Published on: August 2, 2021

ಮದ್ರಾಸ್‌ ವಿಧಾನ ಪರಿಷತ್‌ ಶತಮಾನೋತ್ಸವ

ಮದ್ರಾಸ್‌ ವಿಧಾನ ಪರಿಷತ್‌ ಶತಮಾನೋತ್ಸವ

ಸುದ್ಧಿಯಲ್ಲಿ ಏಕಿದೆ ?  ಮದ್ರಾಸ್‌ ವಿಧಾನ ಪರಿಷತ್‌ನ (ಎಂಎಲ್‌ಸಿ) ಶತಮಾನೋತ್ಸವ ಕಾರ್ಯಕ್ರಮ  (ಆಗಸ್ಟ್‌ 2) ವಿಧಾನಸಭೆಯಲ್ಲಿ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮದ್ರಾಸ್‌ ವಿಧಾನ ಪರಿಷತ್‌ನ ಇತಿಹಾಸ

  • 1921ರ ಜನವರಿ 12ರಂದು ಮದ್ರಾಸ್‌ ವಿಧಾನಪರಿಷತ್‌ ಅಸ್ತಿತ್ವಕ್ಕೆ ಬಂತು. ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ಜಸ್ಟಿಸ್‌ ಪಾರ್ಟಿ ಆಗ ಮೊದಲ ಸರ್ಕಾರ ರಚಿಸಿತ್ತು. ಇದೇ ನಂತರದ ದಿನಗಳಲ್ಲಿ ಡಿಎಂಕೆ ಪಕ್ಷವಾಯಿತು.
  • ಕೆಲ ವರ್ಷಗಳ ನಂತರ ಆಗಿನ ಮದ್ರಾಸ್‌ ರಾಜ್ಯದ ವಿಧಾನಸಭೆ ಎಂದು ಕರೆಯಲಾದ ಮದ್ರಾಸ್‌ ವಿಧಾನ ಪರಿಷತ್‌, ಭಾಷಾವಾರು ಪ್ರಾಂತ್ಯಗಳ ರಚನೆ ನಂತರ ತಮಿಳುನಾಡು ವಿಧಾನಸಭೆಯಾಯಿತು.

ಐತಿಹಾಸಿಕ ಮಹತ್ವ:

  • ಮದ್ರಾಸ್‌ ವಿಧಾನ ಪರಿಷತ್‌ನಲ್ಲಿ ಹಲವು ಮಹತ್ವದ ಶಾಸನಗಳನ್ನು ಅಂಗೀಕರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಕಾಯ್ದೆ (1926), ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ, ಬಡವರಿಗೆ ನಿವೇಶನಗಳನ್ನು ಉಚಿತವಾಗಿ ಹಂಚಿಕೆ ಮಾಡುವ ಕಾಯ್ದೆಗಳನ್ನು ಅಂಗೀಕರಿಸಿದ್ದು ಇದರ ಹೆಗ್ಗಳಿಕೆಯಾಗಿದೆ.