Published on: December 22, 2022

‘ಮಾನ್ಯತಾ ಶುಲ್ಕದ’ ಮೇಲೆ ಜಿಎಸಟಿ

‘ಮಾನ್ಯತಾ ಶುಲ್ಕದ’ ಮೇಲೆ ಜಿಎಸಟಿ

ಸುದ್ದಿಯಲ್ಲಿ ಏಕಿದೆ? ವಿಶ್ವವಿದ್ಯಾಲಯಗಳು ಕಾಲೇಜುಗಳಿಂದ ಸಂಗ್ರಹಿಸುವ ‘ಮಾನ್ಯತಾ ಶುಲ್ಕದ’ ಮೇಲೆ ಸರಕು ಹಾಗೂ ಸೇವಾ ತೆರಿಗೆ (ಗೂಡ್ಸ್‌ ಆ್ಯಂಡ್‌ ಸರ್ವೀಸಸ್‌ ಟ್ಯಾಕ್ಸ್‌ – ಜಿಎಸ್‌ಟಿ) ವಿಧಿಸಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ತೋಟಗಾರಿಕೆ, ಕೃಷಿ, ವಿಜ್ಞಾನ ಸೇರಿದಂತೆ 34 ವಿಶ್ವವಿದ್ಯಾಲಯಗಳಿವೆ. ಸೇವಾ ವಲಯ ವ್ಯಾಪ್ತಿಗೆ ಬರುವ ವಿದ್ಯಾಸಂಸ್ಥೆಗಳ ಮೇಲೂ ಜಿಎಸ್‌ಟಿ ವಿಧಿಸಿರುವುದನ್ನು ವಿಶ್ವವಿದ್ಯಾಲಯಗಳು ವಿರೋಧಿಸಿವೆ.
  • ಜಿಎಸ್‌ಟಿಗೂ ಮುನ್ನ ಇದ್ದ ಸೇವಾ ತೆರಿಗೆಯಲ್ಲಿ ವಿದ್ಯಾಸಂಸ್ಥೆಗಳಿಗೆ ವಿನಾಯಿತಿ ನೀಡಲಾಗಿತ್ತು. ಆದರೆ, ಜಿಎಸ್‌ಟಿ ಬಂದ ಮೇಲೆ ತೆರಿಗೆ ವಿಧಿಸಲು ಆರಂಭಿಸಿದೆ.
  • ವಿಶ್ವವಿದ್ಯಾಲಯ ಸೇವಾ ವಲಯ ವ್ಯಾಪ್ತಿಗೆ ಬರುವುದರಿಂದ ಲಾಭದ ಉದ್ದೇಶದಿಂದ ಶುಲ್ಕ ಸಂಗ್ರಹಿಸದೇ ಇರುವ ಕಾರಣ, ಪ್ರಸ್ತುತ ವಿವಿಗೆ ಪಾವತಿಸಬೇಕಾಗಿರುವ ಸೇವಾ ಶುಲ್ಕ, ಜಿಎಸ್‌ಟಿ ಮೊತ್ತ ಪಾವತಿಸುವುದು ಕಷ್ಟ ಎಂದಿದೆ.

ಮಾನ್ಯತಾ ಶುಲ್ಕ

ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಾವಿರಾರು ಸಂಯೋಜಿತ ಕಾಲೇಜುಗಳಿವೆ. ಪ್ರತಿ ವರ್ಷ ಈ ಕಾಲೇಜುಗಳು ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ಭೇಟಿ ನೀಡಿ ಅಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಆನಂತರ ಮಾನ್ಯತೆ ನವೀಕರಣಕ್ಕೆ ಶಿಫಾರಸು ಮಾಡಲಾಗುತ್ತದೆ. ಪ್ರತಿ ಕಾಲೇಜುಗಳಿಗೆ ಮಾನ್ಯತೆ ನವೀಕರಣಾ ಶುಲ್ಕ ನಿಗದಿ ಮಾಡಲಾಗುತ್ತದೆ. ಈ ಕಾಲೇಜುಗಳು ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಸಂಯೋಜನಾ ಶುಲ್ಕ ಪಾವತಿಸಬೇಕಿದೆ