Published on: June 7, 2024

ಮಾನವ ಕಳ್ಳಸಾಗಣೆ ವಿರೋಧಿ (AHT) ನೋಡಲ್ ಅಧಿಕಾರಿ

ಮಾನವ ಕಳ್ಳಸಾಗಣೆ ವಿರೋಧಿ (AHT) ನೋಡಲ್ ಅಧಿಕಾರಿ

ಸುದ್ದಿಯಲ್ಲಿ ಏಕಿದೆ? ರಾಜಸ್ಥಾನದ ಕಂಜರ್ ಸಮುದಾಯದಲ್ಲಿ ಸ್ಟಾಂಪ್ ಪೇಪರ್‌ಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡುವಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಖಚಿತಪಡಿಸಿದ ನಂತರ, ಮಾನವ ಕಳ್ಳಸಾಗಣೆ ವಿರೋಧಿ (AHT) ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ NHRC ರಾಜ್ಯಗಳಿಗೆ ನಿರ್ದೇಶಿಸಿದೆ.

ಮುಖ್ಯಾಂಶಗಳು

  • ಈ ಅಧಿಕಾರಿಗಳು ರಾಜ್ಯ ಕಾರ್ಯದರ್ಶಿ ಅಥವಾ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲಿಸ್ ದರ್ಜೆಗಿಂತ ಕೆಳಗಿನವರಾಗಿರಬಾರದು
  • ಜಿಲ್ಲಾ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳ (ಡೆಪ್ಯುಟಿ ಎಸ್ಪಿಗಿಂತ ಕಡಿಮೆ ದರ್ಜೆಯನ್ನು ಹೊಂದಿರದ ಅಧಿಕಾರಿಗಳ ನೇತೃತ್ವದಲ್ಲಿ) ಮೂಲಕ ಮಾನವ ಕಳ್ಳಸಾಗಣೆಯನ್ನು ಎದುರಿಸಲು ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಆದೇಶಿಸಲಾಗಿದೆ.

ಮಾನವ ಕಳ್ಳಸಾಗಣೆ ವ್ಯಾಖ್ಯಾನ

ವಿಶ್ವ ಸಂಸ್ಥೆಯ ಪ್ರಕಾರ ಮಾನವ ಕಳ್ಳಸಾಗಣೆಯು ನೇಮಕಾತಿ, ಸಾಗಣೆ, ವರ್ಗಾವಣೆ, ಆಶ್ರಯ, ಅಥವಾ ಒತ್ತಾಯ, ವಂಚನೆ, ಮೂಲಕ ಜನರನ್ನು ಬೇರೆ ಕಡೆ ಸಾಗಿಸುವುದು   ಅಥವಾ ಲಾಭಕ್ಕಾಗಿ ಅವರನ್ನು ಬಳಸಿಕೊಂಡು  ವಂಚಿಸುವುದು

ಸ್ಥಿತಿ: 2022 ರಲ್ಲಿ, ಭಾರತವು 2,250 ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ವರದಿ ಮಾಡಿದೆ

(NCRB).

ನಿಯಂತ್ರಣ: ‘ಪೊಲೀಸ್’ ರಾಜ್ಯದ ವಿಷಯವಾಗಿರುವುದರಿಂದ, ನೋಂದಣಿ, ಮಾನವ ಕಳ್ಳಸಾಗಣೆಯ ತನಿಖೆ ಮತ್ತು ತಡೆಗಟ್ಟುವಿಕೆ ಪ್ರಾಥಮಿಕವಾಗಿ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ

ಸಾಂವಿಧಾನಿಕ ನಿಬಂಧನೆಗಳು: ವಿಧಿ  23 ಮಾನವ ಕಳ್ಳಸಾಗಣೆಯನ್ನು ನಿಷೇಧಿಸುತ್ತದೆ

ವಿಧಿ  39(ಇ) ಮತ್ತು 39(ಎಫ್) ಆರ್ಥಿಕ ಅವಶ್ಯಕತೆಯಿಂದಾಗಿ ಸೂಕ್ತವಲ್ಲದ ಕೆಲಸಕ್ಕೆ ಯಾರನ್ನು ಬಲವಂತ ಮಾಡುವಂತಿಲ್ಲ  ಎಂದು ಆದೇಶಿಸುತ್ತದೆ

ಮಾನವ ಕಳ್ಳಸಾಗಣೆಯ ಕಾರಣಗಳು

ಆರ್ಥಿಕ: ಬಡತನ, ನಿರುದ್ಯೋಗ, ವಲಸೆ ಮತ್ತು  ಗುಣಮಟ್ಟದ ಶಿಕ್ಷಣದ ಪ್ರವೇಶ.

ರಾಜಕೀಯ: ರಾಜಕೀಯ ಅಸ್ಥಿರತೆ, ಯುದ್ಧ ಮತ್ತು ನೈಸರ್ಗಿಕ ವಿಕೋಪಗಳು ಇತ್ಯಾದಿ.

ಸಾಂಸ್ಕೃತಿಕ ಆಚರಣೆಗಳು: ಸಮಾಜದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಅಸಬಲೀಕರಣ, ಬಾಲ್ಯ ವಿವಾಹ, ಇತ್ಯಾದಿ.

ಮಾನವ ಕಳ್ಳಸಾಗಣೆ ವಿರುದ್ಧ ಉಪಕ್ರಮಗಳು

ಜಾಗತಿಕ: 2000 ರಲ್ಲಿ ಕಳ್ಳಸಾಗಾಣಿಕೆಯನ್ನು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು, ನಿಗ್ರಹಿಸಲು ಮತ್ತು ಶಿಕ್ಷಿಸಲು ಪ್ರೋಟೋಕಾಲ್ ಅನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ(UNGA ) ಅಳವಡಿಸಿಕೊಂಡಿದೆ

ಭಾರತ

ಶಾಸನಗಳು: ಅನೈತಿಕ ಕಳ್ಳಸಗಾನೆ ತಡೆ ಕಾಯಿದೆ, 1956

ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳು: ಗೃಹ ವ್ಯವಹಾರಗಳ ಸಚಿವಾಲಯ, ನಿರ್ಭಯಾ ನಿಧಿ ಅಡಿಯಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಹಣವನ್ನು ಒದಗಿಸುತ್ತದೆ

ಪ್ರತಿ ಜಿಲ್ಲೆಯಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಸ್ಥಾಪಿಸಲು/ಬಲಪಡಿಸಲು ನಿಧಿಯನ್ನು ಒದಗಿಸಲಾಗುತ್ತದೆ.