Published on: April 22, 2023

ಮಿಜೋರಾಂ ಸಂತೋಷ ಭರಿತ ರಾಜ್ಯ

ಮಿಜೋರಾಂ ಸಂತೋಷ ಭರಿತ ರಾಜ್ಯ

ಸುದ್ದಿಯಲ್ಲಿ ಏಕಿದೆ? ಮಿಜೋರಾಂ ರಾಜ್ಯ ಭಾರತದಲ್ಲಿ ಹೆಚ್ಚು ಸಂತೋಷಭರಿತ ರಾಜ್ಯ ಎಂದು ವರದಿಯೊಂದು ಹೇಳಿದೆ. ಗುರುಗ್ರಾಮದ ಮ್ಯಾನೇಜ್ಮೆಂಟ್ ಡೆವೆಲಫ್ಮೆಂಟ್ ಇನ್ಸ್ಟಿಟ್ಯೂಟ್ನ ಸ್ಟ್ಯಾಟರ್ಜಿ ಪ್ರೊಪೇಸರ್ ರಾಜೇಶ್ ಕೆ ಪಿಳ್ಳಾ ನೀಯಾ ಅವರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿಯನ್ನು ಕಂಡುಕೊಂಡಿದ್ದಾರೆ.

ಮುಖ್ಯಾಂಶಗಳು

  • ಮಿಜೋರಾಂ ಶೇ.100ರಷ್ಟು ಸಾಕ್ಷರತೆ ಸಾಧಿಸಿದ ಭಾರತದ ಎರಡನೇ ರಾಜ್ಯವಾಗಿದೆ. ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ವಿದ್ಯಾರ್ಥಿಗಳ ಬೆಳವಣಿಗೆಗೆ ಅವಕಾಶ ನೀಡಲಾಗುತ್ತದೆ.
  • ಈ ಅಧ್ಯಯನವು ಎಲ್ಲ ರಾಜ್ಯಗಳನ್ನು ಅಧ್ಯಯನಕ್ಕೆ ತೆಗೆದುಕೊಂಡಿದ್ದು, ಮಿಜೋರಾಂನ ಸಂತೋಷ ಭರಿತ ಸೂಚ್ಯಂಕವು ಆರು ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕೌಟುಂಬಿಕ ಸಂಬಂಧಗಳು, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ದಾನ-ಧರ್ಮ, ಕೋವಿಡ್ 19 ನಂತರದ ಬದಲಾವಣೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಷಯವನ್ನೊಳಗೊಂಡಿರುವುದಾಗಿ ವರದಿ ತಿಳಿಸಿದೆ.
  • ಈ ಎಲ್ಲ ಸಂಗತಿಗಳ ಮೇಲೆ ಮಿಜೋರಾಂನಲ್ಲಿ ಸಕಾರಾತ್ಮಕ ಅಂಶಗಳು ಕಂಡು ಬಂದಿದ್ದರಿಂದ ಮಿಜೋರಾಂ ಹೆಚ್ಚು ಸಂತೋಷಭರಿತ ರಾಜ್ಯ ಎಂದು ಅಧ್ಯಯನ ಹೇಳಿದೆ.