Published on: July 5, 2022

ಮಿದುಳಿನ ಕಾಯಿಲೆ: ಮುನ್ಸೂಚನೆಯ ಜಿಪಿಯು

ಮಿದುಳಿನ ಕಾಯಿಲೆ: ಮುನ್ಸೂಚನೆಯ ಜಿಪಿಯು

ಸುದ್ದಿಯಲ್ಲಿ ಏಕಿದೆ?

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸೆಂಟರ್‌ ಫಾರ್‌ ನ್ಯೂರೋ ಸೈನ್ಸ್‌ ವಿಭಾಗದ ಸಂಶೋಧಕರು ಜಿಪಿಯು (ಗ್ರಾಫಿಕ್‌ ಪ್ರೊಸೆಸಿಂಗ್‌ ಯುನಿಟ್‌) ಆಧಾರಿತ ‘ಮೆಷಿನ್‌ ಲರ್ನಿಂಗ್ ಅಲ್ಗಾರಿದಮ್‌’ ಹೊಸದಾಗಿ ಅಭಿವೃದ್ಧಿಪಡಿಸಿದ್ದಾರೆ

ಮುಖ್ಯಾಂಶಗಳು

  • ಮಿದುಳಿನಲ್ಲಿ ಪ್ರತಿ ಸೆಕೆಂಡಿಗೆ ಕೋಟಿಗಟ್ಟಲೆ ನರಕೋಶಗಳು ಮಿಂಚಿನಂತೆ ಬೆಳಕನ್ನು ಹೊಮ್ಮಿಸುತ್ತವೆ. ಇದರಿಂದಾಗಿಯೇ ನರಕೋಶಗಳಲ್ಲಿ ವಿದ್ಯುತ್‌ ಸಂಚಲನವಾಗುತ್ತದೆ. ಮಿದುಳಿನ ಒಂದು ತುದಿಯಿಂದ ಮತ್ತೊಂದು ತುದಿಗೆ ನಿರಂತರವಾಗಿ ವಿದ್ಯುತ್‌ ಪ್ರವಾಹ ಸಾಗುತ್ತಲೇ ಇರಬೇಕು
  • ‘ಆಕ್ಸಾನ್‌’ ಎಂದು ಕರೆಯಲಾಗುವ ಸಂಪರ್ಕದ ಕೇಬಲ್‌ಗಳ ಮೂಲಕವೇ ವಿದ್ಯುತ್‌ ಪ್ರವಹಿಸುತ್ತದೆ. ಮಿದುಳಿನ ಕಾರ್ಯನಿರ್ವಹಣೆಯ ಲೆಕ್ಕ (ಕಂಪ್ಯುಟೇಷನ್‌) ಹಾಕಲು ಈ ಸಂಪರ್ಕ ಅತ್ಯಗತ್ಯ. ಮಿದುಳಿನ ವರ್ತನೆಯನ್ನು ಅನಾವರಣಗೊಳಿಸಲು, ಅರ್ಥೈಸಲು ಈ ಲೆಕ್ಕಾಚಾರ ಅಗತ್ಯ.
  • ಕನೆಕ್ಟೋಮ್‌’ ಅಂದರೆ, ಮಿದುಳಿನಲ್ಲಿ ನರಗಳ ಸಂಪರ್ಕ ಜಾಲದ ವಿಸ್ತೃತ ನಕಾಶೆ ಅಥವಾ ವೈರಿಂಗ್‌ ಚಿತ್ರ ಎನ್ನಬಹುದು. ಪ್ರತಿಯೊಂದು ನರವೂ ಪರಸ್ಪರ ಸಂವಹನ ನಡೆಸುತ್ತವೆ. ಕನೆಕ್ಟೋಮ್‌ ಬಳಸಿ ಅಲ್ಜಮೇರ್‌ ರೋಗಿಯ ವರ್ತನೆ ಸ್ಪಷ್ಟವಾಗಿ ಗೋಚರಿಸುವುದಕ್ಕೂ ಮೊದಲೇ ಮಿದುಳಿನ ನರವ್ಯೂಹ ಕ್ಷೀಣಿಸುವುದು ಅಥವಾ ಮುದುಡುವುದರ ಲಕ್ಷಣಗಳನ್ನು ಗುರುತಿಸಬಹುದು.
