ಒದಗಿಸುವುದಕ್ಕೆ ಒತ್ತು ನೀಡಲಾಗುತ್ತಿದೆ.
- ರಾಷ್ಟ್ರೀಯ ಪ್ರವಾಸೋದ್ಯಮ ಡಿಜಿಟಲ್ ದಾಖಲೆಯ ಅಡಿಯಲ್ಲಿ ಸಚಿವಾಲಯವು ಸುಸ್ಥಿರ ಪ್ರವಾಸೋದ್ಯಮ ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿಗೆ ಪರಿಸರ-ರೇಟಿಂಗ್ ಗಳನ್ನು ನೀಡಲಾಗುತ್ತಿದೆ.
ಪೋರ್ಟಲ್ ಸ್ಥಾಪನೆ
- “ಪೋರ್ಟಲ್‌ನಲ್ಲಿ ಡಿಜಿಟಲ್ ಡಾಕ್ಯುಮೆಂಟ್ ಅನ್ನು ರಚಿಸಲಾಗುತ್ತಿದೆ.. ಎಲ್ಲಾ ಪ್ರವಾಸಿಗರು ಮತ್ತು ಮಧ್ಯಸ್ಥಗಾರರನ್ನು ಪ್ರೋತ್ಸಾಹಿಸಲಾಗುತ್ತದೆ, ಇದು ಪೂರೈಕೆದಾರರು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳು ಒಂದೇ ಪೋರ್ಟಲ್‌ನಲ್ಲಿ ಲಭ್ಯವಿರಲಿದೆ. ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳನ್ನು ಅವುಗಳ ಸುಸ್ಥಿರ ಮಾದರಿಗಳಿಗಾಗಿ ಗುರುತಿಸಲಾಗುತ್ತದೆ ಮತ್ತು ಸಚಿವಾಲಯವು ಇದಕ್ಕೆ ರೇಟ್’ನ್ನು ನೀಡುತ್ತದೆ.
- ಉದ್ದೇಶ : ಅಧ್ಯಯನದ ವರದಿ ಆಧರಿಸಿ ಮುಂದಿನ ಅಭಿವೃದ್ಧಿ ಕಾರ್ಯಗಳು ಹಾಗೂ ಅನುಮತಿಗಳನ್ನು ನೀಡಲು ಪ್ರವಾಸೋದ್ಯಮ ಸಚಿವಾಲಯವು ಚಿಂತನೆ ನಡೆಸುತ್ತಿದೆ.
- ಕಾರಣ: ಜೋಶಿಮಠದಲ್ಲಿ ಎದುರಾದ ಭೂಕುಸಿತ ಘಟನೆ ಬಳಿಕ ಪ್ರವಾಸಿಗರು, ಸುರಕ್ಷಿತ ಪ್ರವಾಸಿ ತಾಣಗಳು ಮತ್ತು ಹೋಟೆಲ್‌ಗಳಿಗೆ ಬೇಡಿಕೆಗಳನ್ನು ಇಡುತ್ತಿದ್ದಾರೆ.