Published on: May 4, 2023

ಮನ್ ಕಿ ಬಾತ್’ನ 100ನೇ ಸಂಚಿಕೆ

ಮನ್ ಕಿ ಬಾತ್’ನ 100ನೇ ಸಂಚಿಕೆ

ಸುದ್ದಿಯಲ್ಲಿ ಏಕಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಸಿದ್ಧ ಮನ್ ಕಿ ಬಾತ್’ನ 100ನೇ ಕಂತಿನ ವಿಶೇಷ ಭಾಷಣ ಅಕಾಶವಾಣಿಯಲ್ಲಿ ಪ್ರಸಾರ ವಾಯಿತು. ಮತ್ತು  ವಿಶೇಷವೆಂದರೆ ​​ ಯುಎಸ್​​ನ ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ ಗೊಂಡಿತು.

ಮುಖ್ಯಾಂಶಗಳು

  • ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ, ಜಿ20 ಅಧ್ಯಕ್ಷತೆವಹಿಸಿದ ಸುಸಂದರ್ಭದಲ್ಲಿ ಎಲ್ಲರು ಒಟ್ಟಾಗಿ ದೇಶದ ಅಭಿವೃದ್ದಿಯತ್ತ ಸಾಗೋಣ ಮತ್ತು ನವಭಾರತ ನಿರ್ಮಾಣ ಮಾಡೋಣ ಎಂದು ಪ್ರಧಾನಿ ಅವರು ದೇಶದ ಜನತೆಗೆ ಕರೆ ನೀಡಿದರು.
  • ‘ಮನ್‌ ಕಿ ಬಾತ್‌’ ವಿಶೇಷವೇನೆಂದರೆ, ಇದು ಜನರ ಕೊಡುಗೆಯನ್ನು ಗುರುತಿಸುವ ಹಾಗೂ ಅವರನ್ನು ದೇಶದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ವೇದಿಕೆಯೂ ಆಗಿದೆ. ಇದು ಈಗ ಭಾರತದ 23 ಭಾಷೆಗಳಲ್ಲಿಹಾಗೂ 11 ವಿದೇಶಿ ಭಾಷೆಗಳಲ್ಲಿಪ್ರಸಾರವಾಗುತ್ತಿದೆ.
  • ಈ 100 ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿ ಅವರು ಹಲವಾರು ವಿಭಿನ್ನ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹವಾಮಾನ, ಪರಿಸರ, ಸ್ವಚ್ಛತೆ, ಸಾಮಾಜಿಕ ಸಮಸ್ಯೆಗಳು, ದೇಶೀಯ ಕರಕುಶಲ ಕಲೆಗಳು, ಪರೀಕ್ಷೆಗಳು, ಸ್ವಚ್ಛ ಭಾರತ- ಸದೃಢ ಭಾರತ, ಬೇಟಿ ಬಚಾವೊ- ಬೇಟಿ ಪಢಾವೊ, ನೀರಿನ ಸಂರಕ್ಷಣೆ, ವೋಕಲ್‌ ಫಾರ್‌ ಲೋಕಲ್‌, ಆತ್ಮನಿರ್ಭರ ಭಾರತ, ಸಾಂಸ್ಕೃತಿಕ ವೈವಿಧ್ಯವನ್ನು ಸಂಭ್ರಮಿಸುವ ಏಕ ಭಾರತ- ಶ್ರೇಷ್ಠ ಭಾರತ, ಸುಗಮ್ಯ ಭಾರತ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಈ ಪಟ್ಟಿ ಒಳಗೊಂಡಿದೆ.

ಅರಿಯದ ಸಾಧಕರ ಪರಿಚಯ

  • ಆಸಕ್ತಿದಾಯಕ ಸಂಗತಿಯೆಂದರೆ, ಈ ಕಾರ್ಯಕ್ರಮವು ಕಣ್ಣಿಗೆ ಕಾಣದಂತೆ ತೆರೆಯ ಹಿಂದೆಯೇ ಉಳಿದುಬಿಡುವ ಹೀರೋಗಳ ಬಗ್ಗೆ ಪ್ರೇರಣಾದಾಯಕವಾದ ಕಥೆಗಳನ್ನು ಅನಾವರಣಗೊಳಿಸಿ, ಅಂಥವರನ್ನು ಪರಿಚಯಿಸುತ್ತದೆ. ಸ್ಫೂರ್ತಿಯುತ ಕೆಲಸಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿರುವ ಹಾಗೂ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡುತ್ತಿರುವ ಬೇರುಮಟ್ಟದ ಚಾಂಪಿಯನ್‌ ಗಳು ಮತ್ತು ಬದಲಾವಣೆಯ ಹರಿಕಾರರ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಕಾರ್ಯಕ್ರಮವು ನಮ್ಮ ಭವ್ಯವಾದ ದೇಶವನ್ನು ರೂಪಿಸಿರುವ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಧಾರೆಗಳನ್ನು ಪರಸ್ಪರ ಬೆಸೆಯಲು ಭೂಮಿಕೆಯನ್ನೂ ಒದಗಿಸುತ್ತದೆ.

ಹಿನ್ನೆಲೆ

  • 2014ರ ಅಕ್ಟೋಬರ್​ 3ರ ವಿಜಯದಶಮಿಯಿಂದ ಪ್ರಾರಂಭಿಸಲಾಗಿತ್ತು .
  • ಪ್ರತಿ ತಿಂಗಳ ಕೊನೇ ಭಾನುವಾರ ಪ್ರಧಾನಿ ಅವರು ಈ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ.
  • ಕಾರ್ಯಕ್ರಮವು ರಾಜಕೀಯೇತರವಾಗಿದ್ದು, ಆರೋಗ್ಯ, ಪರಿಸರ, ನೀರು ರಕ್ಷಣೆ, ಹವಾಮಾನ ವೈಪರೀತ್ಯ, ಸಾಮಾಜಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರ ಬಗ್ಗೆ ಜನರೊಂದಿಗೆ ಮೋದಿಯವರು ಮಾಹಿತಿ ಹಂಚಿಕೊಳ್ಳುತ್ತಾರೆ.
  • 2014ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಮೋದಿಯವರು ಒಮ್ಮೆಯೂ ಇದನ್ನು ತಪ್ಪಿಸದೆ ನಡೆಸಿಕೊಂಡು ಬಂದಿದ್ದು ವಿಶೇಷವಾಗಿದೆ.