Published on: October 13, 2022

ಮಹಾಕಾಲ ಲೋಕ ಕಾರಿಡಾರ್

ಮಹಾಕಾಲ ಲೋಕ ಕಾರಿಡಾರ್

ಸುದ್ದಿಯಲ್ಲಿ ಏಕಿದೆ?

ಜ್ಯೋತಿರ್ಲಿಂಗ ಕಾಶಿ ವಿಶ್ವನಾಥ ಮಂದಿರದ ಕಾರಿಡಾರ್‌ ಅಭಿವೃದ್ಧಿಪಡಿಸಿದಂತೆಯೇ ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲೇಶ್ವರ ದೇಗುಲ ಪ್ರಾಂಗಣ ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾಕಾಲ ಲೋಕ ಕಾರಿಡಾರ್‌ ಲೋಕಾರ್ಪಣೆ ಮಾಡಿದ್ದಾರೆ. ಇದು 900 ಮೀಟರ್‌ಗೂ ಅಧಿಕ ಉದ್ದವಿದೆ.

ಮುಖ್ಯಾಂಶಗಳು

  • ಇದು ಹಳೆಯ ರುದ್ರಸಾಗರ ಸರೋವರದ ಸುತ್ತ ಇದೆ. ಯೋಜನೆಯ ಭಾಗವಾಗಿ ರುದ್ರಸಾಗರ ಸರೋವರವನ್ನೂ ಅಭಿವೃದ್ಧಿಪಡಿಸಲಾಗಿದೆ ದೇಶದಲ್ಲಿಯೇ ಈ ರೀತಿಯ ಅತ್ಯಂತ ದೊಡ್ಡ ಕಾರಿಡಾರ್‌ ಎನ್ನಲಾಗಿದೆ
  • ಮಹಾಕಾಲೇಶ್ವರ ದೇಗುಲ ಕಾರಿಡಾರ್‌ ಅಭಿವೃದ್ಧಿಯು ರೂ. 866 ಕೋಟಿ ವೆಚ್ಚದ ಯೋಜನೆ. ಅದರ ಮೊದಲ ಹಂತ ‘ಮಹಾಕಾಲ ಲೋಕ’ವನ್ನು ರೂ. 316 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.
  • ಕಾರಿಡಾರ್‌ ನ ವಿಶೇಷತೆಗಳು: ಎರಡು ಭವ್ಯ ದ್ವಾರಗಳನ್ನು– ನಂದಿ ದ್ವಾರ ಮತ್ತು ಪಿನಾಕಿ ದ್ವಾರ– ನಿರ್ಮಿಸಲಾಗಿದೆ. ಇವು ಕಾರಿಡಾರ್‌ನ ಆರಂಭದಲ್ಲಿ ಇವೆ.
  • ಕಾರಿಡಾರ್ ಸುಮಾರು 108 ಕಲಾತ್ಮಕವಾಗಿ ಅಲಂಕೃತವಾದ ಸ್ತಂಭಗಳನ್ನು ಹೊಂದಿದೆ, ಇದು ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ಮಾಡಲ್ಪಟ್ಟಿದೆ, ಇದು ಶಿವ ಪುರಾಣದಕತೆ ಹೇಳುವ ಆನಂದ್ ತಾಂಡವ್ ಸ್ವರೂಪದ (ಶಿವನ ನೃತ್ಯ ರೂಪ) ಶಿವ ಮತ್ತು ಶಕ್ತಿ ದೇವತೆಯ 200 ಪ್ರತಿಮೆಗಳು ಭಿತ್ತಿಚಿತ್ರಗಳನ್ನು ಚಿತ್ರಿಸುತ್ತದೆ.
  • ಕ್ಷಿಪ್ರ ನದಿಯ ದಂಡೆಯಲ್ಲಿರುವ ರಾಮ ಘಾಟ್‌ ಅನ್ನು ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತದ ಯೋಜನೆಯ ಒಟ್ಟು ವೆಚ್ಚ ರೂ. 450 ಕೋಟಿ ಎಂದು ಅಂದಾಜಿಸಲಾಗಿದೆ.

ಗುರಿ 

  • ಒಂದು ರಾಷ್ಟ್ರವು ತನ್ನ ಯಶಸ್ಸಿನ ಮಾರ್ಗದಲ್ಲಿಸಾಗಲು ಮುಖ್ಯವಾದದ್ದು ಸಾಂಸ್ಕೃತಿಕ ಶ್ರೀಮಂತಿಕೆ. ಅದಕ್ಕೆ ಒತ್ತು ನೀಡಿ ಧಾರ್ಮಿಕ, ಪಾರಂಪರಿಕ ತಾಣಗಳ ಗತವೈಭವ ಮರುಳಿಸಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.