Published on: October 26, 2021

ಮಹಿಳಾ ಸೇನಾಧಿಕಾರಿಗಳಿಗೆ ಕಾಯಂ ಆಯೋಗ

ಮಹಿಳಾ ಸೇನಾಧಿಕಾರಿಗಳಿಗೆ ಕಾಯಂ ಆಯೋಗ

ಸುದ್ಧಿಯಲ್ಲಿ ಏಕಿದೆ? ಮಹಿಳಾ ಸೇನಾಧಿಕಾರಿಗಳಿಗೆ ಕಾಯಂ ಆಯೋಗದ ಅರ್ಹತೆ ನೀಡುವ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. 71 ಮಹಿಳಾ ಅಧಿಕಾರಿಗಳ ಪೈಕಿ 39 ಮಂದಿಯನ್ನು ಶಾಶ್ವತ ಆಯೋಗಕ್ಕೆ ಪರಿಗಣಿಸುವಂತೆ ಅದು ನಿರ್ದೇಶಿಸಿದೆ.

ಏನಿದು ಕಾಯಂ ಅಥವಾ ಶಾಶ್ವತ ಆಯೋಗ?

  • ಶಾಶ್ವತ ಆಯೋಗ ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು. ಕಿರು ಸೇವಾ ಆಯೋಗವು 10 ವರ್ಷಗಳ ಅವಧಿಯದ್ದಾಗಿದೆ. ಕಾಯಂ ಆಯೋಗವನ್ನು ಬಿಡುವುದು ಅಥವಾ ಆಯ್ದುಕೊಳ್ಳುವುದು 10 ವರ್ಷದ ಅವಧಿ ಮುಕ್ತಾಯದ ವೇಳೆ ಇರುವ ಆಯ್ಕೆಯ ಅವಕಾಶವಾಗಿದೆ. ಕಾಯಂ ಆಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದರೆ ಅಧಿಕಾರಿಯು ನಾಲ್ಕು ವರ್ಷಗಳ ವಿಸ್ತರಣೆಯನ್ನು ಆಯ್ದುಕೊಳ್ಳಬಹುದಾಗಿದೆ.