Published on: March 23, 2023

ಮಿಥೆನಾಲ್ ಮಿಶ್ರಿತ ಇಂಧನ ಬಸ್‍ಗಳ ಸಂಚಾರ

ಮಿಥೆನಾಲ್ ಮಿಶ್ರಿತ ಇಂಧನ ಬಸ್‍ಗಳ ಸಂಚಾರ

ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಮೊದಲ ಮಿಥೆನಾಲ್ ಮಿಶ್ರಿತ ಇಂಧನ ಆಧಾರಿತ ಬಸ್‍ಗಳ ಸಂಚಾರವನ್ನು ಕರ್ನಾಟಕದ ಬಿಎಂಟಿಸಿ ಆರಂಭಿಸಿದೆ.

ಮುಖ್ಯಾಂಶಗಳು

  • ಪ್ರಾಯೋಗಿಕವಾಗಿ 20 ವಾಹನಗಳಿಗೆ ಈ ಇಂಧನ ಬಳಕೆ ಮಾಡಲಾಗಿದೆ.
  • ಈಗಿರುವ ಡೀಸೆಲ್ ಆಧಾರಿತ ಬಸ್‍ಗಳಲ್ಲಿ ಶೇ 15ರಷ್ಟು ಮಿಥೆನಾಲ್ ಮಿಶ್ರಣ ಮಾಡಿ ಸೇವೆಗೆ ಇಳಿಸಲಾಗಿದೆ.
  • ಮಿಥೆನಾಲ್ ಮಿಶ್ರಿತ ಇಂಧನವನ್ನು(ಡೀಸೆಲ್) ಭಾರತೀಯ ತೈಲ ನಿಗಮ(ಐಒಸಿ) ಪೂರೈಸಲಿದೆ’

ಸಹಯೋಗ: ಅಶೋಕ್ ಲೆಲ್ಯಾಂ ಡ್ ಸಹಯೋಗದಲ್ಲಿ ಪ್ರಯೋಗವನ್ನು ಬಿಎಂಟಿಸಿ ಮಾಡಿದೆ.

ಉದ್ದೇಶ

  • ಬಿಎಂಟಿಸಿಗೆ ಬರುವ ವರಮಾನದಲ್ಲಿ ಶೇ 80ರಷ್ಟು ಇಂಧನಕ್ಕೇ ವೆಚ್ಚವಾಗುತ್ತಿದೆ. ಮಿಥೆನಾಲ್ ಬಳಕೆ ಸಾಧ್ಯವಾದರೆ, ಈ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು.

ಪ್ರಯೋಜನಗಳು

  • ಮಿಥೆನಾಲ್ ಮಿಶ್ರಣದ ಪ್ರಯೋಗವು ಯಶಸ್ವಿಯಾದರೆ, ಆ ಇಂಧನ ವೆಚ್ಚ ಗಣನೀಯವಾಗಿ ಬಿಎಂಟಿಸಿಯು ಸಂಪೂರ್ಣವಾಗಿ ಈ ಇಂಧನಕ್ಕೆ ಬದಲಾಗಲು ಕನಿಷ್ಠ ಮೂರು ತಿಂಗಳು ಬೇಕಾಗಲಿದೆ.
  • ಇಂಧನದ ದಹನ ಕ್ರಿಯೆಯು ಸುಲಲಿತವಾಗಿ ನಡೆಯಲು ಮಿಥೆನಾಲ್ ನೆರವಾಗುತ್ತದೆ.
  • ಮಿಥೆನಾಲ್ ಬಳಕೆಯಿಂದ ವಾಹನದಿಂದ ಹೊರಡುವ ಹೊಗೆ ಮತ್ತು ಇಂಗಾಲದ ಡೈಆಕ್ಸೈ ಡ್ ಪ್ರಮಾಣ ಕಡಿಮೆ ಆಗುತ್ತದೆ, ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ.
  • ಕಡಿಮೆ ವೆಚ್ಚ ಮತ್ತು ಪರಿಸರ ಸ್ನೇಹಿಯೂ ಆಗಿದೆ.