Published on: October 13, 2022

ಮಹಾತ್ಮ ಗಾಂಧಿ ವಸ್ತುಸಂಗ್ರಹಾಲಯ

ಮಹಾತ್ಮ ಗಾಂಧಿ ವಸ್ತುಸಂಗ್ರಹಾಲಯ

ಸುದ್ದಿಯಲ್ಲಿ ಏಕಿದೆ?

ಮಹಾತ್ಮಾ ಗಾಂಧಿಯವರ ಜೀವನ ಮತ್ತು ತತ್ವ ಪ್ರಸಾರಕ್ಕೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಯುಎಸ್‌ನ ಅಟ್ಲಾಂಟಿಕ್ ನಗರದಲ್ಲಿ ತೆರೆಯಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಕಲಾಕೃತಿಗಳು ಮತ್ತು ಡಿಜಿಟಲ್ ಡಿಸ್‌ಪ್ಲೇ ಪರದೆಗಳನ್ನು ಹಾಕಲಾಗಿದೆ. ಸಂದರ್ಶಕರು ಶಾಂತಿದೂತ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಘಟನಾವಳಿಗಳನ್ನು ವೀಕ್ಷಿಸಬಹುದಾಗಿದೆ.

ಮುಖ್ಯಾಂಶಗಳು

  • ನ್ಯೂಜೆರ್ಸಿ ಮೂಲದ ಗಾಂಧಿ ಸೊಸೈಟಿಯು ಆದಿತ್ಯ ಬಿರ್ಲಾ ಗ್ರೂಪ್‌ ಸಹಭಾಗಿತ್ವದಲ್ಲಿ ವಸ್ತುಸಂಗ್ರಹಾಲಯವನ್ನು ತೆರೆದಿದೆ. ಇದು ಯುಎಸ್‌ನಲ್ಲಿ ಭಾರತದ;ರಾಷ್ಟ್ರಪಿತ ಗಾಂಧೀಜಿ ಅವರಿಗೆ ಸಮರ್ಪಿಸಲಾದ ಮೊದಲ ವಸ್ತುಸಂಗ್ರಹಾಲಯವಾಗಿದೆ.
  • ಆಧುನಿಕ ಯುಗದ ಇಬ್ಬರು ಶ್ರೇಷ್ಠ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ ಹಾಗೂ ಮಾರ್ಟಿನ್‌ ಲೂಥರ್‌ ಕಿಂಗ್‌

ಅವರ ಜೀವನ ಮತ್ತು ಸಂದೇಶಗಳನ್ನು ಪ್ರಸಾರ ಮಾಡಲು ಮಾರ್ಟಿನ್ ಲೂಥರ್ ಕಿಂಗ್ ಫೌಂಡೇಶನ್‌ನ ಸಹಭಾಗಿತ್ವವನ್ನು ನಿರೀಕ್ಷಿಸಲಾಗಿದೆ ಎಂದು ವಸ್ತುಸಂಗ್ರಹಾಲಯದ ಪ್ರಕಟಣೆ ತಿಳಿಸಿದೆ.