Published on: August 27, 2022

ಮಧ್ಯಾಹ್ನದ ಬಿಸಿಯೂಟಕ್ಕೆ ಪೌಷ್ಟಿಕಾಂಶ

ಮಧ್ಯಾಹ್ನದ ಬಿಸಿಯೂಟಕ್ಕೆ ಪೌಷ್ಟಿಕಾಂಶ

ಸುದ್ದಿಯಲ್ಲಿ ಏಕಿದೆ?

ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಜೋಳ, ಸಜ್ಜೆ ಮತ್ತು ರಾಗಿಯನ್ನು ರಾಜ್ಯ ಹಾಗೂ ದೇಶದಾದ್ಯಂತ ಪರಿಚಯಿಸಲಾಗುವುದು. ಪೋಷಣ್ ಅಭಿಯಾನದ ಭಾಗವಾಗಿ ಮಕ್ಕಳ ಊಟದಲ್ಲಿ ಪೌಷ್ಟಿಕಾಂಶವನ್ನು ಸೇರಿಸಲು ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR), ಅಕ್ಷಯ ಪಾತ್ರಾ ಫೌಂಡೇಶನ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಾಂಶಗಳು

  • ಈ ಬದಲಾವಣೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು. ಬೆಂಗಳೂರು ಮತ್ತು ಹೈದರಾಬಾದ್‌ನ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಗುವುದು. ಪ್ರತಿಕ್ರಿಯೆಯ ಆಧಾರದ ಮೇಲೆ, ಪರಿಷ್ಕರಣೆಗಳನ್ನು ಮಾಡಲಾಗುತ್ತದೆ ಮತ್ತು ಅವುಗಳನ್ನು ಎಲ್ಲಾ ಶಾಲೆಗಳಲ್ಲಿ ಪರಿಚಯಿಸಲಾಗುತ್ತದೆ. ಆರಂಭದಲ್ಲಿ, ವಾರಕ್ಕೊಮ್ಮೆ ಆಹಾರವನ್ನು ಬದಲಾಯಿಸಲಾಗುತ್ತದೆ.
  • ಮಕ್ಕಳಿಗೆ ಇವುಗಳ ರುಚಿ ಸಿಗುವಂತೆ ಸಂಯೋಜನೆಯಲ್ಲಿ ಇವುಗಳನ್ನು ಪರಿಚಯಿಸಲಾಗುವುದು. ಗೋಧಿ ಮತ್ತು ಅಕ್ಕಿಯೊಂದಿಗೆ ಬಹು ಧಾನ್ಯದ ಸಂಯೋಜನೆಯನ್ನು ಸಹ ನೀಡಲಾಗುವುದು. ಆರಂಭದಲ್ಲಿ ರಾಗಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
  • ಇದರೊಂದಿಗೆ ಮಕ್ಕಳಿಗೆ ಪ್ರೋಟೀನ್, ಕ್ಯಾಲೋರಿಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಮೂಲವನ್ನು ಹೆಚ್ಚಿಸಲಾಗುವುದು ಮತ್ತು ನಿಯಮಿತವಾಗಿ ಅವರಿಂದ ಪ್ರತಿಕ್ರಿಯೆಯನ್ನು ಕೇಳಲಾಗುತ್ತದೆ. 2023 ರಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಿಲೆಟ್ಸ್ ವರ್ಷಕ್ಕೆ ಮುಂಚಿತವಾಗಿಯೇ ಈ ಉಪಕ್ರಮವನ್ನು ಶಾಲೆಗಳಲ್ಲಿ ಕೈಗೊಳ್ಳಲಾಗಿದೆ.

ಅಕ್ಷಯ ಪಾತ್ರ ಫೌಂಡೇಶನ್‌ನ (APF)

  • ಅಕ್ಷಯ ಪಾತ್ರ ಫೌಂಡೇಶನ್ ಬೆಂಗಳೂರಿನಲ್ಲಿರುವ ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ನ ಟ್ರಸ್ಟ್ ಆಗಿದೆ. ಇದು ಭಾರತದಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು (ಶಾಲೆಯ ಊಟದ ಕಾರ್ಯಕ್ರಮ) ನಿರ್ವಹಿಸುತ್ತದೆ.

