Published on: November 15, 2021

ಮಕ್ಕಳ ಮೇಲೆ ಸೈಬರ್ ದೌರ್ಜನ್ಯ

ಮಕ್ಕಳ ಮೇಲೆ ಸೈಬರ್ ದೌರ್ಜನ್ಯ

ಸುದ್ಧಿಯಲ್ಲಿ ಏಕಿದೆ ? ದೇಶಾದ್ಯಂತ ಮಕ್ಕಳ ಮೇಲೆ ನಡೆದ ಸೈಬರ್‌ ದೌರ್ಜನ್ಯ ಪ್ರಕರಣಗಳು 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ.400ರಷ್ಟು ಹೆಚ್ಚಾಗಿದೆ. ಮಕ್ಕಳ ಮೇಲಿನ ಸೈಬರ್‌ ದೌರ್ಜನ್ಯ ಪ್ರಕರಣಗಳು ಜಾಸ್ತಿ ದಾಖಲಾಗಿರುವ ಐದು ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ವರದಿಯಲ್ಲಿ ಏನಿದೆ ?

  • ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (ಎನ್‌ಸಿಆರ್‌ಬಿ) ಈ ಕುರಿತು ವರದಿ ನೀಡಿದ್ದು, ‘ಕಳೆದ ವರ್ಷ ಮಕ್ಕಳ ಮೇಲೆ ಸೈಬರ್‌ ತಂತ್ರಜ್ಞಾನ ಬಳಸಿ ದೌರ್ಜನ್ಯ ಎಸಗಿರುವ ಕುರಿತು 842 ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಉತ್ತರ ಪ್ರದೇಶದಲ್ಲಿಯೇ ಹೆಚ್ಚು ಅಂದರೆ, 170 ಕೇಸ್‌ ದಾಖಲಾಗಿವೆ. ಹಾಗೆಯೇ, ಕರ್ನಾಟಕದಲ್ಲಿ 144 ಪ್ರಕರಣ ದಾಖಲಾಗಿವೆ’
  • ಎನ್‌ಸಿಆರ್‌ಬಿ ವರದಿ ಪ್ರಕಾರ, 2019ರಲ್ಲಿ ದೇಶಾದ್ಯಂತ ಮಕ್ಕಳ ಮೇಲೆ ಸೈಬರ್‌ ದೌರ್ಜನ್ಯ ಎಸಗಿದ ಕುರಿತು 164 ಕೇಸ್‌ ದಾಖಲಾಗಿದ್ದವು. ಅದೇ ರೀತಿ, 2018ರಲ್ಲಿ 117 ಪ್ರಕರಣ, 2017ರಲ್ಲಿ 79 ಪ್ರಕರಣ ದಾಖಲಾಗಿದ್ದವು.

ದೌರ್ಜನ್ಯ ಹೆಚ್ಚಳಕ್ಕೆ ಕಾರಣ

  • ಕೊರೊನಾ ಕಾರಣದಿಂದಾಗಿ ಮಕ್ಕಳು ಹೆಚ್ಚಿನ ಅವಧಿಯನ್ನು ಆನ್‌ಲೈನ್‌ನಲ್ಲಿಯೇ ಕಳೆಯುತ್ತಿರುವುದರಿಂದ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ.
  • ಲೈಂಗಿಕ ಪ್ರಚೋದನೆ, ಅಶ್ಲೀಲ ಚಿತ್ರಗಳ ವೀಕ್ಷಣೆ, ದೌರ್ಜನ್ಯ, ಅಶ್ಲೀಲ ಚಿತ್ರಗಳ ರವಾನೆ ಸೇರಿ ಹಲವು ರೀತಿಯಲ್ಲಿ ದೌರ್ಜನ್ಯಕ್ಕೀಡಾಗುತ್ತಾರೆ