Published on: January 12, 2022
‘ಮಿಷನ್ ಅಮಾನತ್’
‘ಮಿಷನ್ ಅಮಾನತ್’
ಸುದ್ಧಿಯಲ್ಲಿ ಏಕಿದೆ ? ಪಶ್ಚಿಮ ರೈಲ್ವೆಯು ಆರ್ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನು ಪ್ರಯಾಣಿಕರಿಗಾಗಿ ಜಾರಿಗೆ ತಂದಿದೆ.
ಮುಖ್ಯಾಂಶಗಳು
- ಈ ಹೊಸ ಉಪಕ್ರಮದ ಅಡಿಯಲ್ಲಿ, ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಮರಳಿ ಪಡೆಯಬಹುದಾಗಿದೆ. ಇನ್ಮುಂದೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅವರ ಲಗೇಜ್ ಬಗ್ಗೆ ಕಣ್ಣಿಡಲಿದೆ.
- ಮಿಷನ್ ಅಮಾನತ್ ಅಡಿಯಲ್ಲಿ ಕಳೆದು ಹೋದ ಸರಂಜಾಮುಗಳ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ಪಶ್ಚಿಮ ರೈಲ್ವೆಯ ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾಗುತ್ತದೆ.
- ಪ್ರಯಾಣಿಕರು ಮಿಷನ್ ಅಮಾನತ್-ಆರ್ಪಿಎಫ್ ವೆಬ್ಸೈಟ್ ನ (http://wr.indianrailways.gov.in) ಗೆ ಪ್ರಯಾಣಿಕರು ಭೇಟಿ ನೀಡಿ, ಅಲ್ಲಿ ಪೋಸ್ಟ್ ಮಾಡಲಾದ ಲಗೇಜ್ ಫೋಟೋಗಳ ಜೊತೆಗೆ ಪರಿಶೀಲನೆ ಮಾಡಿ, ಹಿಂಪಡೆಯಬಹುದಾಗಿದೆ.
2.58 ಕೋಟಿ ಮೌಲ್ಯದ ಸರಕು ಪ್ರಯಾಣಿಕರಿಗೆ ವಾಪಸ್
- 2021 ರ ಜನವರಿಯಿಂದ ಡಿಸೆಂಬರ್ ವರೆಗೆ ಪಶ್ಚಿಮ ರೈಲ್ವೆ ವಲಯ ಒಟ್ಟು 1,317 ರೈಲ್ವೆ ಪ್ರಯಾಣಿಕರಿಗೆ ಸೇರಿದ್ದ 2.58 ಕೋಟಿ ರೂಪಾಯಿ ಮೌಲ್ಯದ ಕಳೆದು ಹೋದ ಲಗೇಜ್ ಗಳನ್ನು ಹಿಂದಿರುಗಿಸಿದೆ. ರೈಲ್ವೆ ಅಧಿಕಾರಿಗಳು ಲಗೇಜ್ ಗಳನ್ನು ಕಳೆದುಕೊಂಡ ಮಾಲೀಕರಿಂದ ಸರಿಯಾದ ಮಾಹಿತಿ ಪಡೆದ ಕೊಂಡ ಬಳಿಕವಷ್ಟೇ ಬ್ಯಾಗುಗಳನ್ನು ವಾಪಸ್ ನೀಡುತ್ತಾರೆ.