Published on: June 13, 2022

‘ಮಿಸ್ಟರ್ ಕಬಿನಿ’

‘ಮಿಸ್ಟರ್ ಕಬಿನಿ’

ಸುದ್ದಿಯಲ್ಲಿ ಏಕಿದೆ?

ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ.

ಮುಖ್ಯಾಂಶಗಳು

  • ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ. ಸುಮಾರು 4 ಅಡಿಗೂ ಉದ್ದದ ನೀಳ ದಂತ, ಮೂಲಕವೇ ಪ್ರಾಣಿಪ್ರಿಯರ ಮನಗೆದ್ದಿತ್ತು.
  • ದಕ್ಷಿಣ ಏಷ್ಯಾದಲ್ಲಿಯೇ ಅತಿ ಉದ್ದವಾದ ದಂತ ಹೊಂದಿದ್ದ ‘ಭೋಗೇಶ್ವರ’ನನ್ನು ಆನೆಗಳ ಸಂರಕ್ಷಣೆಗೆ ಐಕಾನಿಕ್‌ ಆಗಿ ಬಳಕೆ ಮಾಡಲು ಹಾಗೂ ಇದರ ಉದ್ದವಾದ ದಂತವನ್ನು ಸಂರಕ್ಷಿಸಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ
  • ಈ ಆನೆಯ ಒಂದು ದಂತ 2.54 ಮೀಟರ್‌ (8 ಅಡಿ), ಇನ್ನೊಂದು ದಂತ 2.34 ಮೀಟರ್‌ (7.5 ಅಡಿ) ಉದ್ದವಿದೆ. ಸಾಮಾನ್ಯವಾಗಿ ಇಷ್ಟು ಉದ್ದದ ದಂತವಿರುವ ಆನೆ ಈವರೆಗೆ ದಕ್ಷಿಣ ಏಷ್ಯಾದಲ್ಲಿ ಕಂಡುಬಂದಿಲ್ಲ. ಈ ಕಾರಣಕ್ಕಾಗಿಯೇ ಭೋಗೇಶ್ವರ ಬಹು ಪ್ರಸಿದ್ಧಿ ಪಡೆದಿದೆ.