ಮಧ್ಯಾಹ್ನದ ಊಟದ ಕಾರ್ಯಕ್ರಮ·       

  • ಅಕ್ಷಯ ಪಾತ್ರವು ಭಾರತದ ಸರ್ಕಾರಿ ಶಾಲೆಗಳಲ್ಲಿ ಮಿಡ್ ಡೇ ಮೀಲ್ ಯೋಜನೆಯನ್ನು ಜಾರಿಗೆ ತರಲು ಭಾರತದ ಕೇಂದ್ರ ಸರ್ಕಾರದ ಅತಿದೊಡ್ಡ ಪಾಲುದಾರ. ಈ ಯೋಜನೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಆಧರಿಸಿದೆ.·
  • ಎಪಿಎಫ್ ಅನ್ನು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್, ಬೆಂಗಳೂರು) ನಡೆಸುತ್ತಿದೆ. ಸಂಸ್ಥೆಯನ್ನು 2000 ರಲ್ಲಿ ಸ್ಥಾಪಿಸಲಾಯಿತು.

ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ (IIMR)·       

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಒಂದು ಕೃಷಿ ಸಂಶೋಧನಾ ಸಂಸ್ಥೆಯಾಗಿದ್ದು, ಜೋಳ ಮತ್ತು  ಇತರ ಸಿರಿ ದಾನ್ಯಗಳ  ಮೇಲೆ ಮೂಲಭೂತ ಮತ್ತು ಕಾರ್ಯತಂತ್ರದ ಸಂಶೋಧನೆಯಲ್ಲಿ ತೊಡಗಿದೆ. ·
  • ಐಐಎಂಆರ್ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.·
  • ಸ್ಥಾಪನೆ: 1958·
  • ಸ್ಥಳ: ಹೈದರಾಬಾದ ತೆಲಂಗಾಣದ ರಾಜೇಂದ್ರನಗರ

ಪೋಷಣ್ ಅಭಿಯಾನ·       

  • ಪೋಷಣ್ ಅಭಿಯಾನ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಮಕ್ಕಳು, ಹದಿಹರಿಯದ ಬಾಲಕಿಯರು, ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶ ಹೊಂದಿದೆ.  2018 ರ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜಸ್ಥಾನದ ಜುನ್ ಜುನುವಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ·
  • ಪೋಷಣ್ ಅಭಿಯಾನ ಜನಾಂದೋಲನ ಅಥವಾ “ಜನರ ಚಳವಳಿ”. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳು ಮತ್ತು ಸಾರ್ವಜನಿಕ, ಖಾಸಗಿ ವಲಯವನ್ನು ಸಂಯೋಜಿಸಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವುದು. ಸಮುದಾಯವನ್ನು ಸಜ್ಜುಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ಪೋಷಣ್ ಮಾಸ ಆಚರಿಸಲಾಗುತ್ತಿದೆ.

ಉದ್ದೇಶ       

  • ಪೋಷಣ್ [ಪ್ರಧಾನಮಂತ್ರಿ ಅವರ ಸಮಗ್ರ ಪೋಷಣೆ ಕುರಿತ ಯೋಜನೆ] ಅಭಿಯಾನ ಅಪೌಷ್ಟಿಕತೆ ಸಮಸ್ಯೆಗಳತ್ತ ದೇಶದ ಗಮನ ಸೆಳೆಯುವ ಮತ್ತು ಅಭಿಯಾನದ ಮಾದರಿಯಲ್ಲಿ ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದೆ. ·
  • ಈ ಗುರಿಯನ್ನು ಕೇಂದ್ರೀಕರಿಸಿ ಪೋಷಣ್ ಅಭಿಯಾನ, ಮಿಷನ್ ಪೋಷಣ್ 2.0 [ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0] ಕಾರ್ಯಕ್ರಮವನ್ನು 2021 – 2022  ರ ಬಜೆಟ್ ನಲ್ಲಿ ಸಮಗ್ರ ಪೌಷ್ಟಿಕ ಬೆಂಬಲ ನೀಡುವ ಕಾರ್ಯಕ್ರಮವನ್ನು ಪ್ರಕಟಿಸಲಾಗಿತ್ತು. ಪೌಷ್ಟಿಕ ಅಂಶಗಳನ್ನು ಬೆಂಬಲಿಸುವ, ವಿತರಣೆ, ಆರೋಗ್ಯ ಪೋಷಿಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವತ್ತ ಗಮನರಿಸಿ ಉತ್ತಮ ಫಲಿತಾಂಶ ಪಡೆಯುವ,  ರೋಗಗಳಿಂದ ಹೊರಬರಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕ್ಷೇಮ ಮತ್ತು ಅಪೌಷ್ಟಿಕತೆ ನಿವಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.