Published on: December 21, 2021

ಮುಕ್ತ ವ್ಯಾಪಾರ ಒಪ್ಪಂದ

ಮುಕ್ತ ವ್ಯಾಪಾರ ಒಪ್ಪಂದ

ಸುದ್ಧಿಯಲ್ಲಿ ಏಕಿದೆ? ಭಾರತ ಮತ್ತು ತೈವಾನ್‌ ದ್ವಿಪಕ್ಷೀಯವಾಗಿ ಆರ್ಥಿಕ ಒಪ್ಪಂದಕ್ಕೆ ಮಾತುಕತೆ ನಡೆಸಲಿವೆ. ಉಭಯ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆಯನ್ನು ಆರಂಭಿಸಿವೆ.

ದ್ವಿಪಕ್ಷೀಯ ಆರ್ಥಿಕ ಒಪ್ಪಂದ:

  • ಭಾರತ ಮತ್ತು ತೈವಾನ್‌ ದ್ವಿಪಕ್ಷೀಯವಾಗಿ ಆರ್ಥಿಕ ಒಪ್ಪಂದಕ್ಕೆ ಮಾತುಕತೆ ನಡೆಸಲಿವೆ. ಜತೆಗೆ ತೈವಾನ್‌ ಮೂಲದ ಸೆಮಿಕಂಡಕ್ಟರ್‌ ಉತ್ಪಾದನಾ ವಲಯದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಕೂಡ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ಮಹತ್ವವೇನು?

  • ತೈವಾನ್‌ ಕಂಪನಿಗಳು ಅಮೆರಿಕದಲ್ಲಿ ಬೃಹತ್‌ ಸೆಮಿಕಂಡಕ್ಟರ್‌ ಕಾರ್ಖಾನೆಯನ್ನು ಸ್ಥಾಪಿಸಿವೆ. ಇದಕ್ಕಾಗಿ ವಿಶೇಷ ಒಪ್ಪಂದವನ್ನು ಮಾಡಿಕೊಂಡಿವೆ. ಒಂದು ವೇಳೆ ಭಾರತವೂ ಇಂಥ ಒಪ್ಪಂದ ಮಾಡಿಕೊಳ್ಳುವಲ್ಲಿ ಸಫಲವಾದರೆ, ಅಮೆರಿಕದ ನಂತರ ಎರಡನೇ ರಾಷ್ಟ್ರವಾಗಿ ಭಾರತದಲ್ಲಿ ತೈವಾನಿನ ಬೃಹತ್‌ ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ ಅಸ್ತಿತ್ವಕ್ಕೆ ಬರಲಿದೆ.
  • ಭಾರತ ಸರಕಾರ ಈಗಾಗಲೇ ತೈವಾನ್‌ ಸೆಮಿಕಂಡಕ್ಟರ್‌ ಮಾನ್ಯುಫಾಕ್ಚರಿಂಗ್‌ ಕಂಪನಿ (ಟಿಎಸ್‌ಎಂಸಿ) ಮತ್ತು ಯುನೈಟೆಡ್‌ ಮೈಕ್ರೊ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ (ಯುಎಂಸಿ) ಮತ್ತು ಯುನೈಟೆಡ್‌ ಮೈಕ್ರೊ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ (ಯುಎಂಸಿ) ಜತೆಗೆ ಮಾತುಕತೆ ನಡೆಸುತ್ತಿದೆ. ಭಾರತದಲ್ಲಿ ಆಟೊಮೊಬೈಲ್‌, ಎಲೆಕ್ಟ್ರಾನಿಕ್ಸ್‌ ವಲಯದ ಕಂಪನಿಗಳಿಗೆ ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆ ಹೆಚ್ಚುತ್ತಿದೆ. ಇದನ್ನು ಶಾಶ್ವತವಾಗಿ ಬಗೆಹರಿಸಲು ಒಪ್ಪಂದ ಸಹಕಾರಿಯಾಗಲಿದೆ.

ಭಾರತ ತೈವಾನ್ ಸಂಬಂಧ

  • ಭಾರತದಲ್ಲಿ 2018ರ ಅಂತ್ಯದ ವೇಳೆಗೆ ತೈವಾನ್‌ ಮೂಲದ 106 ಕಂಪನಿಗಳು ಅಸ್ತಿತ್ವದಲ್ಲಿವೆ. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ವೈದ್ಯಕೀಯ ಸಲಕರಣೆ, ಆಟೊಮೊಬೈಲ್‌ ಬಿಡಿಭಾಗಗಳು, ಯಂತ್ರೋಪಕರಣಗಳು, ಉಕ್ಕು, ಎಲೆಕ್ಟ್ರಾನಿಕ್ಸ್‌, ನಿರ್ಮಾಣ, ಎಂಜಿನಿಯರಿಂಗ್‌, ಹಣಕಾಸು ಸೇವಾ ವಲಯದಲ್ಲಿ 1.5 ಶತಕೋಟಿ ಡಾಲರ್‌ ಹೂಡಿಕೆ ಮಾಡಿವೆ. ಭಾರತದ 2,800 ವಿದ್ಯಾರ್ಥಿಗಳು ತೈವಾನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.