  • ಸಂಸ್ಥೆಯು ಅಭಿವೃದ್ಧಿಪಡಿಸಿರುವ ಅಲ್ಗಾರಿದಮ್‌ ವ್ಯವಸ್ಥೆಯು (ರೆಗ್ಯುಲರೈಸ್ಡ್‌, ಆಕ್ಸಲರೇಟೆಡ್‌, ಲೀನಿಯರ್‌ ಫಾಸಿಕಲ್‌ ಇವಾಲ್ಯು ವೇಷನ್‌ ಅಥವಾ ರಿಯಲ್‌ ಲೈಫ್‌ ) ಡಿಫ್ಯೂಷನ್‌ ಮ್ಯಾಗ್ನೆಟಿಕ್ ರೆಸೊನಾನ್ಸ್‌ ಇಮೇಜಿಂಗ್‌ನಿಂದ (ಡಿ ಎಂಆರ್‌ಐ) ಮಾನವ ಮಿದುಳನ್ನು ಸ್ಕ್ಯಾನ್‌ ಮಾಡಿ ಸೃಷ್ಟಿಸುವ ಅಗಾಧ ಪ್ರಮಾಣದ ದತ್ತಾಂಶವನ್ನು ಅತಿ ವೇಗದಲ್ಲಿ ವಿಶೇಷಣೆ ಮಾಡುತ್ತದೆ. ಈಗ ಚಾಲ್ತಿಯಲ್ಲಿರುವ ಅಲ್ಗಾರಿದಮ್‌ಗಿಂತ 150 ಪಟ್ಟು ವೇಗದಲ್ಲಿ ದತ್ತಾಂಶವನ್ನು ಮೌಲ್ಯ ಮಾಪನ ಮಾಡುವ ಸಾಮರ್ಥ್ಯ ಹೊಂದಿದೆ.
  • ಅಷ್ಟೇ ಅಲ್ಲ ಹಳೇ ವ್ಯವಸ್ಥೆಯಲ್ಲಿ ದತ್ತಾಂಶವನ್ನು ವಿಶ್ಲೇಷಿಸಿ ಮಾಹಿತಿ ಸಂಗ್ರಹಿಸಲು ಹಲವು ಗಂಟೆ ಅಥವಾ ಒಂದು ದಿನವೇ ಬೇಕಾಗುತ್ತಿತ್ತು. ಆ ಕೆಲಸವನ್ನು ಒಂದು ಸೆಕೆಂಡಿನಲ್ಲಿ ಮಾಡಬಹುದಾಗಿದೆ.   ಎಂಆರ್‌ಐನಲ್ಲಿ ಕ್ರಾಂತಿಕಾರಿ ಅಲ್ಗಾರಿದಮ್‌ ಅಭಿವೃದ್ಧಿ ಮಿದುಳಿನ ವರ್ತನೆಯಿಂದ ಮೊದಲೇ ಕಾಯಿಲೆ ಪತ್ತೆ, 200 ವ್ಯಕ್ತಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಉದ್ದೇಶ

  • ಇದರಿಂದ ವಿಜ್ಞಾನಿಗಳು ಮಿದುಳಿನ ವಿವಿಧ ಭಾಗಗಳ ನಡುವಿನ ಸಂಪರ್ಕಗಳನ್ನು ಹೆಚ್ಚು ತರ್ಕಬದ್ಧವಾಗಿ ಅರ್ಥೈಸಿಕೊಳ್ಳುವುದರ ಜತೆ ಮುಂದೇನಾಗಬಹುದು ಎಂಬುದನ್ನು ಊಹಿಸಲೂ ಅಥವಾ ಭವಿಷ್ಯವನ್ನು ನುಡಿಯಲು ಸಾಧ್ಯವಾಗು ತ್ತದೆ. ಈ ಅಧ್ಯಯನ ‘ನೇಚರ್‌ ಕಂಪ್ಯೂಟೇಷನಲ್‌ ಸೈನ್ಸ್‌ ಜರ್ನಲ್‌’ನಲ್ಲಿ ಪ್ರಕಟವಾಗಿದೆ.