Published on: June 11, 2022

ಮಂಗಳನಲ್ಲಿ ಮೊನಚು ಆಕೃತಿ ಪತ್ತೆ

ಮಂಗಳನಲ್ಲಿ ಮೊನಚು ಆಕೃತಿ ಪತ್ತೆ

ಸುದ್ದಿಯಲ್ಲಿ ಏಕಿದೆ?

ಮಂಗಳ ಗ್ರಹದಲ್ಲಿ ‘ಕ್ಯೂರಿಯಾಸಿಟಿ ರೋವರ್’ ಗುರುತಿಸಿರುವ ಮೊನಚು ಆಕೃತಿಯ ಚಿತ್ರಗಳನ್ನು ನಾಸಾ ಇತ್ತೀಚೆಗೆ ಬಿಡುಗಡೆ ಮಾಡಿದೆ.

ಮುಖ್ಯಾಂಶಗಳು

  • ನಾಸಾದ ‘ಸಿಇಟಿಐ ಇನ್ಸ್ಟಿಟ್ಯೂಟ್’ ಟ್ವಿಟರ್ನಲ್ಲಿ ಚಿತ್ರವನ್ನು ಹಂಚಿಕೊಂಡಿದೆ.
  • ‘ಮೊನಚು ಆಕೃತಿಗಳು ಬಂಡೆಗಲ್ಲುಗಳ ನಡುವಿನ ಟೊಳ್ಳಾದ ಭಾಗದಲ್ಲಿ ತುಂಬಿಕೊಂಡ ಸಿಮೆಂಟ್ನಂಥ ಪದರಗಳಾಗಿವೆ. ಮೃದುವಾದ ಬಂಡೆಗಳು ಸವೆದು ಹೋದ ಬಳಿಕವು ಸಿಮೆಂಟ್ನಂಥ ಈ ರಚನೆಗಳು ಹಾಗೆಯೇ ಉಳಿದುಕೊಂಡಿವೆ’ ಎಂದು ಅದು ತಿಳಿಸಿದೆ.
  • ಮಂಗಳನಲ್ಲಿನ ದೊಡ್ಡ ಕುಳಿ ‘ಗೇಲ್ ಕ್ರೇಟರ್’ನಲ್ಲಿ ಈ ಆಕೃತಿ ಪತ್ತೆಯಾಗಿದೆ.
  • ನಾಸಾ ಮಂಗಳನಲ್ಲಿಗೆ ಕಳುಹಿಸಿರುವ ‘ಕ್ಯೂರಿಯಾಸಿಟಿ ರೋವರ್’ ‘ಗೇಲ್ ಕ್ರೇಟರ್’ನ ಅನ್ವೇಷಣೆಯಲ್ಲಿ ತೊಡಗಿದೆ.
  • ಇನ್ನು ‘ಸಿಇಟಿಐ ಇನ್ಸ್ಟಿಟ್ಯೂಟ್’ ಎಂಬುದು ಅಂತರಿಕ್ಷದಲ್ಲಿ ಇರಬಹುದಾದ ಜೀವಿಗಳ ಅನ್ವೇಷಣೆಗೆಂದು ನಾಸಾ ಆರಂಭಿಸಿರುವ ಕಾರ್ಯ ಯೋಜನೆಯಾಗಿದೆ.